![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Oct 6, 2024, 11:08 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ದಲ್ಲಿ ಮೊದಲ ವಾರದ ಪಂಚಾಯ್ತಿ ನಡೆದ ಬಳಿಕ ಸೂಪರ್ ಸಂಡೇಯಲ್ಲೂ ಕಿಚ್ಚ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
ಮನೆಯ ಹೊಸ ಕ್ಯಾಪ್ಟನ್ ಹಂಸಾ ಅವರು, ಮನೆಯ ಸದಸ್ಯರಿಗೆ ಜವಾಬ್ದಾರಿಯನ್ನು ಹಂಚಿಕೊಟ್ಟಿದ್ದಾರೆ. ಊಟ, ಮನೆ ಸ್ವಚ್ಚತೆ, ಬಟ್ಟೆ ಬದಲಾಯಿಸುವ ವಿಚಾರದಲ್ಲಿ ಎಲ್ಲಾ ಸ್ಪರ್ಧಿಗಳು ಇರುವಂತಹ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹಂಸಾ ಅವರು ಖಡಕ್ ಆಗಿಯೇ ಕ್ಯಾಪ್ಟನ್ ಆಗಿ ಹೇಳಿದ್ದಾರೆ. ಒಂದು ಕಡೆ ಸ್ಪರ್ಧಿಗಳು ಕಿಚ್ಚ ಕೊಟ್ಟ ಪ್ರಶ್ನೆಗಳಿಗೆ ಉತ್ತರಿಸಿದ್ದು, ಇನ್ನೊಂದು ವಾರವಿಡೀ ನಡೆದ ಪ್ರಸಂಗಗಳ ಬಗ್ಗೆ ಸ್ಪರ್ಧಿಗಳು ಮನವರಿಕೆ ಮಾಡಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಯಾರು ಫ್ಲಾಪ್, ಯಾರು ಸೂಪರ್ ಹಿಟ್?
ಒಂದು ವಾರ ನಡೆದ ಬಿಗ್ ಬಾಸ್ ಆಟದಲ್ಲಿ ಯಾವ ಸ್ಪರ್ಧಿಗಳು ಚೆನ್ನಾಗಿ ಆಡಿದ್ದಾರೆ, ಯಾರು ಇಷ್ಟ ಆಗಿಲ್ಲ ಎನ್ನುವುದಕ್ಕೆ ಸ್ಪರ್ಧಿಗಳು ಬ್ಯಾಚ್ ವೊಂದನ್ನು ಕೊಟ್ಟು ಜಡ್ಜ್ ಮಾಡಿದ್ದಾರೆ. ರಂಜಿತ್, ಧನರಾಜ್, ತಿವಿಕ್ರಮ್, ಧರ್ಮ ಕೀರ್ತಿರಾಜ್, ಮಂಜು, ಶಿಶಿರ್, ಗೌತಮಿ ಅವರಿಗೆ ಸೂಪರ್ ಹಿಟ್ ಬ್ಯಾಚ್ ಸಿಕ್ಕಿದ್ದು, ಸುರೇಶ್, ಜಗದೀಶ್, ಹಂಸಾ ಅವರಿಗೆ ಪ್ಲಾಪ್ ಬ್ಯಾಚ್ ನೀಡಲಾಗಿದೆ. ಯಾರಿಗೆಲ್ಲ ಬ್ಯಾಚ್ ಬಂದಿಲ್ಲವೋ ನೀವೆಲ್ಲ ಆಟದಲ್ಲೇ ಇಲ್ವಾ ಎಂದು ಕಿಚ್ಚ ಪ್ರಶ್ನಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅರಳಿದ ಪ್ರೇಮ..
ಬಿಗ್ ಮನೆಯಲ್ಲಿ ಐಶ್ವರ್ಯಾ – ಧರ್ಮ ಕೀರ್ತಿರಾಜ್ ಅವರಿಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಏನೋ ನಡೀತಾ ಇದೆ. ಈ ಬಗ್ಗೆ ಕಿಚ್ಚ ಕೇಳಿದಾಗ ಇಬ್ಬರು ಹಾಗೇನಿಲ್ಲ ಎಂದಿದ್ದಾರೆ. ಇನ್ನೊಂದು ಕಡೆ ಸಹ ಸ್ಪರ್ಧಿಗಳು ಇಬ್ಬರ ನಡುವೆ ಆತ್ಮೀಯತೆ ಇರುವುದು ನಿಜವೆಂದು ಹೇಳಿದ್ದಾರೆ.
