ಭರ್ಜರಿ ಪ್ರಚಾರ ಮುಕ್ತಾಯ: ತವರಿನತ್ತ ನಾಯಕರ ಚಿತ್ತ
Team Udayavani, May 9, 2023, 7:44 AM IST
ಇಪ್ಪತ್ತು ದಿನಗಳಿಂದ ನಡೆಯುತ್ತಿದ್ದ ವಿಧಾನಸಭೆ ಚುನಾವಣೆ ಪ್ರಚಾರ ಸೋಮವಾರ ಮುಕ್ತಾಯವಾಗಿದೆ. ಮೇ 10ರಂದು ರಾಜ್ಯಾದ್ಯಂತ ಮತದಾನ ನಡೆಯಲಿದೆ. ಬಿಜೆಪಿ ಪರ ಮೋದಿ, ಅಮಿತ್ ಶಾ, ನಡ್ಡಾ ಸೇರಿ ಪ್ರಮುಖರು ಆಗಮಿಸಿದ್ದರೆ, ಕಾಂಗ್ರೆಸ್ ಪರ ಸೋನಿಯಾ, ರಾಹುಲ್, ಪ್ರಿಯಾಂಕಾ ಮತ ಸೆಳೆಯಲು ಯತ್ನಿಸಿದ್ದಾರೆ. ಜೆಡಿಎಸ್ ವತಿಯಿಂದ ದೇವೇಗೌಡರು, ಕುಮಾರಸ್ವಾಮಿ ಅಖಾಡಾಕ್ಕೆ ಇಳಿದಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದ್ದು, ಮಂಗಳವಾರವೇನಿದ್ದರೂ ಮನೆ ಮನೆ ಪ್ರಚಾರ ನಡೆಯಲಿದೆ. ಬುಧ ವಾರದ ಮತದಾನಕ್ಕೆ ಅಖಾಡ ಸಿದ್ಧವಾಗಿದ್ದು, ತೆರೆಮರೆಯ ಆಟವೂ ಆರಂಭವಾಗಿದೆ.
20 ದಿನಗಳಿಗೂ ಹೆಚ್ಚು ಕಾಲ ರಾಜ್ಯದಲ್ಲಿ ಚುನಾವಣೆಯ ಅಬ್ಬರದ ಪ್ರಚಾರ ಸಭೆಗಳು, ರೋಡ್‌ಶೋಗಳು ನಡೆದವು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪರಸ್ಪರ ಪೈಪೋಟಿಗೆ ಇಳಿ ದವರಂತೆ ಪ್ರಚಾರದಲ್ಲಿ ಮುಳುಗಿದವು. ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; ಕಾಂಗ್ರೆಸ್ ಪರವಾಗಿ ಎಐಸಿಸಿ ಅಧ್ಯಕ್ಷೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ವಾದ್ರಾ, ಜೆಡಿಎಸ್ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಎಸ್‌ಪಿ ಪರವಾಗಿ ಮಾಯಾವತಿ ಅವರು ಪ್ರಮುಖ ಸ್ಟಾರ್ ಪ್ರಚಾ ರಕ ರಾಗಿ ಕಾಣಿಸಿಕೊಂಡು ಮತದಾರರ ಗಮನ ಸೆಳೆದರು.
ಕೊನೆಯ ದಿನವಾದ ಸೋಮವಾರ ಬಿಜೆಪಿ ಯಿಂದ ದಿಲ್ಲಿಯ ಬಹು ತೇಕ ಪ್ರಮುಖ ನಾಯಕರು ಅಖಾಡಾದಲ್ಲಿ ಇರಲಿಲ್ಲ. ಕಾಂಗ್ರೆಸ್‌ನಿಂದ ಪ್ರಿಯಾಂಕಾ ವಾದ್ರಾ ಬೆಂಗಳೂರಿನ ಎರಡು ಕ್ಷೇತ್ರಗಳಲ್ಲಿ ರೋಡ್‌ಶೋ ನಡೆಸಿದರೆ, ರಾಹುಲ್ ಗಾಂಧಿ ಅವರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಜತೆ ಸಮಾಲೋಚಿಸಿದರು.
