ಬಜರಂಗದಳ ನಿಷೇಧಕ್ಕೆ ಕೇಂದ್ರದ ಸಮ್ಮತಿ ಅಗತ್ಯ: ನಡ್ಡಾ
Team Udayavani, May 6, 2023, 8:04 AM IST
ಯಲಬುರ್ಗಾ: ರಾಜ್ಯದಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬಂದರೆ ಬಜರಂಗ ದಳ ಸಂಘಟನೆ ನಿಷೇಧ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ನಿಷೇಧಕ್ಕೆ ಕೇಂದ್ರದ ಗೃಹ ಸಚಿವರ ಅನುಮತಿ ಬೇಕು. ಇಷ್ಟು ಸಾಮಾನ್ಯ ಪ್ರಜ್ಞೆ ಕಾಂಗ್ರೆಸ್ಸಿನವರಿಗೆ ಇಲ್ಲ. ಇದು ಅಸಾಧ್ಯವಾದ ಮಾತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಕುಕನೂರಿನಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾ ಡಿದ ಅವರು, ಕಾಂಗ್ರೆಸ್‌ನವರು ಈ ಹಿಂದೆ ಶ್ರೀರಾಮ ಚಂದ್ರನಿಗೆ ಬೀಗ ಹಾಕಿದ್ದರು. ಈಗ ಬಜರಂಗ ದಳಕ್ಕೆ ಬೀಗ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಬಜರಂಗ ದಳವನ್ನು ಪಿಎಫ್‌ಐ ಜತೆ ಹೋಲಿಸುತ್ತಿದ್ದಾರೆ. ಪಿಎಫ್‌ಐ ರಾಷ್ಟ್ರದ್ರೋಹಿ ಸಂಘಟನೆ. ಅದನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ನಿಷೇಧಿ ಸಿದೆ. ಆದರೆ ಕಾಂಗ್ರೆಸ್ ಆಡ ಳಿತದಲ್ಲಿ ದೇಶದ್ರೋಹಿ ಪಿಎಫ್‌ಐ ಮೇಲಿನ 175 ಕೇಸ್‌ಗಳನ್ನು ಖುಲಾಸೆ ಮಾಡಿದ್ದರು. ಈಗ ಕಾಂಗ್ರೆಸ್‌ನವರು ಪಿಎಫ್‌ಐ ನಿಷೇಧ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ದೇವರ ಹೆಸರಿನಲ್ಲಿರುವ ಸಂಘಟನೆಗಳು ಮಾಡುವ ಕುಕೃತ್ಯಗಳು ಹಾಗೂ ಅದರಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಅಂತಹ ಸಂಘಟನೆಗಳನ್ನು ನಿಷೇಧಿಸುವುದರಲ್ಲಿ ತಪ್ಪೇನಿದೆ? ದೇವರ ಹೆಸರಿಟ್ಟುಕೊಳ್ಳುವ ಸಂಘಟನೆಗಳು ಮಾಡಿದ್ದೆಲ್ಲವನ್ನು ನೋಡಿಕೊಂಡು, ಸಹಿಸಿಕೊಂಡು ಇರಬೇಕೇ ?
-ಕನ್ಹಯ್ಯಕುಮಾರ್ , ಕಾಂಗ್ರೆಸ್ ಮುಖಂಡ
ಬಜರಂಗದಳ ನಿಷೇಧಿಸುವ ಅಧಿಕಾರ ರಾಜ್ಯಕ್ಕಿಲ್ಲ: ಸಿಎಂ
ಕಲಘಟಗಿ: ಕಾಂಗ್ರೆಸ್‌ನವರು ಎಸ್‌ಡಿಪಿಐ-ಪಿಎಫ್‌ಐ ಜತೆ ಬಜರಂಗದಳವನ್ನೂ ನಿಷೇಧಿಸುವುದಾಗಿ ಹೇಳಿದ್ದಾರೆ. ಬಜರಂಗದಳ ನಿಷೇಧ ಮಾಡುವ ಅ ಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಬಜರಂಗದಳ ದೇಶಾದ್ಯಂತ ಇರುವ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರಕಾರದ ಅವ ಧಿಯಲ್ಲಿ ತುಷ್ಟೀಕರಣ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ರೈತನ ದುಃಸ್ಥಿತಿಯನ್ನು ಕೇಳುವವರಿರಲಿಲ್ಲ. ದುಡಿಯುವ ವರ್ಗ ನಿರಾಶರಾಗಿದ್ದರು. ವಿದ್ಯಾರ್ಥಿಗಳಿಗೆ ಕೆಲಸ ಸಿಗುವ ಭರವಸೆ ಇರಲಿಲ್ಲ. ಇವರು ಮಾತ್ರ ಭಾಗ್ಯದ ಮೇಲೆ ಭಾಗ್ಯ ಕೊಡುತ್ತ ಬಂದಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಬಿಜೆಪಿಗೆ ಬೆಂಬಲ ದೊರೆಯುತ್ತಿದೆ. ಸ್ವಾತಂತ್ರÂ ಬಂದಾಗಿನಿಂದಲೂ ರೇಷನ್ ಕೊಡಲಾಗುತ್ತಿದೆ. ಈಗ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಅಂತ ಹೇಳುತ್ತಿದ್ದಾರೆ. ಮೋದಿ ಅಕ್ಕಿಗೆ ಸಿದ್ದರಾಮಯ್ಯ ನೀಡಿದ್ದು ಖಾಲಿ ಚೀಲ ಮಾತ್ರ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thrissur: ಹೊಸ ವರ್ಷಕ್ಕೆ ವಿಶ್ ಮಾಡದ್ದಕ್ಕೆ ಯುವಕನಿಗೆ 24 ಬಾರಿ ಚೂರಿ ಇರಿತ
Mumbai: ಹೊಸ ವರ್ಷದ ಮುನ್ನಾದಿನ 17,800 ವಾಹನ ಚಾಲಕರಿಗೆ ದಂಡ, 89 ಲಕ್ಷ ರೂ. ಸಂಗ್ರಹ
Delhi: ಕೇಜ್ರಿವಾಲ್ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ
2025 ‘ಸುಧಾರಣೆಗಳ ವರ್ಷ’ಎಂದು ಘೋಷಣೆ ಮಾಡಿದ ರಕ್ಷಣ ಸಚಿವಾಲಯ
Video: ಚಿಂದಿ ಆಯುವ ಮಕ್ಕಳ ಕೈಯಲ್ಲಿ 500 ರ ಕಂತೆ ಕಂತೆ ನೋಟು… ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thrissur: ಹೊಸ ವರ್ಷಕ್ಕೆ ವಿಶ್ ಮಾಡದ್ದಕ್ಕೆ ಯುವಕನಿಗೆ 24 ಬಾರಿ ಚೂರಿ ಇರಿತ
Contractor Case: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪ್ರಶ್ನೆಯೇ ಉದ್ಭವಿಸಲ್ಲ: ಸಿಎಂ
Murdeshwar:ಅಶುಭ- ಪ್ರವಾಸಿಗರಿಲ್ಲದೆ ಮುರ್ಡೇಶ್ವರ ಕಿನಾರೆ ಭಣ ಭಣ!
KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್ ನಗು
Mumbai: ಹೊಸ ವರ್ಷದ ಮುನ್ನಾದಿನ 17,800 ವಾಹನ ಚಾಲಕರಿಗೆ ದಂಡ, 89 ಲಕ್ಷ ರೂ. ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.