ಅದಲು ಬದಲಾದ ಸ್ವರ್ಗ – ನರಕದ ನಿವಾಸಿಗಳು
ಕ್ಯಾಪ್ಟನ್ ಆಗಿ ಆಯ್ಕೆಯಾದ ಹಂಸಾ ಅವರಿಗೆ ದೊಡ್ಡ ಜವಾಬ್ದಾರಿಯೊಂದನ್ನು ನೀಡಲಾಗಿದೆ. ಒಬ್ಬ ಸ್ವರ್ಗದ ಸ್ಪರ್ಧಿ ನರಕಕ್ಕೆ ಹೋಗಿದ್ದಾರೆ. ನರಕದಿಂದ ಒಬ್ಬರು ಸ್ವರ್ಗದ ಮನೆಗೆ ಎಂಟ್ರಿ ಆಗಿದ್ದಾರೆ. ಜಗದೀಶ್ ಅವರನ್ನು ನರಕದ ಮನೆಗೆ ಕಳುಹಿಸಿದ್ದು, ಸ್ವರ್ಗದ ಮನೆಗೆ ರಂಜಿತ್ ಅವರನ್ನು ಬರ ಮಾಡಿಕೊಳ್ಳಲಾಗಿದೆ.
ಎಲಿಮಿನೇಷನ್‌ನಿಂದ ಪಾರಾದವರು ಯಾರು?
ಬಿಗ್ ಬಾಸ್ ಮನೆಯಲ್ಲಿ ಈ ವಾರ 9 ಮಂದಿ ನಾಮಿನೇಟ್ ಆಗಿದ್ದರು. ಈ ಪೈಕಿ ಭವ್ಯಾ ಅವರು ಮೊದಲ ಸ್ಪರ್ಧಿಯಾಗಿ ಎಲಿಮಿನೇಷನ್ ತೂಗುಗತ್ತಿನಿಂದ ಪಾರಾಗಿದ್ದಾರೆ. ಗೌತಮಿ,ಮಾನಸ, ಮೋಕ್ಷಿತಾ ಅವರು ಸೇಫ್ ಆಗಿದ್ದಾರೆ. ಶಿಶಿರ್ ಶಾಸ್ತ್ರಿ, ಜಗದೀಶ್, ಚೈತ್ರಾ, ಯಮುನಾ, ಹಂಸಾ ಇವರಲ್ಲಿ ಯಮುನಾ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.
ವೇದಿಕೆಯಲ್ಲಿ ಯಮುನಾ ಹೇಳಿದ್ದೇನು?
ಬಿಗ್ ಬಾಸ್ ಮನೆಯಿಂದ ಆಚೆ ಬಂದು ಮಾತನಾಡಿದ ಯಮುನಾ ಅವರು, ನಾನು ಮನೆಯಲ್ಲಿ ಸ್ವಲ್ಪ ದಿನ ಇರುತ್ತೇನೆ ಅನ್ಕೊಂಡಿದ್ದೆ. ಶಿಶಿರ್, ತಿವಿಕ್ರಮ್, ಧರ್ಮ ಕೀರ್ತಿರಾಜ್ ಫಿನಾಲೆವರೆಗೂ ಇರಬಹುದು. ಮುಂದಿನ ವಾರ ಮೋಕ್ಷಿತಾ ಅಥವಾ ಐಶ್ವರ್ಯಾ ಅವರು ಎಲಿಮಿನೇಟ್ ಆಗಬಹುದು ಎಂದು ಹೇಳಿದರು.
ದೊಡ್ಮನೆಗೆ ಯಮುನಾ ಅವರು ಎರಡನೇ ಸ್ಪರ್ಧಿಯಾಗಿ ಸ್ವರ್ಗಕ್ಕೆ ಎಂಟ್ರಿ ಆಗಿದ್ದರು. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ಅವರು, ‘ಸಪ್ತ ಸಾಗರದ ಆಚೆ ಎಲ್ಲೋ’, ‘ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ಯಮುನಾ ಶ್ರೀನಿಧಿ ಅವರು ಸದ್ಯಕ್ಕೆ ‘ನನ್ನ ದೇವ್ರು’ ಧಾರಾವಾಹಿಯಲ್ಲಿ ಪಾತ್ರವೊಂದನ್ನು ಮಾಡಿದ್ದಾರೆ.
Bro Gowda: ನಿಶ್ಚಿತಾರ್ಥ ಮಾಡಿಕೊಂಡ ʼಲಕ್ಷ್ಮೀ ಬಾರಮ್ಮʼ ಖ್ಯಾತಿಯ ಬ್ರೋ ಗೌಡ: ಹುಡುಗಿ ಯಾರು?
Controversy: ಅಶ್ಲೀಲ ಹೇಳಿಕೆ: 2ನೇ ಬಾರಿಗೆ ರಣವೀರ್ ಅಲಹಾಬಾದಿಯಾಗೆ ಪೊಲೀಸರ ಸಮನ್ಸ್
Zee Entertainers Comedy Awards 2025: ಜೀ ಕನ್ನಡದಲ್ಲಿ ‘ಕಾಮಿಡಿ’ ಸಮಾಗಮ!
TRP: ಟಿಆರ್ಪಿಯಲ್ಲಿ ದಾಖಲೆ ಬರೆದ ʼಬಿಗ್ ಬಾಸ್ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?
Bharjari Bachelors Show: ʼಬ್ಯಾಚುಲರ್ಸ್’ ಬದುಕಿಗೆ ಬಣ್ಣ ತುಂಬಲು ಬಂದ ಕ್ರೇಜಿ ಸ್ಟಾರ್
You seem to have an Ad Blocker on.
To continue reading, please turn it off or whitelist Udayavani.