ಭಟ್ಕಳ: ಆಗಸದಲ್ಲಿ ಸರಣಿ ಬೆಳಕಿನ ಓಟ; ವಿಸ್ಮಯ
Team Udayavani, Dec 21, 2021, 10:19 AM IST
ಭಟ್ಕಳ: ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ ಆಗಸದಲ್ಲಿ ಸರಣಿ ಬೆಳಕಿನ ಓಟ ಕಾಣಿಸಿಕೊಂಡಿದ್ದು ಜನರು ಒಮ್ಮೆ ಇದೆಂತಾ ವಿಸ್ಮಯ ಎಂದು ಆಶ್ಚರ್ಯಚಕಿತರಾಗಿದ್ದಾರೆ. ಒಂದೇ ಸಮನೆ ಆಕಾಶದಲ್ಲಿ ಬೆಳಕಿನ ಸರಣಿ ಓಡುತ್ತಿರುವುದನ್ನು ನೋಡಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.
ಆದರೆ ಇದು ಎಲಾನ್ ಮಾಸ್ಕ್ ಮಾಲೀಕತ್ವದಲ್ಲಿ ಬಾಹ್ಯಾಕಾಶ ಸಂಸ್ಥೆ ಅಮೇರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸರಣಿ ಉಪಗ್ರಹಗಳು ಎನ್ನುವುದು ನಂತರ ತಿಳಿದು ಬಂದಿದೆ. ಕಳೆದ 2018ರಿಂದ ಸರಣಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಸ್ಪೇಸ್ ಎಕ್ಸ್ ಯಶಸ್ವಿಯಾಗಿದ್ದು ಅದರ ಒಂದು ಭಾಗ ಸೋಮವಾರ ಜಿಲ್ಲೆಯ ಆಗಸದಲ್ಲಿ ಗೋಚರಿಸಿದೆ. ಆರಂಭದಲ್ಲಿ ಕೆಲವರು ಇದು ನಕ್ಷತ್ರ ಪುಂಜಗಳೇ ಎನ್ನುವ ಸಂಶಯ ಬಂದಿದ್ದರೂ ಸಹ ಒಂದು ರೈಲಿನಷ್ಟು ಉದ್ದನೆಯ ಬೆಳಕಿನ ಸಾಲು ಕಂಡವರು ಇದೊಂದು ವಿಸ್ಮಯ ಎಂದು ಭಾವಿಸಿದ್ದರು.
ಶಿರಸಿಯ ಭೈರುಂಬೆಯಲ್ಲಿರುವ ಖಗೋಳ ವಿಜ್ಞಾನ ಸಂಸ್ಥೆಯ ವಸಂತ ಹೆಗಡೆ ಅವರು ಇದೊಂದು ಉಪಗ್ರಹಗಳ ಸರಣಿಯಾಗಿದ್ದು ಆಕಾಶದಲ್ಲಿ ಹೋಗುವಾಗ ಸೂರ್ಯನ ಕಿರಣಗಳು ಪ್ರತಿಫಲಿಸುವುದರಿಂದ ಬೆಳಕಿನಲ್ಲಿ ಮಿನುಗುತ್ತಿವೆ. ಭೂಮಿಗೆ ತೀರಾ ಹತ್ತಿರದಿಂದ ಹೋಗುತ್ತಿರುವುದರಿಂದ ಬರಿಗಣ್ಣಿಗೆ ಗೋಚರಿಸುತ್ತಿದೆ ಎಂದು ತಿಳಿಸಿದ್ದಾರೆ. ಆಕಾಶದಲ್ಲಿ ಬೆಳಕಿನ ಓಟವನ್ನು ನೋಡಿದ ಗುಳ್ಮಿಯ ಅಬ್ದುಲ್ ಮಜೀದ್ ಅವರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ವಿವರ ತಿಳಿದುಕೊಳ್ಳುವುದಕ್ಕಾಗಿ ಪತ್ರಕರ್ತರೊಂದಿಗೆ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.