ಬೈರೂತ್ ಮಹಾಸ್ಫೋಟ- ಲೆಬನಾನ್ ಜನರಿಗೆ ಆಹಾರ ಕೊರತೆಗೆ ಕಾರಣವಾಗಲಿದೆಯೇ?
ಸ್ಫೋಟ ಸಂಭವಿಸಿದ ಸ್ಥಳದಲ್ಲಿದ್ದ ಗೋಪುರಾಕಾರದ ಕಟ್ಟಡಗಳು ನೆಲಸಮವಾಗಿವೆ. ಇವು ಕೇವಲ ಕಟ್ಟಡಗಳಾಗಿರಲಿಲ್ಲ,
Team Udayavani, Aug 6, 2020, 5:12 PM IST
ಬೈರೂತ್: ಲೆಬನಾನ್‌ನಲ್ಲಿ ನಡೆದ ಸ್ಫೋಟಕ್ಕೆ ಇಡೀ ರಾಜಧಾನಿಯೇ ತತ್ತರಿಸಿದೆ. ಇದರ ಭೀಕರತೆ ಎಷ್ಟು ತೀವ್ರವಾಗಿತ್ತು ಎಂದರೆ, 240 ಕಿ.ಮೀ. ದೂರದ ದ್ವೀಪದಲ್ಲೂ ಸ್ಫೋಟದ ಸದ್ದು ಕೇಳಿಸಿದೆ.
ಇಡೀ ಬೈರೂತ್ ಪಟ್ಟಣ ಸ್ಫೋಟದಿಂದಾಗಿ ನಲುಗಿ ಹೋಗಿದೆ. ಬಂದರಿನ ಬಳಿಯಿದ್ದ ಕಟ್ಟಡಗಳೆಲ್ಲ ಧ್ವಂಸವಾಗಿವೆ. ಗಾಜಿನ ಚೂರುಗಳ ಬಿರುಗಾಳಿಯೇ ಬೀಸಿದಂತಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಸ್ಫೋಟಕ್ಕೆ ಸದ್ಯ 100ಕ್ಕೂ ಅಧಿಕ ಜನರು ಬಲಿಯಾಗಿದ್ದರೆ, 4,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿಯಿಂದ ಶವಗಳನ್ನು ಹೊರತೆಗೆಯುತ್ತಲೇ ಇದ್ದಾರೆ.
ಸ್ಫೋಟ ಸಂಭವಿಸಿದ ಸ್ಥಳದಲ್ಲಿದ್ದ ಗೋಪುರಾಕಾರದ ಕಟ್ಟಡಗಳು ನೆಲಸಮವಾಗಿವೆ. ಇವು ಕೇವಲ ಕಟ್ಟಡಗಳಾಗಿರಲಿಲ್ಲ, ಬದಲಿಗೆ ಗೋಧಿ ಸೇರಿ ವಿವಿಧ ಧಾನ್ಯಗಳ ದಾಸ್ತಾನು ಗೋದಾಮುಗಳಾಗಿದ್ದವು. 1.20 ಲಕ್ಷ ಟನ್ ದಾಸ್ತಾನು ಸಾಮರ್ಥ್ಯ ಹೊಂದಿದ್ದವು.
ಆದರೆ, ಸ್ಫೋಟದ ಸಮಯದಲ್ಲಿ ಅಲ್ಲಿ ಹೆಚ್ಚು ದಾಸ್ತಾನಿರಲಿಲ್ಲ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ 3 ತಿಂಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯ ಶೇಖರಿಸಿಡಲಾಗುತ್ತಿತ್ತು. ಆದರೆ, ಸದ್ಯ ಲೆಬನಾನ್‌ನಲ್ಲಿ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಗಾಗುವಷ್ಟು ಗೋಧಿ ಹಾಗೂ ಇತರ ಧಾನ್ಯವಿದೆ ಎಂದು ಹಣಕಾಸು ಸಚಿವ ರೆವೋಲ್ ನೆಹ್ಮೆ ಹೇಳಿದ್ದಾರೆ. ಇದಲ್ಲದೇ, ಬೈರುತ್ ಬಂದರು ಇನ್ನಾರು ತಿಂಗಳು ಯಾವುದೇ ಹಡಗಿನಿಂದ ಆಮದನ್ನು ಸ್ವೀಕರಿಸುವ ಸ್ಥಿತಿಯಲ್ಲಿಲ್ಲ.
ಟ್ರಿಪೋಲಿ ಬಂದರಿನಲ್ಲಿ ಹಡಗು ನಿಲ್ಲಬಹುದಾದರೂ ಅಲ್ಲಿ ಆಹಾರ ಧಾನ್ಯ ಸಂಗ್ರಹಕ್ಕೆ ಗೋದಾಮುಗಳಿಲ್ಲ ಎಂದು ಹೇಳಲಾಗಿದೆ. ಹೀಗಾಗಿ 25 ಸಾವಿರ ಗೋದಿ ಹಿಟ್ಟನ್ನು ತುರ್ತಾಗಿ ಇಲ್ಲಿಂದ ಎರಡು ಕಿ.ಮೀ. ದೂರದಲ್ಲಿರುವ ಗೋದಾಮುಗಳಿಗೆ ಸಾಗಿಸಲಾಗುತ್ತದೆ. ಇದಲ್ಲದೇ, 28 ಸಾವಿರ ಟನ್ ಗೋದಿ ಹೊತ್ತ ನಾಲ್ಕು ಹಡಗುಗಳು ಇನ್ನಷ್ಟೇ ಬಂದರು ತಲುಪಬೇಕಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.