ವಿಧಾ ಕದನ 2023: ಆಡಳಿತ ವಿರೋಧಿ ಅಲೆಯೇನೂ ಇರಬಹುದು ಬಲೆ ಇದೆಯಾ?


Team Udayavani, Mar 11, 2023, 7:30 AM IST

CONG

ಉಡುಪಿ: ಮುಂಬರುವ ಚುನಾವಣೆಯಲ್ಲಿ ಹಿಂದಿನ ಬಾರಿಗಿಂತ ಅತ್ಯುತ್ತಮ ಪ್ರದರ್ಶನ ನೀಡಲು ವಿಪಕ್ಷ ಕಾಂಗ್ರೆಸ್‌ ಜಿಲ್ಲೆಯಲ್ಲೂ ವ್ಯಾಪಕ ಸಿದ್ಧತೆ ನಡೆಸಿದೆ.
ಆಡಳಿತ ಪಕ್ಷದ ವಿರುದ್ಧ ಸಹಜವಾಗಿ ಇರಬಹುದಾದ ಆಡಳಿತ ವಿರೋಧಿ ಅಲೆಯನ್ನು ತನ್ನ ಪರವಾಗಿ ತಿರುಗಿಸಿಕೊಳ್ಳುವುದು ಕಾಂಗ್ರೆಸ್‌ನ ಉದ್ದೇಶ. ಜಿಲ್ಲೆ ಸಹಿತ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯ ಲಾಭವನ್ನು ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್‌ ಸಮರ್ಥವಾಗಿ ದುಡಿಸಿಕೊಂಡಿದೆ. ಅಂಥದ್ದೇ ಮತ್ತೂಂದು ಪ್ರಯತ್ನಕ್ಕೆ ಈಗ ಕಾಂಗ್ರೆಸ್‌ ಮುಂದಾಗಿದೆ.

ಈ ಬಾರಿಯ ಚುನಾವಣೆಯಲ್ಲೂ ಜನರೆದುರು ಕೊಂಡೊಯ್ಯಲು ಜಿಲ್ಲಾ ಕಾಂಗ್ರೆಸ್‌ಗೂ ಹಲವು ವಿಷಯಗಳಿವೆ. ಆದರೆ ಅದನ್ನು ಹೇಗೆ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲಿದೆ ಎಂಬ ಕೌತುಕ ಎಲ್ಲರಲ್ಲೂ ಇದೆ.

ಆಡಳಿತ ಪಕ್ಷದೊಳಗಿನ ಕಚ್ಚಾಟ, ಭ್ರಷ್ಟಾಚಾರವು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ಅಸ್ತ್ರವಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪಾದಯಾತ್ರೆಯನ್ನು ನಡೆಸಲಾಗಿತ್ತು. ಜಿಲ್ಲೆಯಲ್ಲೂ ಹೆಜಮಾಡಿಯಿಂದ ಮಲ್ಪೆಯವರೆಗೂ ಪಾದಯಾತ್ರೆ ನಡೆದಿತ್ತು. ಇದರ ಫ‌ಲವಾಗಿ ಜಿಲ್ಲೆಯ ಐದರಲ್ಲಿ ಮೂರು ಕ್ಷೇತ್ರಗಳಾದ ಬೈಂದೂರು, ಕಾಪು ಹಾಗೂ ಉಡುಪಿ ಕಾಂಗ್ರೆಸ್‌ ವಶವಾಗಿತ್ತು. ರಾಜ್ಯ ಮಟ್ಟದಲ್ಲೂ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್‌ ಐದು ವರ್ಷ ಅಧಿಕಾರ ನಡೆಸಿತ್ತು. ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಜತೆಗೆ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಸ್ಥಾನವೂ ಜಿಲ್ಲೆಗೆ ಲಭಿಸಿತ್ತು. 2004 ಮತ್ತು 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತಲಾ ಒಂದು ಕ್ಷೇತ್ರವನ್ನು ಮಾತ್ರ ಗೆದ್ದಿತ್ತು.

ಆದರೆ 2013ರ ಸಾಧನೆಯನ್ನು 2018ರಲ್ಲಿ ತೋರಲು ಸಾಧ್ಯವಾಗಲಿಲ್ಲ. ಆಗ ಕಾಂಗ್ರೆಸ್‌ ಕೂಡ ಆಡಳಿತ ವಿರೋಧಿ ಅಲೆಯ ತಾಪ ಅನುಭವಿಸಬೇಕಾಯಿತು. ಜತೆಗೆ ಪ್ರಧಾನಿ ಮೋದಿ ಪರವಾದ ಅಲೆಯಿತ್ತು. ಎಲ್ಲದರ ಪರಿಣಾಮವಾಗಿ ಎಲ್ಲ ಐದೂ ಸ್ಥಾನಗಳಲ್ಲಿ ಕಾಂಗ್ರೆಸ್‌ ಪ್ರಬಲ ಪೈಪೋಟಿ ನೀಡಿತ್ತಾದರೂ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಎಲ್ಲವೂ ಬಿಜೆಪಿ ಪಾಲಾದವು.

