ಬೆಳ್ತಂಗಡಿ: ಪ.ಪಂ. ಚರಂಡಿ ವಾಸನೆ ಸಹಿಸಲು ಬೇಕಿದೆ ಮಾಸ್ಕ್!
Team Udayavani, Mar 25, 2021, 5:00 AM IST
ಬೆಳ್ತಂಗಡಿ: ಕೊರೊನಾ ಸೋಂಕು ತಡೆಯಲು ಮಾಸ್ಕ್ ಬಳಸಿ, ಸ್ವತ್ಛತೆಗೆ ಆದ್ಯತೆ ನೀಡಿ ಎಂದು ದಿನ ಬೆಳಗ್ಗೆ ಧ್ವನಿವರ್ಧಕ ಮೊಳಗಿಸುತ್ತಿರುವ ಪ.ಪಂ., ಕಚೇರಿ ಮುಂಭಾಗದ ಚರಂಡಿಯಲ್ಲಿ ಕೊಳಚೆ ನೀರು ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರಿಗೆ ಮೂಗು ಮುಚ್ಚಿಕೊಳ್ಳಲು ಮಾಸ್ಕ್ ವಿತರಿಸುವುದು ಅನಿವಾರ್ಯ ಎಂಬಂತಾಗಿದೆ.
ಪಟ್ಟಣ ಪಂಚಾಯತ್, ಮಿನಿವಿಧಾನ, ಪ್ರವಾಸಿ ಬಂಗಲೆ, ಕೋರ್ಟ್, ತಾ.ಪಂ. ಸೇರಿದಂತೆ ಅನೇಕ ಸರಕಾರಿ ಕಚೇರಿ ತೆರಳುವವರು, ಶಾಸಕರು, ಸಚಿವರು, ಗಣ್ಯವ್ಯಕ್ತಿಗಳು ಸಂಚರಿಸುವ, ಬೆಳ್ತಂಗಡಿ ಕೇಂದ್ರ ಭಾಗದಲ್ಲಿರುವ ಮೂರು ಮಾರ್ಗದ ಬಳಿ ತೆರೆದ ಚರಂಡಿಯೊಂದು ನಗರದ ಸೌಂದರ್ಯ ಕೆಡಿಸುತ್ತಿದೆ. ಮೂರು ವರ್ಷಗಳಿಂದ ಚರಂಡಿ ಸ್ವತ್ಛತೆಗೆ ಪ.ಪಂ. ಲಕ್ಷಾಂತರ ಅನುದಾನ ಮೀಸಲಿ ರಿಸುತ್ತಿದ್ದರೂ ಈವರೆಗೆ ಮೂರು ಮಾರ್ಗದ ಮುಂಭಾಗದ ಚರಂಡಿ ದುಸ್ಥಿತಿಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ.
ಸಂತೆಕಟ್ಟೆಯಿಂದ ಬಸ್ ನಿಲ್ದಾಣದವರೆಗೆ, ಮೂರು ಮಾರ್ಗದಿಂದ ಮಿನಿವಿಧಾನ ಸೌಧಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಚರಂಡಿ ತುಂಬಿ ನಡೆದಾಡಲು ಸಾಧ್ಯವಿಲ್ಲದಷ್ಟು ದುರ್ನಾತ ಬೀರುತ್ತಿದೆ. ಸಮೀಪದ ಕಚೇರಿ, ಅಂಗಡಿ, ಮುಂಗಟ್ಟು, ಮನೆಯ ಮಂದಿ ಮೂಗಿಮುಚ್ಚಿ ಕುಳಿತುಕೊಳ್ಳುವ ಸ್ಥಿತಿ ಇದೆ. ಈ ಕುರಿತು ಹಲವು ಬಾರಿ ವರದಿ ಪ್ರಕಟಗೊಂಡರೂ ಸಬಂಧಪಟ್ಟವರು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಬಳಿ ಈ ಕುರಿತು ಪ್ರಸ್ತಾಪಿಸಿದರೆ ಚರಂಡಿಗೆ ಮನೆ, ಹೋಟೆಲ್ ತ್ಯಾಜ್ಯ ಬಿಡದಂತೆ ಸೂಚಿಸಲಾಗಿದೆ, ನೋಟಿಸ್ ನೀಡಲಾಗಿದೆ.
ಎಂಬ ಸಿದ್ಧ ಉತ್ತರವಷ್ಟೆ ಬರುತ್ತಿದೆ. ಮಾಸ್ಕ್ ದಂಡ ವಿಧಿಸುವ ಮುನ್ನ ಪ.ಪಂ. ಅವ್ಯವಸ್ಥೆಗೆ ದಂಡ ವಿಧಿಸುವ ಅನಿವಾರ್ಯತೆಯಿದೆ.
ಟೌನ್ ಪ್ಲಾನಿಂಗ್ ಕೊರತೆ
ಕೊಳಚೆ ನೀರಿನ ಚರಂಡಿಗಳ ಸಮರ್ಪಕ ನಿರ್ವಹಣೆಗೆ ಯೋಜನೆ ರೂಪಿಸಬೇಕಿದೆ. ನಗರದ ಹೃದಯ ಭಾಗದಲ್ಲಿ ಇರುವ ಚರಂಡಿಗಳು ಅವೈಜ್ಞಾನಿಕವಾಗಿವೆ.
ಈಗಾಗಲೇ ಟೌನ್‌ಪ್ಲಾನಿಂಗ್ ಎಂಜಿನಿಯರಿಂಗ್ ಸರ್ವೇ ನಡೆಸಿದ್ದರೂ ಕಾಮಗಾರಿಗಳು ವೇಗ ಪಡೆಯಬೇಕಿದೆ.
10 ದಿನಗಳೊಳಗಾಗಿ ಕ್ರಮ
ನಗರದ ನೀರು, ಚರಂಡಿ ನೀರು ಹಾಗೂ ಹೊಟೇಲ್ ತ್ಯಾಜ್ಯ ಪ್ಯೂರಿಫೈ ಮಾಡುವ ಸಲುವಾಗಿ ದೇವನಹಳ್ಳಿ ಮಾದರಿಯಲ್ಲಿ ಘಟಕ ನಿರ್ಮಿಸಲು ಕೃಷಿ ಇಲಾಖೆಯ ಸಮೀಪ 1 ಎಕ್ರೆ ಕಾಯ್ದೆರಿಸಿ ಸರಕಾರಕ್ಕೆ ಬರೆಯಲಾಗಿದೆ. ಮೂರು ಮಾರ್ಗದ ಬಳಿ ಚರಂಡಿ ಸ್ವತ್ಛಗೊಳಿಸಿ ಸ್ಲ್ಯಾಬ್ ಅಳವಡಿಸಲು 2.30 ಲಕ್ಷ ರೂ.ನ ಟೆಂಡರ್ ಕರೆಯಲಾಗಿದ್ದು, 10 ದಿನಗಳ ಒಳಗಾಗಿ ಅಳವಡಿಸಲಾಗುತ್ತದೆ.
-ಮಹಾವೀರ ಆರಿಗ, ಪಂ.ಪಂ. ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.