Train ಬೆಂಗಳೂರು – ಮೈಸೂರು -ಮುರ್ಡೇಶ್ವರ ರೈಲು ವೇಳಾಪಟ್ಟಿ
Team Udayavani, Sep 16, 2023, 11:23 PM IST
ಕುಂದಾಪುರ: ಮೈಸೂರು ಮೂಲಕ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು (ನಂ. 16585/586) ರವಿವಾರ (ಸೆ.17)ದಿಂದ ಪ್ರತೀದಿನ ಮುರ್ಡೇಶ್ವರದವರೆಗೆ ಸಂಚರಿಸಲಿದ್ದು, ವೇಳಾಪಟ್ಟಿ ಇಂತಿದೆ. ಪ್ರಸ್ತುತ ವಾರದ 6 ದಿನ ಕಾರ್ಯಾಚರಿಸುತ್ತಿದ್ದ ರೈಲು ಇನ್ನು ಪ್ರತೀದಿನ ಸಂಚರಿಸಲಿದೆ ಎಂದು ಸಿಪಿಆರ್‌ಒ ತಿಳಿಸಿದೆ.
ನಂ. 16585 ರೈಲು ಬೆಂಗಳೂರಿನ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿಬಿ) ನಿಂದ ರಾತ್ರಿ 8.15ಕ್ಕೆ ಹೊರಟು, ರಾತ್ರಿ 11.30ಕ್ಕೆ ಮೈಸೂರು, ಬೆಳಗ್ಗೆ 8.55ಕ್ಕೆ ಮಂಗಳೂರು ಸೆಂಟ್ರಲ್‌ಗೆ, 9.20ಕ್ಕೆ ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 1.35ಕ್ಕೆ ಮುರ್ಡೇಶ್ವರ ತಲುಪುತ್ತದೆ.
ನಂ. 16586 ರೈಲು ಮುರ್ಡೇಶ್ವರದಿಂದ ಮಧ್ಯಾಹ್ನ 2.10ಕ್ಕೆ ಹೊರಟು, ಮಂಗಳೂರು ಸೆಂಟ್ರಲ್‌ಗೆ ಸಂಜೆ 6.35ಕ್ಕೆ, ಮೈಸೂರಿಗೆ ಮುಂಜಾನೆ 3.15ಕ್ಕೆ, ಬೆಂಗಳೂರಿಗೆ ಬೆಳಗ್ಗೆ 7.15ಕ್ಕೆ ತಲುಪುತ್ತದೆ.
ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಬೈಂದೂರು, ಭಟ್ಕಳ ನಿಲ್ದಾಣದಲ್ಲಿ ನಿಲುಗಡೆಯಿರುತ್ತದೆ. ಈ ರೈಲು 22 ಕೋಚ್ ಹೊಂದಿರುತ್ತದೆ.
ಸ್ವಾಗತಕ್ಕೆ ಸಜ್ಜು
ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಸಂದರ್ಭದಲ್ಲಿ ಕರಾವಳಿ ಕರ್ನಾಟಕ ಮತ್ತು ಮೈಸೂರು ಪ್ರದೇಶದ ಜನರಿಗೆ ಈ ವಿಸ್ತರಣೆಯು ಸೂಕ್ತವಾದ ಉಡುಗೊರೆಯಾಗಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ. ರವಿವಾರ ಈ ರೈಲನ್ನು ಸ್ವಾಗತಿಸಲು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಸಜ್ಜಾಗಿದೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಇತರ ಮುಖಂಡರು ಸ್ವಾಗತದ ವೇಳೆ ಇರಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.