ಚಾರ್ಲ್ಸ್ ಪಟ್ಟಾಭಿಷೇಕಕ್ಕೆ ಬೆಂಗಳೂರಿನ ವೈದ್ಯಗೆ ಆಹ್ವಾನ
ಮುಂದಿನ ಮಂಗಳವಾರ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಕಾರ್ಯಕ್ರಮ: ಜಗತ್ತಿನ ಆಯ್ದ 2,200 ಮಂದಿ ವಿಶೇಷ ಗಣ್ಯರ ಪೈಕಿ ಭಾರತೀಯರಿಗೆ ಆದ್ಯತೆ
Team Udayavani, May 3, 2023, 7:27 AM IST
ಲಂಡನ್/ಕೋಲ್ಕತಾ: ಬ್ರಿಟನ್ ರಾಜಮನೆತನದ ದೊರೆಯಾಗಿ ಮೂರನೇ ಚಾರ್ಲ್ಸ್ ಅವರಿಗೆ ಮುಂದಿನ ಮಂಗಳವಾರ (ಮೇ 6) ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಪಟ್ಟಾಭಿಷೇಕ ನಡೆಯಲಿದೆ. ಅದಕ್ಕಾಗಿ ಭಾರತ ಮತ್ತು ಜಗತ್ತಿನ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 2,200 ಮಂದಿಗೆ ವಿಶೇಷ ಆಹ್ವಾನಿಸಲಾಗಿದೆ. ಈ ಪೈಕಿ ಬೆಂಗಳೂರಿನ ಸಮನೇತನಹಳ್ಳಿಯಲ್ಲಿ ಇರುವ ಡಾ. ಇಸಾಕ್ ಮಥಾಯಿ ಅವರಿಗೆ ಕೂಡ ಆಹ್ವಾನ ಲಭಿಸಿದ್ದು, ಈಗಾಗಲೇ ಪತ್ನಿ ಸುಜ ಜತೆಗೆ ಲಂಡನ್‌ಗೆ ತೆರಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಜೀವಮಾನದಲ್ಲಿ ಒಂದು ಬಾರಿ ಸಿಗುವ ಅವಕಾಶವಿದು. ಜಗತ್ತಿನ ಪ್ರಮುಖರು ಭಾಗವಹಿಸುವ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ” ಎಂದು ಹೇಳಿದ್ದಾರೆ. ಇಸಾಕ್ ಮಥಾಯಿ ಅವರು, ಮೇ 3ರಿಂದ ಶುರುವಾಗಲಿರುವ ಪಟ್ಟಾಭಿಷೇಕ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬಾಂಧವ್ಯ ಹೇಗೆ?
ಸಮೇತನಹಳ್ಳಿಯಲ್ಲಿ ಇರುವ ಡಾ. ಮಥಾಯಿ ಅವರ ಆಸ್ಪತ್ರೆಗೆ 2010ರಿಂದ ರಾಣಿ ಕೆಮಿಲಾ ಭೇಟಿ ನೀಡುತ್ತಿದ್ದಾರೆ. 2019ರಲ್ಲಿ ಮೂರನೇ ಚಾರ್ಲ್ಸ್ ಬೆಂಗಳೂರಿಗೆ ಬಂದಿದ್ದಾಗ ಕೂಡ ಅವರು ಅಲ್ಲಿಗೆ ಭೇಟಿ ನೀಡಿದ್ದರು.
ಪ್ರಮುಖರು ಭಾಗಿ:
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸೇರಿದಂತೆ ಜಗತ್ತಿನ 100 ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ ಭಾರತೀಯ ಮೂಲದ ಸೌರಭ್ ಫಡ್ಕೆ, ಕೆನಡಾದಲ್ಲಿರುವ ಜೇ ಪಟೇಲ್ ಸೇರಿದಂತೆ ಹಲವು ಮಂದಿ ಸ್ವಯಂ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಭಾರತದ ಮೂಲದವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ರಾಜದಂಪತಿಗೆ ಕೊಲ್ಕತಾ ವಿನ್ಯಾಸಕಿಯ ವಸ್ತ್ರ
ಪಟ್ಟಾಭಿಷೇಕದ ಸಂದರ್ಭದಲ್ಲಿ ದೊರೆ ಮೂರನೇ ಚಾರ್ಲ್ಸ್ ಧರಿಸಲಿರುವ ವಿಶೇಷ ದಿರಿಸನ್ನು ಕೋಲ್ಕತದ ವಸ್ತ್ರ ವಿನ್ಯಾಸಕಾರ್ತಿ ಪ್ರಿಯಾಂಕ ಮಲಿಕ್ ಮಾಡಿದ್ದಾರೆ. ಈ ಬಗ್ಗೆ ಮೂರನೇ ಚಾರ್ಲ್ಸ್ ಅವರಿಂದಲೇ ಖುದ್ದು ಆಹ್ವಾನ ಬಂದಿತ್ತು ಎಂದು ಮಲಿಕ್ ಹೇಳಿದ್ದಾರೆ. ರಾಣಿ ಕೆಮಿಲಾಗೆ ಕೂಡ ಅವರೇ ಸಿದ್ಧಪಡಿಸಿದ ದಿರಿಸು ಧರಿಸಲಿದ್ದಾರೆ. ಕೋಲ್ಕತಾದಿಂದ 50 ಕಿಮೀ ದೂರದ ಗ್ರಾಮದಲ್ಲಿ ಜನಿಸಿದ ಮಲಿಕ್ ಇಟೆಲಿಯ ಮಿಲಾನ್, ಹಾರ್ವರ್ಡ್, ಸ್ಟಾನ್‌ಫಾರ್ಡ್ ವಿವಿಯಿಂದ ಪದವಿ ಪಡೆದಿದ್ದಾರೆ. ಜತೆಗೆ ಯು.ಕೆ.ಯ ರಾಯಲ್ ಕಾಮನ್ವೆಲ್ತ್ ಸೊಸೈಟಿಯ ಸದಸ್ಯೆ ಕೂಡ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.