BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
ರಜತ್ ಗೆ ನೀನು ಜುಟ್ಟು.. ಬೇ*ವಾ* ಎಂದ ಮಂಜು
Team Udayavani, Dec 17, 2024, 10:58 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳ ನಡುವೆ ವಾರದ ಟಾಸ್ಕ್ ಗಳು ನಡೆದಿದೆ. ರಜತ್ – ತ್ರಿವಿಕ್ರಮ್ ಅವರ ನಡುವಿನ ತಂಡಗಳು ಗೆಲುವಿಗಾಗಿ ಕಸರತ್ತು ನಡೆಸಿವೆ.
ಗೌತಮಿ – ಮಂಜು ನಡುವೆ ಹೆಚ್ಚಾಯಿತು ಅಂತರ..
ಟಾಸ್ಕ್ ನಡೆಯುವ ವಿಚಾರದಲ್ಲಿ ಮಧ್ಯದಲ್ಲಿ ಮಾತನಾಡಿದ ಮಂಜು ಅವರಿಗೆ ಗೌತಮಿ ಮಾತನಾಡಬೇಡಿ ಎಂದಿದ್ದಾರೆ. ಇದಕ್ಕೆ ಮಂಜು ಸಿಟ್ಟಾಗಿ ನಾನು ಅವರ ಜತೆ ಮಾತನಾಡುತ್ತಿದ್ದೇನೆ. ನಾನು ಮಾತನಾಡೋದೇ ತಪ್ಪಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಗೌತಮಿ ನಿಮಗೆ ಕನ್ನಡದಲ್ಲಿ ಹೇಳಿದ್ರೆ ಅರ್ಥ ಆಗಲ್ಲ. ನಿಮ್ಮ ಹತ್ರ ಕೂತುಕೊಳ್ಳೋದೇ ತಪ್ಪು. ನನ್ನ ಹತ್ರ ಮಾತನಾಡಬೇಡಿ. ಟಾಸ್ಕ್ ವಿಚಾರಕ್ಕೆ ಎಷ್ಟು ಸಲಿ ಅಂಗಿಸಿ ಮಾತನಾಡಿದ್ದೀರಿ. ನನ್ನನ್ನು ಮುಟ್ಟಿ ಮಾತನಾಡಬೇಡಿ. ನನ್ನನ್ನು ಬಂದು ಪದೇ ಪದೇ ಮಾತನಾಡಿಸಬೇಡಿ ಎಂದು ಗೌತಮಿ ಮಂಜು ಅವರಿಗೆ ಹೇಳಿದ್ದಾರೆ.
ನಾಮಿನೇಟ್ ವಿಚಾರಕ್ಕೆ ಗರಂ ಆದ ರಜತ್:
ಟಾಸ್ಕ್ ನಲ್ಲಿ ಸೋತ ಕಾರಣಕ್ಕೆ ತ್ರಿವಿಕ್ರಮ್ ಅವರ ತಂಡ ರಜತ್ ಅವರನ್ನು ನಾಮಿನೇಟ್ ಮಾಡಿದೆ.
ರಜತ್ ಅವರು ಎಲ್ಲರನ್ನು ವೈಯಕ್ತಿಕವಾಗಿ ಆಡಿ ಎಂದು ಪ್ರಚೋದಿಸುತ್ತಾರೆ. ಅವರನ್ನೇ ಶ್ರೇಷ್ಠವೆಂದುಕೊಂಡಿದ್ದಾರೆ. ಮನೆ ಕೆಲಸದ ವಿಚಾರದಲ್ಲೂ ಕೇರ್ ಲೆಸ್ ತೋರಿಸುತ್ತಾರೆ ಎನ್ನುವ ಕಾರಣವನ್ನು ನೀಡಿ ತ್ರಿವಿಕ್ರಮ್ ರಜತ್ ಅವರನ್ನು ನಾಮಿನೇಟ್ ಮಾಡಿದ್ದಾರೆ.
ನಾಮಿನೇಷನ್‌ಗೆ ಕೊಟ್ಟ ಕಾರಣವನ್ನು ಕೇಳಿ ರಜತ್ ಗರಂ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ಇದೆಲ್ಲ ನನಗೆ ಎಫೆಕ್ಟ್ ಆಗಲ್ಲ. ನನ್ನನ್ನು ನಾನು ಸುಪ್ರೀರಿಯರ್ ಅಂದುಕೊಂಡರೆ ಏನು ತಪ್ಪು.ವೈಯಕ್ತಿಕವಾಗಿ ಆಡಿ ಯಾಕೆ ತಾಕತ್ತಿಲ್ವಾ? ನಾನು ಸುಪ್ರೀರಿಯರ್, ನಾನು ಕರಾಬು, ನಾನೇ ಮಸ್ತ್. ನಾನು ಇರೋದೆ ಹೀಗೆ.