ಮಂಕಾದ ಜೆಡಿಎಸ್
ಎಲ್ಲರಿಗಿಂತ ಮುನ್ನವೇ ತನ್ನ ಅಭ್ಯರ್ಥಿಗಳ ಪರ ಅಖಾಡಕ್ಕೆ ಇಳಿದ ಕುಮಾರಸ್ವಾಮಿ ರಾಜ್ಯಾದ್ಯಂತ ಜೆಡಿಎಸ್ ಪರ ಪಂಚರತ್ನ ಯಾತ್ರೆ ನಡೆಸಿದರು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ ಅಬ್ಬರದ ಮುಂದೆ ಜೆಡಿಎಸ್ ತುಸು ಮಂಕಾಯಿತು. ಬಿಜೆಪಿ ಇದುವರೆಗೆ 206 ಪ್ರಚಾರ ಸಭೆ ಹಾಗೂ 90 ರೋಡ್ ಶೋ ನಡೆಸಿದರೆ, ಕಾಂಗ್ರೆಸ್ 173 ಪ್ರಚಾರ ಸಭೆ ಹಾಗೂ 55 ರೋಡ್ ಶೋ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಿಜೆಪಿ ಪರ ಬ್ಯಾಟ್ ಬೀಸಿದರೆ, ಕಾಂಗ್ರೆಸ್ ಪರ ಪ್ರಿಯಾಂಕಾ ವಾದ್ರಾ ಈ ಬಾರಿ ಹೆಚ್ಚು ಕಾಣಿಸಿಕೊಂಡರು. ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 57 ಸಾರ್ವಜನಿಕ ಸಭೆ ಹಾಗೂ 35 ರೋಡ್ ಶೋದಲ್ಲಿ ಭಾಗಿಯಾಗುವ ಮೂಲಕ ಉಳಿದೆಲ್ಲ ಪಕ್ಷಗಳ ನಾಯಕರಿಗಿಂತ ಹೆಚ್ಚು ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಇದರ ಜತೆಗೆ ಚಿತ್ರನಟರಾದ ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಘಟಾನುಘಟಿ ಚಿತ್ರ ತಾರೆಯರೂ ಈ ಬಾರಿ ಚುನಾವಣ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.
ತವರಿನತ್ತ ನಾಯಕರ ಚಿತ್ತ
ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರ ಕನಕಪುರ, ರಾಮನಗರದಲ್ಲಿ ಪ್ರಚಾರ ನಡೆಸಿದರೆ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮತ ಯಾ ಚನೆ ನಡೆಸಿದರು. ಯಡಿಯೂರಪ್ಪ, ಚಿತ್ರನಟ ಸುದೀಪ್ ಶಿಕಾರಿ ಪುರ ದಲ್ಲಿ ವಿಜ ಯೇಂದ್ರ ಪರ ವಾಗಿ ಪ್ರಚಾರ ನಡೆಸಿದರು. ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದೆ. ಮಂಗಳವಾರ ಅಭ್ಯರ್ಥಿ ಜತೆಗೆ ಐದಾರು ಮಂದಿ ಮಾತ್ರ ಮನೆ ಮನೆಗೆ ತೆರಳಿ ಮತ ಯಾಚಿಸಲು ಅವಕಾಶವಿದೆ. ಯಾವುದೇ ರೀತಿಯ ಬಹಿರಂಗ ಸಭೆ, ರೋಡ್‌ಶೋಗಳು ಇರುವುದಿಲ್ಲ.
ವಿವಾದದ ಸದ್ದು
ವಿವಾದದ ದೃಷ್ಟಿಯಿಂದಲೂ ಈ ಬಾರಿಯ ಚುನಾವಣೆ ಗಮನ ಸೆಳೆದಿದೆ. ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬರ್ಥದ ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿವಾದದ “ಖಾತೆ’ ಪ್ರಾರಂಭಿಸಿದರೆ, ಪ್ರಧಾನಿ ನರೇಂದ್ರ ಮೋದಿ ಯವರನ್ನು “ವಿಷದ ಹಾವು” ಎಂದು ಕರೆದ ಎಐಸಿಸಿ ಅಧ್ಯಕ್ಷ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಪ್ರಯೋಗಿಸಿದ “ನಾಲಾಯಕ್’ ಪದ ರಾಷ್ಟ್ರಮಟ್ಟ ದಲ್ಲಿ ಸದ್ದು ಮಾಡಿತು. ತನ್ನ ಪ್ರಣಾಳಿಕೆಯಲ್ಲಿ “ಬಜರಂಗ ದಳ’ ಸೇರಿದಂತೆ ಸಂವಿಧಾನ ವಿರೋಧಿ ಕೃತ್ಯ ಎಸಗುವ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಕೊಟ್ಟ ಭರವಸೆ ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.