ಈ ಚುನಾವಣೆಯಲ್ಲೂ ಕಾಂಗ್ರೆಸ್‌ 2013 ರ ಹುಮ್ಮಸ್ಸಿನಲ್ಲಿದೆ. ಇದಕ್ಕೆ ಪೂರಕವೆನ್ನುವಂತೆ ಬಿಜೆಪಿ ಸರಕಾರದ ಮೇಲಿರುವ ಶೇ.40 ಕಮಿಷನ್‌ ವಿಷಯದೊಂದಿಗೆ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳು, ಆಡಳಿತ ಪಕ್ಷದೊಳಗಿನ ಗೊಂದಲ, ಕೆಲವೆಡೆ ಇರುವ ಸ್ಥಳೀಯ ಗುಂಪುಗಾರಿಕೆ, ಡ್ರಗ್ಸ್‌ ಇತ್ಯಾದಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂಥ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಜಿಲ್ಲಾಡಳಿತದ ವೈಫ‌ಲ್ಯ ಇತ್ಯಾದಿಯನ್ನು ಮತದಾರರ ಬಳಿ ಕೊಂಡೊಯ್ಯುವ ರಣತಂತ್ರ ರೂಪಿಸತೊಡಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ 2 ಬಾರಿ ಜಿಲ್ಲೆಗೆ ಭೇಟಿ ನೀಡಿ ಗೆಲ್ಲಲು ಬೇಕಾದ ರಣತಂತ್ರ ರೂಪಿಸಲು ಜಿಲ್ಲಾ ನಾಯಕರಿಗೆ ಮಾರ್ಗದರ್ಶನ ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನ ಪ್ರಮುಖ ಘೋಷಣೆಗಳಾದ ಗೃಹಲಕ್ಷ್ಮೀ, ಉಚಿತ ವಿದ್ಯುತ್‌ ಹಾಗೂ 10 ಕೆ.ಜಿ. ಉಚಿತ ಅಕ್ಕಿ ವಿಷಯವನ್ನು ಮುಖ್ಯವಾಗಿಸಿಕೊಂಡು ಪ್ರಚಾರ ಪ್ರಕ್ರಿಯೆಯನ್ನು ಸ್ಥಳೀಯ ನಾಯಕರು ಜಿಲ್ಲೆಯಲ್ಲಿ ಆರಂಭಿಸಿದ್ದಾರೆ.

ಪ್ರಜಾಧ್ವನಿ ಯಾತ್ರೆಯನ್ನು ಉಡುಪಿ ನಗರದಲ್ಲಿ ಆಯೋಜಿಸಿದ್ದು ಮಾತ್ರವಲ್ಲದೆ, ಕರಾವಳಿ ಪ್ರಜಾಧ್ವನಿ ಎಂಬ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಹೆಜಮಾಡಿಯಿಂದ ಹೊರಟ ಯಾತ್ರೆ ಪಡುಬಿದ್ರಿ, ಮಂಚಕಲ್‌, ಕಟಪಾಡಿ, ಆತ್ರಾಡಿ ಮಾರ್ಗವಾಗಿ ಹಿರಿಯಡಕ ತಲುಪಿತ್ತು. ಇದರ ಮೇಲುಸ್ತವಾರಿಯನ್ನು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ಗೆ ಚೈತನ್ಯ ತುಂಬುವ ಪ್ರಯತ್ನ ಭರದಿಂದ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಕಣದ ಚಿತ್ರಣ ಮತ್ತಷ್ಟು ಬದಲಾಗಲಿದೆ. ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಜಿಲ್ಲೆಯ ಕೊಡುಗೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ನಿಂದ ಈಗಾಗಲೇ ಘೋಷಿಸಲಾಗಿರುವ ಗ್ಯಾರಂಟಿ ಕಾರ್ಡ್‌ಗಳನ್ನೇ ಮುಂದಿಟ್ಟು ಪಕ್ಷದ ಕಾರ್ಯಕರ್ತರು ಜನರ ಮುಂದೆ ಹೋಗುತ್ತಿದ್ದಾರೆ. ಅಭ್ಯರ್ಥಿಗಳ ಘೋಷಣೆ ಹಾಗೂ ಚುನಾವಣ ದಿನಾಂಕ ಪ್ರಕಟಗೊಂಡ ಬಳಿಕ ಪಕ್ಷದಿಂದ ಪ್ರಚಾರ ಕಾರ್ಯ ಮತ್ತಷ್ಟು ಬಿರುಸುಗೊಳ್ಳಲಿದೆ.

