ಬೀದರ್ ಒಂದೇ ದಿನ 88 ಪಾಸಿಟಿವ್ ಪತ್ತೆ! 2023ಕ್ಕೆ ಏರಿದ ಸೋಂಕಿತರ ಸಂಖ್ಯೆ
ಜಿಲ್ಲೆಯಲ್ಲಿ 582 ಸಕ್ರೀಯ ಪ್ರಕರಣ
Team Udayavani, Jul 29, 2020, 7:53 PM IST
ಬೀದರ್ : ಗಡಿ ನಾಡು ಬೀದರನಲ್ಲಿ ಹೆಮ್ಮಾರಿ ಕೋವಿಡ್ ಸೋಂಕು ಬೆಂಬಿಡದೇ ಕಾಡುತ್ತಿದ್ದು, ಬುಧವಾರ ಒಂದೇ ದಿನ ೮೮ ಪಾಸಿಟಿವ್ ಪ್ರಕರಣ ವರದಿಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ.
ಬುಧವಾರ ಬೀದರ್ ನಗರ ಮತ್ತು ತಾಲೂಕಿನಲ್ಲಿ ಅತಿ ಹೆಚ್ಚು 25 ಜನರಿಗೆ ಸೋಂಕು ಪತ್ತೆಯಾಗಿದೆ. ಔರಾದ- ಕಮಲನಗರ ತಾಲೂಕು 23 ಜನ, ಹುಮನಾಬಾದ- ಚಿಟಗುಪ್ಪ ತಾಲೂಕಿನ 21 ಜನ, ಬಸವಕಲ್ಯಾಣ- ಹುಲಸೂರು ತಾಲೂಕು 12 ಜನ, ಭಾಲ್ಕಿ ತಾಲೂಕು 7 ಜನರಲ್ಲಿ ವೈರಾಣು ಕಾಣಿಸಿಕೊಂಡಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಈಗ 2023ಗೆ ಏರಿಕೆ ಕಂಡಿದೆ. ಈ ಪೈಕಿ 72 ಮಂದಿ ಸಾವನ್ನಪ್ಪಿದ್ದರೆ, ಈವರೆಗೆ 1365 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಸದ್ಯ 582 ಪ್ರಕರಣಗಳು ಸಕ್ರೀಯವಾಗಿವೆ.
ಬೀದರ್ ನಗರದ ಬ್ರಿಮ್ಸ್ 5, ನಜರೇತ ಕಾಲೋನಿ 4, ದೇವಿ ಕಾಲೋನಿ, ಗುಂಪಾ, ವಿದ್ಯಾನಗರ ತಲಾ 2, ನಂದಿ ಕಾಲೋನಿ, ಕೊಳಾರ ಲಕ್ಷ್ಮಿ ಮಂದಿರ ಬಳಿ, ಆಣದೂರ ಮುಖ್ಯರಸ್ತೆ, ಮನ್ನಳ್ಳಿ, ಕೆಐಎಡಿಬಿ ನೌಬಾದ್, ಚಟನಳ್ಳಿ, ಮಂಗಲಪೇಟ, ಕೊಳಾರ (ಬಿ), ನೌಬಾದ್, ಅಷ್ಟೂರನಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. ಹುಮನಾಬಾದ ಪಟ್ಟಣದ ಜನತಾ ನಗರ 9, ಇಂದಿರಾ ಕ್ಯಾಂಟೀನ್ ಎದುರು 3, ಟಿಎಂಸಿ, ವಾಂಜರಿ ತಲಾ 1, ದುಬಲಗುಂಡಿ 3, ಧುಮ್ಮನಸೂರು, ಹುಡಗಿ ಗ್ರಾಮದಲ್ಲಿ ತಲಾ 1 ಸೋಂಕಿತರು ಪತ್ತೆಯಾಗಿದ್ದಾರೆ.
ಬಸವಕಲ್ಯಾಣ ನಗರ 1, ಶಿವನಗರ 2, ತಾಲೂಕಿನ ಖಂಡಾಳ, ಉಮಾಪುರ, ಕೈಕಾಡಿಗಲ್ಲಿ, ರಾಜೇಶ್ವರಿ ಸಿಎಚ್‌ಸಿಯಲ್ಲಿ ತಲಾ 1 ಮತ್ತು ಹುಲಸೂರು ಪಟ್ಟಣದಲ್ಲಿ 5 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಔರಾದ ತಾಲೂಕಿನ ಬೋರ್ಗಿ 5, ಮಸ್ಕಲ್ 3, ಸಂತಪೂರ, ಮುರ್ಕಿ ತಲಾ2, ಸುಂಕನಾಳ, ಬಳತ್, ಸಂಗನಾಳ, ಔರಾದ ಪಟ್ಟಣ, ರಾಯಪಳ್ಳಿ ಮತ್ತು ವಡಗಾಂವ್ ಗ್ರಾಮದಲ್ಲಿ ತಲಾ ಒಬ್ಬರಿಗೆ, ಕಮಲನಗರ ತಾಲೂಕಿನ ತೋರಣಾ 3, ಬಳತ್ (ಬಿ) 1 ಹಾಗೂ ಚಿಟಗುಪ್ಪ ಪಟ್ಟಣದ ಸುಭಾಶ ಚೌಕ್‌ನ 1, ಭಾಲ್ಕಿ ಪಟ್ಟಣದ ಹಿರ್ಮದ್‌ಗಲ್ಲಿ, ಅಶೋಕನಗರ, ಟೌನ್ ಪೊಲೀಸ್ ಠಾಣೆಯಲ್ಲಿ ತಲಾ 1, ಜಾಧವ್ ಆಸ್ಪತ್ರೆ, ಲೆಕ್ಚರರ್ ಕಾಲೋನಿಯಲ್ಲಿ ತಲಾ 2 ಕೇಸ್‌ಗಳು ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.