![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 8, 2022, 6:01 PM IST
ನವದೆಹಲಿ: 2ನೇ ಕೋವಿಡ್ ಅಲೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಇಟ್ಟ ತಪ್ಪು ಹೆಜ್ಜೆಗಳಿಂದ ಚುನಾವಣಾ ಆಯೋಗ ಕಲಿತಿದ್ದು, ಪಂಚರಾಜ್ಯಗಳಲ್ಲಿ ಜನವರಿ 15 ರವರೆಗೆ ಚುನಾವಣಾ ರ‍್ಯಾಲಿಗಳನ್ನು ನಿಷೇಧಿಸಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ವೇಗ ಪಡೆದಿರುವ ಹಿನ್ನಲೆಯಲ್ಲಿ ಐದು ರಾಜ್ಯಗಳ ಚುನಾವಣೆಗಳಿಗೆ ಭಾರತದ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು,ಜನವರಿ 15 ರವರೆಗೆ ಎಲ್ಲಾ ರೋಡ್ ಶೋಗಳು ಮತ್ತು ಭೌತಿಕ ರ‍್ಯಾಲಿಗಳನ್ನು ನಿಷೇಧಿಸುವ ಅಭೂತಪೂರ್ವ ಕ್ರಮವನ್ನು ತೆಗೆದುಕೊಂಡಿದೆ.
ರ‍್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಲು ಅನುಮತಿ ನೀಡುವ ಕುರಿತು ಪರಿಶೀಲನೆಯನ್ನು ಜನವರಿ 15 ರ ನಂತರ ಮಾಡಲಾಗುವುದು ಏಕೆಂದರೆ ಪರಿಸ್ಥಿತಿಯು ಕ್ರಿಯಾತ್ಮಕವಾಗಿದ್ದು, ಸಾಂಕ್ರಾಮಿಕ ರೋಗವು ವೇಗ ಪಡೆದು ಕೊಳ್ಳುತ್ತದೆಯೋ ಅಥವಾ ಕ್ಷೀಣಿಸುತ್ತದೆಯೋ ಎಂದು ನಮಗೆ ತಿಳಿದಿಲ್ಲ,ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಚುನಾವಣಾ ದಿನಾಂಕಗಳನ್ನು ಘೋಷಿಸುವ ವೇಳೆ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಡಿಜಿಟಲ್ ಪ್ರಚಾರದ ಅಂಶಕ್ಕೆ ಖರ್ಚು ಮಿತಿಗಳನ್ನು ಹೆಚ್ಚಿಸಲಾಗಿದೆ ಮತ್ತು ಭೌತಿಕ ಪ್ರಚಾರಕ್ಕಿಂತ ವರ್ಚುವಲ್ ಮತ್ತು ಮೊಬೈಲ್ ಮೋಡ್‌ನಲ್ಲಿ ಪ್ರಚಾರ ನಡೆಸಲು ಪಕ್ಷಗಳಿಗೆ ಸಲಹೆ ನೀಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ವೀಕ್ಷಕರು ಇದರ ಮೇಲ್ವಿಚಾರಣೆ ನಡೆಸುತ್ತಾರೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಪಶ್ಚಿಮ ಯುಪಿಯಿಂದ ಪೂರ್ವ ಯುಪಿ ವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರಾಖಂಡ್, ಗೋವಾ ಮತ್ತು ಪಂಜಾಬ್ ರಾಜ್ಯಗಳಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಎಲ್ಲಾ ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಮಾರ್ಚ್ 10 ರಂದು ಪ್ರಕಟವಾಗಲಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.