-ಹರೀಶ್‌ ಕುಮಾರ್‌, ಅಧ್ಯಕ್ಷರು, ಕಾಂಗ್ರೆಸ್‌, ದ.ಕ.

ಪಕ್ಷ ಘೋಷಿಸಿರುವ ಗ್ಯಾರಂಟಿ ಕಾರ್ಡ್‌ಗಳನ್ನು ಜಿಲ್ಲೆಯ ಮನೆ ಮನೆಗೆ ತಲುಪಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ. ಅನಂತರದಲ್ಲಿ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮವನ್ನು ಉಡುಪಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಲಿದ್ದೇವೆ. ಚುನಾವಣೆಗೆ ಬೇಕಾದ ಸಿದ್ಧತೆಯನ್ನು ಬೂತ್‌ ಮಟ್ಟದಲ್ಲಿ ಮಾಡಿಕೊಳ್ಳುತ್ತಿದ್ದೇವೆ.
-ಅಶೋಕ್‌ ಕುಮಾರ್‌ ಕೊಡವೂರು, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

2018ರಲ್ಲಿ ಶೂನ್ಯಸಾಧನೆ
ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಜಿಲ್ಲಾ ತಂಡವೂ ಬ್ಲಾಕ್‌ ಸಮಿತಿಯ ಜತೆ ಸೇರಿ ಬೂತ್‌ ಮಟ್ಟದಲ್ಲಿ ಸಂಘಟನಾತ್ಮಕ ಕಾರ್ಯವನ್ನು ಚುರುಕುಗೊಳಿಸಿದೆ. ಜಿಲ್ಲೆಯಲ್ಲಿ 2004ರ ಮೊದಲು 6 ಕ್ಷೇತ್ರ ಹಾಗೂ ಅನಂತರ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 1972ರಿಂದ 2013ರ ವರೆಗೆ ಕಾಂಗ್ರೆಸ್‌ ಒಂದಲ್ಲೊಂದು ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸಿರುವುದು ವಿಶೇಷ. ಕಾಪು, ಬೈಂದೂರು, ಕುಂದಾಪುರ ಹಾಗೂ ಕಾರ್ಕಳ, ಉಡುಪಿಯಲ್ಲಿ ಬಹುದೀರ್ಘ‌ ಅವಧಿಗೆ ಆಡಳಿತ ನಡೆಸಿರುವ ಇತಿಹಾಸವೂ ಇದೆ. ಆದರೆ 2018ರಲ್ಲಿ ಮಾತ್ರ ಒಂದೂ ಕ್ಷೇತ್ರ ಜಯಿಸಿರಲಿಲ್ಲ.

ಉಡುಪಿ ನಾಯಕತ್ವದ ಕೊರತೆ
ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನದೇ ಆದ ಮತ ಬ್ಯಾಂಕ್‌ ಹೊಂದಿದ್ದರೂ 2013ರಲ್ಲಿ ಇದ್ದಷ್ಟು ಸಮಾಧಾನಕರ ಅಂಶಗಳು ಇಲ್ಲ. ಹತ್ತು ವರ್ಷಗಳಲ್ಲಿ ಬೂತ್‌ ಮಟ್ಟದಲ್ಲಿನ ಸಂಪರ್ಕ ಜಾಲ ಬಹಳ ಸಡಿಲಗೊಂಡಿದೆ. ಅದನ್ನು ಮತ್ತೆ ಗಟ್ಟಿಗೊಳಿಸುವ ಯತ್ನವಾಗಿ ಬೂತ್‌ ಅಭಿಯಾನ ಇತ್ತೀಚೆಗಷ್ಟೇ ನಡೆಸಲಾಗಿದೆ. ಮತ ಬ್ಯಾಂಕ್‌ ಸಹ ಛಿದ್ರವಾಗಿ ಒಂದಿಷ್ಟು ಸಮುದಾಯದ ಮತಗಳು ಬೇರೆ ಪಕ್ಷಗಳಿಗೂ ಹಂಚಿಹೋಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಇದ್ದರೂ ಪಕ್ಷ ಮತ್ತು ವೈಯಕ್ತಿಕ ವರ್ಚಸ್ಸಿನಿಂದ ಮತಗಳನ್ನು ತರುವ ನಾಯಕತ್ವದ ಕೊರತೆ ಕಾಣುತ್ತಿದೆ. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಸಹ ಬಿಜೆಪಿಯನ್ನು ಸೇರಿದ್ದು, ಆ ಹೊಣೆಯನ್ನು ಯಾರಿಗೆ ವಹಿಸುತ್ತಾರೆಂಬುದೂ ಪ್ರಮುಖವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉತ್ಸಾಹ

