![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 19, 2021, 4:10 AM IST
ಬಂಟ್ವಾಳ: ಬಿ.ಸಿ.ರೋಡ್-ಪುಂಜಾ ಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಬಿ.ಸಿ. ರೋಡ್- ಜಕ್ರಿಬೆಟ್ಟು ಮಧ್ಯೆ ಚತುಷ್ಪಥ ಕಾಂಕ್ರೀಟ್ ಕಾಮಗಾರಿ ನಡೆಯು ತ್ತಿದ್ದು, ಪ್ರಸ್ತುತ ಬಹುತೇಕ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡು ಬಂಟ್ವಾಳ ಬೈಪಾಸ್ ಭಾಗದಲ್ಲಿ ಹೆದ್ದಾರಿ ಡಿವೈಡರ್ ಕಾಮಗಾರಿ ಆರಂಭಗೊಂಡಿದೆ.
ಒಟ್ಟು 19.85 ಕಿ.ಮೀ. ಹೆದ್ದಾರಿ ಅಭಿವೃದ್ಧಿಯ ಪೈಕಿ ಜಕ್ರಿಬೆಟ್ಟು ಬಳಿಕ 16 ಕಿ.ಮೀ. ಡಾಮಾರು ಕಾಮಗಾರಿ ಹಾಗೂ ಜಕ್ರಿಬೆಟ್ಟುವರೆಗೆ 3.85 ಕಿ.ಮೀ. ಕಾಂಕ್ರೀಟ್ ಕಾಮಗಾರಿ ಎಂದು ತಿಳಿಸಲಾಗಿತ್ತು. ಎರಡೂ ಬದಿ ತಲಾ 7 ಮೀ.ಗಳ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಬಂಟ್ವಾಳ ಬೈಪಾಸ್, ಭಂಡಾರಿಬೆಟ್ಟು ಹಾಗೂ ಕಾಮಾಜೆ ಕ್ರಾಸ್ ಬಳಿ ಹೊರತುಪಡಿಸಿ ಉಳಿದ ಕಡೆ ಬಹುತೇಕ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದು, ಹೀಗಾಗಿ ಡಿವೈಡರ್ ಕಾರ್ಯ ಆರಂಭಿಸಲಾಗಿದೆ. ಜತೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸುವ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ.
ಕಾಂಕ್ರೀಟ್ ಕಾಮಗಾರಿಯಲ್ಲಿ ಭಂಡಾರಿ ಬೆಟ್ಟು ಹಾಗೂ ಕಾಮಾಜೆ ಕ್ರಾಸ್ ಬಳಿ ಒಂದು ಬದಿಯ ಕಾಂಕ್ರೀಟ್ ಪೂರ್ಣಗೊಂಡಿದೆ. ಆದರೆ ಬಂಟ್ವಾಳ ಬೈಪಾಸ್ ಬಳಿ ಭೂಸ್ವಾಧೀನ ಪ್ರಕ್ರಿಯೆಯೂ ನಡೆದಿಲ್ಲ. ಹೀಗಾಗಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುವ ಘಟನೆಗಳೂ ನಡೆಯುತ್ತಿದೆ.
ಹೆದ್ದಾರಿ ಕಾಮಗಾರಿಯ ಜತೆಗೆ ಎಂಆರ್‌ಪಿಎಲ್ ಪೈಪುಲೈನ್ ಸ್ಥಳಾಂತರ ಕಾರ್ಯ ನಡೆಯುತ್ತಿದ್ದು, ಇದು ವಿಳಂಬ ವಾಗಿರುವುದರಿಂದ ಹೆದ್ದಾರಿ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಹೆದ್ದಾರಿ ಇಲಾಖೆಯು ಪ್ರಾರಂಭದಲ್ಲಿ 2020ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದು, ಬಳಿಕ 2021ರ ಎಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದಿತ್ತು. ಆದರೆ ಪ್ರಸ್ತುತ ಬಹುತೇಕ ಕಾಮಗಾರಿ ಬಾಕಿ ಇರುವುದರಿಂದ ಎಪ್ರಿಲ್ ಅಂತ್ಯದಲ್ಲೂ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಇದೆ.
You seem to have an Ad Blocker on.
To continue reading, please turn it off or whitelist Udayavani.