BBK11: ಸತ್ಯಕ್ಕೆ ಸೋಲಿಲ್ಲ.. ರಜತ್ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು
Team Udayavani, Jan 7, 2025, 3:22 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ʼಟಿಕೆಟ್ ಟು ಫಿನಾಲೆʼಯ ಸರಣಿ ಟಾಸ್ಕ್ ಗಳು ಆರಂಭವಾಗಿದೆ. ಮನೆಮಂದಿ ಫಿನಾಲೆ ಹೋಗಲು ಟಾಸ್ಕ್‌ನಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ʼಟಿಕೆಟ್ ಹೋಮ್ʼ ನಲ್ಲಿರುವ ಸ್ಪರ್ಧಿಗಳು ಆಟದಲ್ಲಿ ಗೆದ್ದು ಸುರಕ್ಷಿತ ವಲಯವಾದ ʼಟಿಕೆಟ್ ಟು ಫಿನಾಲೆʼಗೆ ಹೋಗಬೇಕು. ಹೆಚ್ಚು ಚೆಂಡುಗಳನ್ನು ಸಂಗ್ರಹಿಸಿದ ಸ್ಪರ್ಧಿ ಸುರಕ್ಷಿತ ವಲಯಕ್ಕೆ ಹೋಗಿದ್ದು, ಅಲ್ಲಿಂದ ಒಬ್ಬರು ಟಾಸ್ಕ್ ಆಡಲು ಬರಬೇಕು.
ಇಂದು ಕೂಡ ಇದೇ ರೀತಿಯ ಟಾಸ್ಕ್ ಗಳು ವಿವಿಧ ಸುತ್ತಿನಲ್ಲಿ ನಡೆಯಲಿದೆ. ಗಾಜಿನ ಬಾಟಲಿಯಲ್ಲಿ ಬಣ್ಣದ ನೀರನ್ನು ಉಳಿಸಿಕೊಳ್ಳಬೇಕು. ಹೆಚ್ಚು ನೀರು ಉಳಿಸಿಕೊಂಡವರು ʼಟಿಕೆಟ್ ಟು ಫಿನಾಲೆʼಗೆ ಹೋಗುತ್ತಾರೆ.
ತ್ರಿವಿಕ್ರಮ್ , ಮಂಜು ನಡುವೆ ಟಾಸ್ಕ್ ಆಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಟಾಸ್ಕ್ ಆಡಲು ಕೊಟ್ಟಿರುವ ಸಾಮಾಗ್ರಿಗಳಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದು, ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.
ಸದಸ್ಯರಿಗೆ ಜೋಡಿಗಳಾಗಿ ಟಾಸ್ಕ್ ನೀಡಲಾಗಿದೆ. ಅದರಂತೆ ಜೋಡಿ ಸದಸ್ಯರು ತಮ್ಮ ಹಿಂಬದಿಯ ಸಹಾಯದಿಂದ ಬಲೂನ್‌ನಲ್ಲಿನ ನೀರನ್ನು ಬಕೆಟ್‌ನೊಳಗೆ ಸುರಿಯುವಂತೆ ಮಾಡಬೇಕು. ಆದರೆ ಟಾಸ್ಕ್ ಆಡುವ ಭರದಲ್ಲಿ ಆಟಗಾರರು ತಮ್ಮ ಸರಿ – ತಪ್ಪುಗಳ ಬಗ್ಗೆ ಮಾತನಾಡಿದ್ದು, ಉಸ್ತುವಾರಿ ರಜತ್ ಅವರನ್ನು ಗರಂ ಆಗುವಂತೆ ಮಾಡಿದೆ.
ಹನುಮಂತು ಮತ್ತು ಇವರದ್ದು ಕೈ ಟಚ್ ಆಯಿತು. ಕೈ ಟಚ್ ಆಗಿ ಬಾಲ್ ಬಿದ್ದಿದ್ದು ಎಂದು ಚೈತ್ರಾ ಹೇಳಿದ್ದಾರೆ. ಇದಕ್ಕೆ ರಜತ್ ಅವರು ಬಾಯಿ ಬಡಿದುಕೊಳ್ಳಬೇಡಿ ಎಂದು ಜೋರಾಗಿಯೇ ಹೇಳಿದ್ದಾರೆ.
ಫಿನಾಲೆ ಟಿಕೆಟ್ ಎದುರು ಸ್ಪರ್ಧಿಗಳಿಗೆ ನೀರಿಳಿತಿದೆ!ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/KeHn4kePr1
— Colors Kannada (@ColorsKannada) January 7, 2025
ಬಾಲ್ ಎಳೆದುಕೊಂಡು ಹೋದ ಅಲ್ವಾ ಎಂದು ಮಂಜು ಹೇಳಿದ್ದಾರೆ. ಇದಕ್ಕೆ ರಜತ್ ಇದು ಲಕ್ ಇರಬಹುದೆಂದು ಹೇಳಿದ್ದಾರೆ. ನಾನು ಮಾತನಾಡಿದ್ರೆ ನಿನ್ನಗಿಂತ ಕರಾಬು ಆಗಿ ಮಾತನಾಡುತ್ತೇನೆ ಎಂದು ರಜತ್ ಹೇಳಿದ್ದಾರೆ. ಗೆಲುತ್ತೇನೋ ಸೋಲ್ತೇನೋ ಆಮೇಲೆ ಮೊದಲು ಕರೆಕ್ಟಾಗಿ ಆಡುತ್ತೇನೆ. ಸತ್ಯಕ್ಕೆ ಯಾವತ್ತಿದ್ರು ಸೋಲಿಲ್ಲವೆಂದು ಮಂಜು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.