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎಲ್ಲ ಎಂಟು ಕ್ಷೇತ್ರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಶ್ರಮಿಸುತ್ತಿದೆ. ಕರಾವಳಿಗೆ ಪ್ರತ್ಯೇಕ ಗ್ಯಾರಂಟಿ ಕಾರ್ಡ್‌ ಸಿದ್ಧ ಪಡಿಸಿಕೊಂಡಿರುವ ಕಾಂಗ್ರೆಸ್‌, ಅದನ್ನೇ ತನ್ನ ಪ್ರಮುಖ ದಾಳವಾಗಿಸಿಕೊಂಡು ಮನೆ ಭೇಟಿ ಕಾರ್ಯವನ್ನು ಚುರುಕುಗೊಳಿಸಿದೆ. 2013ರ‌ಲ್ಲಿ ಕರಾವಳಿಯಲ್ಲಿ ಪಾದಯಾತ್ರೆ ಮೂಲಕ ಗಮನ ಸೆಳೆದಿದ್ದ ಪಕ್ಷದ ನಾಯಕರು ಈ ಬಾರಿ ಪ್ರಜಾಧ್ವನಿಯ ಮೂಲಕ ಅಬ್ಬರದ ಸಮಾವೇಶ ನಡೆಸಿದ್ದಾರೆ. 1999ರಲ್ಲಿ 9 ಕ್ಷೇತ್ರಗಳನ್ನು ಹೊಂದಿದ್ದರೂ 2004ರಲ್ಲಿ ಗೆದ್ದದ್ದು ಕೇವಲ ಎರಡು ಕ್ಷೇತ್ರಗಳನ್ನು. ಆದರೆ 2008ರಲ್ಲಿ 4 ಗೆದ್ದಿತ್ತು. 2013ರಲ್ಲಿ ಎಂಟರಲ್ಲಿ 7 ಕ್ಷೇತ್ರ
ಗಳನ್ನು ವಶಪಡಿಸಿಕೊಂಡಿತ್ತು. 2018ರಲ್ಲಿ ಮೋದಿ ಅಲೆ ಸಹಿತ ಹತ್ತಾರು ಕಾರಣ ಗಳಿಂದ ಫ‌ಲಿತಾಂಶ ಸಂಪೂರ್ಣ ಉಲ್ಟಾ ಆಯಿತು. ಏಳರಲ್ಲಿ ಬಿಜೆಪಿ ಗೆದ್ದರೆ, ಒಂದು ಮಾತ್ರ ಕಾಂಗ್ರೆಸ್‌ ಪಾಲಾಯಿತು. ಈಗ ಒಂದಿಷ್ಟು ರಾಜಕೀಯ ವಾತಾವರಣ ಪೂರಕ ಎನಿಸಿಕೊಂಡು 2013ರ ಫ‌ಲಿತಾಂಶವನ್ನು ಪುನರಾವರ್ತಿಸಲು ಹರ ಸಾಹಸ ಪಡುತ್ತಿದೆ.
ಚುನಾವಣೆ ಘೋಷಣೆ ಹಾಗೂ ಪಕ್ಷದ ಅಭ್ಯರ್ಥಿಗಳ ಘೋಷಣೆ ಬಳಿಕವಷ್ಟೇ ಮನೆ ಭೇಟಿ ಮೂಲಕ ಪ್ರಚಾರ ಬಿರುಸು ಗೊಳ್ಳಬೇಕಿದ್ದರೂ ಮತದಾರರನ್ನು ಭೇಟಿ ಮಾಡುವ ಕಾರ್ಯತಂತ್ರ ರೂಪಿಸುತ್ತಿ ದ್ದಾರೆ. ಕೆಲವು ಟಿಕೆಟ್‌ ಆಕಾಂಕ್ಷಿಗಳು ಈಗಾಗಲೇ ಮತದಾರರನ್ನು ಭೇಟಿ ಮಾಡಲು ಆರಂಭಿಸಿದ್ದಾರೆ.

~ರಾಜು ಖಾರ್ವಿ ಕೊಡೇರಿ/ಸತ್ಯಾ ಕೆ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.