ಮೇ ತಿಂಗಳಲ್ಲಿ ಬ್ಯಾಂಕ್ ನೌಕರರಿಗೆ 12 ದಿನ ರಜೆ! ಕರ್ನಾಟಕದ ಉದ್ಯೋಗಿಗಳಿಗೆ 9ದಿನ ಮಾತ್ರ ರಜೆ
5 ಭಾನುವಾರ, 2 ಶನಿವಾರ, 2 ಸಾರ್ವಜನಿಕ ವಿರಾಮ
Team Udayavani, Apr 27, 2021, 9:46 PM IST
ನವದೆಹಲಿ: ಸದ್ಯದಲ್ಲೇ ಬರಲಿರುವ ಮೇ ತಿಂಗಳು ಬಹುತೇಕ ರಾಜ್ಯಗಳ ಬ್ಯಾಂಕ್ ನೌಕರರ ಪಾಲಿಗೆ ಬಹಳ ಸಂಭ್ರಮದ ತಿಂಗಳು. ಕಾರಣವೇನು ಗೊತ್ತಾ? ಈ ತಿಂಗಳು 12 ರಜಾದಿನಗಳು ಬರುತ್ತವೆ. ಹಾಗಂತ ಎಲ್ಲ ರಾಜ್ಯಗಳ ನೌಕರರ ಪಾಲಿಗೆ ಈ ಸೌಭಾಗ್ಯವಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಇದು ವ್ಯತ್ಯಾಸವಾಗುತ್ತದೆ. ಕರ್ನಾಟಕಕ್ಕೆ ಬಂದರೆ 9 ದಿನ ರಜೆಯಿರುತ್ತದೆ.
ಮೇ ತಿಂಗಳು 5 ಭಾನುವಾರಗಳು ಬರುತ್ತವೆ. ಇದು ಬ್ಯಾಂಕ್ ನೌಕರರ ಪಾಲಿಗೆ ಮಾಮೂಲಿ ವಾರದ ರಜೆ. ಇನ್ನು 2ನೇ, ನಾಲ್ಕನೇ ಶನಿವಾರ ರಜೆಯಿರುತ್ತದೆ. ಅಲ್ಲಿಗೆ 7 ದಿನಗಳು ಮಾಮೂಲಿ ರಜೆಯೇ ಆಯಿತು. ಬಾಕಿಯಂತೆ ಮೇ 1ರಂದು ಕಾರ್ಮಿಕ ದಿನಾಚರಣೆ.
ಇದು ದೇಶಾದ್ಯಂತ ಅನ್ವಯವಾಗುತ್ತದೆ. ಮೇ 7ಕ್ಕೆ ಜುಮಾತ್ ಉಲ್ ವಿದಾ, ಮೇ 13ಕ್ಕೆ ರಮಾlನ್-ಈದ್, ಮೇ 14ರಂದು ಪರಶುರಾಮ ಜಯಂತಿ/ಬಸವೇಶ್ವರ ಜಯಂತಿ/ ಅಕ್ಷಯ ತೃತೀಯ/ ಈದ್ ಉಲ್ ಫಿತ್ರಾ, ಮೇ 26 ಬುದ್ಧ ಪೂರ್ಣಿಮೆಯಿರುತ್ತದೆ. ಕರ್ನಾಟಕದ ಪಾಲಿಗೆ ಮೇ 1 ಹಾಗೂ ಮೇ 14 ಸಾರ್ವಜನಿಕ ರಜೆಯಿರುತ್ತದೆ.
ಇದನ್ನೂ ಓದಿ :ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್‌ಗೆ 6 ವರ್ಷ ಜೈಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.