![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 10, 2020, 6:39 PM IST
ಕೋಲಾರ : ಪಂಚಾಯತ್ ಸ್ಥಾನವೊಂದನ್ನು ಐದು ಲಕ್ಷ ರೂಪಾಯಿಗಳಿಗೆ ಹರಾಜು ಹಾಕಿರುವ ಘಟನೆ ತಾಲೂಕಿನ ಬೆದ್ಲಿ ಗ್ರಾಮದಲ್ಲಿ ಜರುಗಿದೆ.
ಹರಾಜು ನಡೆಯುತ್ತಿರುವ ವೀಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುವ ಮೂಲಕ ಹರಾಜು ನಡೆದಿರುವುದನ್ನು ದೃಢೀಕರಿಸುತ್ತಿದೆ.
ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾಗಿ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಮದಲ್ಲಿ ಜಿದ್ದಾಜಿದ್ದಿ ಏರ್ಪಟ್ಟರೆ ಗ್ರಾಮದ ಒಗ್ಗಟ್ಟು ಒಡೆದು ಹೋಗುತ್ತದೆಯೆಂದು ಭಾವಿಸಿರುವ ಗ್ರಾಮಸ್ಥರು ಹರಾಜಿನ ಮೊರೆ ಹೋಗಿದ್ದಾರೆ.
ದೇವಾಲಯವೊಂದರಲ್ಲಿ ಕುಳಿತಿರುವ ಐವತ್ತಕ್ಕೂ ಹೆಚ್ಚು ಗ್ರಾಮಸ್ಥರು ಹಾಗೂ ಗ್ರಾಮದ ಹಿರಿಯರು ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಆರಂಭಿಕವಾಗಿ ಚೀಟಿ ಕೂಗಿದಂತೆ 1.20 ಲಕ್ಷ ರೂಪಾಯಿಗಳಿಂದ ಆರಂಭವಾಗುವ ಹರಾಜು ಬಿಡ್ ಐದು ಲಕ್ಷ ರೂಪಾಯಿವರೆಗೂ ಬಂದು ನಿಲ್ಲುತ್ತದೆ.
ಇದನ್ನೂ ಓದಿ:ಪಶ್ಚಿಮಬಂಗಾಳದಲ್ಲಿ ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ; ದುರ್ಗಾ ಮಾತೆ ಕೃಪೆಯಿಂದ ಬಚಾವ್
ಗ್ರಾಮದ ಶ್ರೀನಿವಾಸ್, ಬೆದ್ಲಿ ಚೌಡರೆಡ್ಡಿ ಹಾಗೂ ಇರಗಸಂದ್ರ ಶ್ರೀರಾಮಪ್ಪ ಸೇರಿದಂತೆ ನಾಲ್ವರ ನಡುವೆ ಬಿಡ್ ಪೈಪೋಟಿ ನಡೆದು ಅಂತಿಮವಾಗಿ ಶ್ರೀರಾಮಪ್ಪ ಐದು ಲಕ್ಷ ರೂಗಳಿಗೆ ಬಿಡ್ ಗೆಲ್ಲುತ್ತಾರೆ.
ಹರಾಜು ಪ್ರಕ್ರಿಯೆಯನ್ನು ಪೂರ್ತಿ ವೀಡಿಯೋ ಮಾಡಲಾಗಿದ್ದು, ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡಲಾಗಿದೆ. ಈ ಹರಾಜು ಪ್ರಕ್ರಿಯೆ ಕುರಿತಂತೆ ಯಾರೂ ದೂರು ದಾಖಲಿಸಿಲ್ಲವಾದರೂ, ಗ್ರಾಮದಲ್ಲಿಯೇ ಹರಾಜಿಗೆ ವಿರೋಧ ವ್ಯಕ್ತವಾಗಿದೆಯೆನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹರಾಜು ಕೂಗಿದರೂ ಕೆಲವರು ಇದನ್ನು ವಿರೋಧಿಸಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನ ಮುಗಿಯುವವರೆಗೂ ಗ್ರಾಮಸ್ಥರು ಹರಾಜಿಗೆ ಯಾವ ರೀತಿ ಬದ್ಧರಾಗಿರುತ್ತಾರೆಂಬುದು ಕಾದು ನೋಡಬೇಕಾಗಿದೆ.
ಈ ಘಟನೆಯು ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.