BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

ಎಲ್ಲರೂ ಸೇರಿ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ..

Team Udayavani, Jan 8, 2025, 3:19 PM IST

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

ಬೆಂಗಳೂರು: ಬಿಗ್‌ ಬಾಸ್ (Bigg Boss Kannada11) ಮನೆಯಲ್ಲಿ ಫಿನಾಲೆ ಟಿಕೆಟ್‌ಗಾಗಿ ನಡೆಯುತ್ತಿರುವ ಟಾಸ್ಕ್‌ಗಳನ್ನು ಗೆಲ್ಲಲು ಸ್ಪರ್ಧಿಗಳು ಹಣಾಹಣೆ ನಡೆಸುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ತಾವು ಏನೇ ಮಾಡಿ ಟಾಸ್ಕ್‌ ಗೆಲ್ಲಬೇಕೆನ್ನುವ ಹಟಕ್ಕೆ ಬಿದ್ದಿದ್ದಾರೆ.

ಭವ್ಯ ಚೈತ್ರಾ, ಧನರಾಜ್‌, ಮೋಕ್ಷಿತಾ ಹಾಗೂ ತ್ರಿವಿಕ್ರಮ್‌ ಅವರು ಈ ವಾರ ಮನೆಯಿಂದ ಆಚೆ ಹೋಗಲು ನಾಮಿನೇಟ್‌ ಆಗಿದ್ದಾರೆ. ಇದರೊಂದಿಗೆ ಕ್ಯಾಪ್ಟನ್‌ ನೇರವಾಗಿ ಒಬ್ಬರನ್ನು ನಾಮಿನೇಟ್‌ ಮಾಡಲಿದ್ದಾರೆ.

ಚೆಂಡು ಸಂಗ್ರಹ ಹಾಗೂ ಬಲೂನ್‌ ಟಾಸ್ಕ್‌ ಗಳ ಬಳಿಕ ಇದೀಗ ಮತ್ತೊಂದು ಭಿನ್ನವಾದ ಚೆಂಡುಗಳ ಟಾಸ್ಕ್‌ ನೀಡಲಾಗಿದೆ. ಅದರಂತೆ ಈಗಾಗಲೇ ರಚನೆಯಾಗಿರುವ ತಂಡಗಳು ಬಿಗ್‌ ಬಾಸ್‌ ಸೂಚಿಸುವ ಸಂಖ್ಯೆಯತ್ತ ತೆರಳಬೇಕು. ಸದಸ್ಯರ ಕಾಲಿಗೆ ಹಗ್ಗವನ್ನು ಕಟ್ಟಲಾಗಿದೆ. ಕುಂಟುತ್ತಾ ಚೆಂಡನ್ನು ಸಂಗ್ರಹಿಸಿ ಆ ಬಳಿಕ ಅದನ್ನು ತಮಗೆ ಮೀಸಲಿರುವ ಬಾಸ್ಕೆಟ್‌ಗೆ ಹಾಕಬೇಕು.

ಇದರಲ್ಲಿ ಮಂಜು ಅಗ್ರೆಸಿವ್‌ ಆಗಿ ಆಡಿದ್ದಾರೆ. ಮಂಜಣ್ಣ ತಳ್ಳುತ್ತಿದ್ದಾರೆ ಎಂದು ಭವ್ಯ ಸಿಟ್ಟಿನಿಂದಲೇ ಹೇಳಿದ್ದಾರೆ. ನೀವು ಮೊದಲು ಬೇರೆಯವರಿಗೆ ಹೇಳೋಕ್ಕೂ ಮುಂಚೆ ಕರೆಕ್ಟಾಗಿ ಆಟ ಆಡಿ ಭವ್ಯ ಹೇಳಿದ್ದಾರೆ.

ಕೊನೆಯದಾಗಿ ಚೆಂಡು ಸಂಗ್ರಹಿಸಲು ಇನ್ನೊಬ್ಬರ ಮೈ ಮೇಲೆ ಬಿದ್ದ ಮಂಜು ಅವರನ್ನು ಉಸ್ತುವಾರಿ ವಹಿಸಿರುವ ರಜತ್‌ ಅವರು ನೀನು ಆಡ್ತಾ ಇರೋದು ಸರಿಯಲ್ಲ ಮಂಜು ಎಂದು ಹೇಳಿದ್ದಾರೆ.

ನಿಮ್ಮೊಳಗೆ ಚರ್ಚಿಸಿ ಒಬ್ಬರನ್ನು ʼಟಿಕೆಟ್‌ ಟು ಫಿನಾಲೆʼ ಓಟದಿಂದ ಹೊರಗೆ ಇಡಬೇಕೆಂದು ಬಿಗ್‌ ಬಾಸ್‌ ಹೇಳಿದ್ದಾರೆ. ಇದಕ್ಕೆ ಮಂಜು, ಧನರಾಜ್‌, ರಜತ್‌, ಗೌತಮಿ ಹಾಗೂ ಇತರೆ ಕೆಲವರು ಚೈತ್ರಾ ಅವರ ಹೆಸರನ್ನು ಹೇಳಿದ್ದಾರೆ.

ಅವರು ಯಾವಾಗಲೂ ವಾದಾ ಮಾಡುತ್ತಲೇ ಇರುತ್ತಾರೆ ಎಂದು ಮಂಜು ಹೇಳಿದ್ದಾರೆ. ತಪ್ಪನ್ನು ಸರಿ ಮಾಡಿಕೊಂಡು ಮುಂದೆ ಹೋಗುವ ಗುಣ ಅವರಲ್ಲಿ ಇಲ್ಲ ಎಂದು ಧನರಾಜ್‌ ಹೇಳಿದ್ದಾರೆ. ಎಲ್ಲರೂ ಒಂದು ಹೆಸರು ತೆಗೆದುಕೊಳ್ಳುತ್ತಾ ಇದ್ದಾರೆ ಅಂಥ ಹೇಳಿದ್ರೆ ಅವರ ಕಡೆಯಿಂದ ಮತ್ತೆ ಮತ್ತೆ ತಪ್ಪು ಆಗುತ್ತಾ ಇದೆ ಅಂಥ ಅರ್ಥವೆಂದು ಗೌತಮಿ ಹೇಳಿದ್ದಾರೆ.

ಒಬ್ಬರನ್ನು ಟಾರ್ಗೆಟ್‌ ಮಾಡಿ ಈಗಲೇ ಪ್ಲ್ಯಾನ್‌ ಮಾಡುತ್ತಾರೆ. ಈ ನೂರು ದಿನವೂ ಈ ಮನೆಯಲ್ಲಿ ನಡೆದದ್ದು ಇದೆ. ಆಡೋಕೆ ಕೊಡ್ತಾ ಇರಲಿಲ್ಲ. ಇದೇ ತರ ಟಾರ್ಗೆಟ್‌ ಮಾಡಿ ಆಟದಿಂದ ಹೊರಗಡೆ ಇಡ್ತಾ ಇದ್ರು. ಆಡೋಕೆ ಈಗಿನಿಂದ ಬರ್ತಾ ಇದ್ದೆ ಅಲ್ಲಿಂದಲೇ ಅಡ್ಡಗಾಲು ಇಟ್ರು ಎಂದು ಚೈತ್ರಾ ಕಣ್ಣೀರು ಇಟ್ಟಿದ್ದಾರೆ

ಟಾಪ್ ನ್ಯೂಸ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.