ನಾಮಿನೇಷನ್ ಮಾಡಿದರೆ ಚೇಂಜ್ ಆಗ್ತೇನಾ ನಾನು? ನಾಳೆಯಿಂದ ಬೇರೆಯವರನ್ನು ಹೀರೋ ಅಂತೀನಾ? ನಾನೇ ಹೀರೋ ಎಂದು ಚಿಟಿಕೆ ಹೊಡೆದು ಸವಾಲು ಎಸೆದಂತೆ ಹೇಳಿದ್ದಾರೆ.
ಟಾಸ್ಕ್ ನಲ್ಲಿ ತ್ರಿವಿಕ್ರಮ್ ಟೀಮ್ ಮೇಲುಗೈ:
ಮೊದಲ ಟಾಸ್ಕ್ ಆಡಿದ ಚೈತ್ರಾ ಹಾಗೂ ಐಶ್ವರ್ಯಾ ಅವರ ನಡುವೆ ಟೈ ಆಗಿದೆ. ಎರಡನೇ ಸುತ್ತನ್ನು ಹನುಮಂತು ಹಾಗೂ ತ್ರಿವಿಕ್ರಮ್ ಅವರು ಆಡಿದ್ದಾರೆ. ಈ ಸುತ್ತಿನಲ್ಲಿ ತ್ರಿವಿಕ್ರಮ್ ಅವರ ತಂಡ ಗೆದ್ದಿದೆ.
ಯೋಗ್ಯತೆ ಮಾತು.. ರಜತ್ – ಚೈತ್ರಾ ನಡುವೆ ದೊಡ್ಡ ಹೈಡ್ರಾಮಾ:
ಎರಡು ತಂಡಗಳಿಗೂ ʼಚೆಂಡು ಸಾಗಲಿ ಮುಂದೆ ಹೋಗಲಿʼ ಎಂಬ ಟಾಸ್ಕ್ ನೀಡಿದ್ದು, ಉಸ್ತುವಾರಿ ಮಾಡಿದ ಚೈತ್ರಾ ಅವರು ಫಾಲ್ ಎಂದಿದ್ದಾರೆ. ಆಟದ ನಡುವೆ ಮಧ್ಯದಲ್ಲಿ ಮಾತನಾಡಿದ ರಜತ್ ಅವರಿಗೆ ಇನ್ನು ಒಂದು ಅಕ್ಷರ ಮಾತನಾಡಿದ್ರೆ ಫಾಲ್ ಕೊಡ್ತೇನೆ ಎಂದಿದ್ದಾರೆ. ಸುಮ್ಮನೆ ಇಲ್ಲದಿದ್ರೆ ನಾನು ಮತ್ತೆ ಫಾಲ್ ಕೊಡ್ತೇನೆ. ಟೇಬಲ್ ಹತ್ರ ಬಂದ್ರೆ ಮತ್ತೆ ಫಾಲ್ ಕೊಡ್ತೇನೆ ಎಂದಿದ್ದಾರೆ. ನಿನ್ನ ರೌಡಿಸಂ ಎಲ್ಲ ನನ್ನ ಹತ್ರ ಇಟ್ಟುಕೊಳ್ಳಬೇಡ ಎಂದಿದ್ದಾರೆ.
ಇದಕ್ಕೆ ಚೈತ್ರಾ ರಜತ್ ಏನು ಮಾತನಾಡುತ್ತಿದ್ದೀಯಾ ಎಂದು ಚೈತ್ರಾ ಅವರನ್ನು ದೂಡಿದ್ದಾರೆ. ಆಟ ಆಡಬೇಡ ಬಿಡು ಎಂದು ಆಟದ ಸಾಮ್ರಾಗಿ ಎಲ್ಲವನ್ನು ಸಿಟ್ಟಿನಲ್ಲಿ ಬಿಸಾಕಿದ್ದಾರೆ. ಗೆಲ್ಲೋಕೆ ಅಂತೂ ನಿನಗೆ ಯೋಗತ್ಯ ಇಲ್ಲವೆಂದಿದ್ದಾರೆ.
ಚೈತ್ರಾ ಹೋಗಲೋ. ತಾಯ್ತಾ ಕಟ್ಟಿಸುತ್ತೇನೆ. ಅಂದವರು ಎಲ್ಲ ಕಟ್ಟಿಸ್ಕೊಂಡು ಹೋಗ್ತಾರೆ. ತಾಕತ್ತಿದ್ರೆ ಬಾರೋ. ಮೈ ಮುಟ್ಟಿ ಮಾತನಾಡ್ತಾರೆ ನನ್ನ ಹತ್ರ ತೋರಿಸುತ್ತೇನೆ. ಎರಡು ಸಲಿ ಮೈ ಮುಟ್ಟಿದ್ದೀಯಾ ಇದಕ್ಕೆ ಉತ್ತರ ಕೊಟ್ಟೇ ಕೊಡುತ್ತೇನೆ ಎಂದು ಚೈತ್ರಾ ಹೇಳಿದ್ದಾರೆ.
ಇಂತವರಿಂದ ನನ್ನ ತಲೆ ಕೂದಲು ಅಲ್ಲಾಡಲ್ಲ. ಇವರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ. ಇಂತಹವರನ್ನು ನಾನು ಲೈಫ್ ಅಲ್ಲಿ ತುಂಬಾ ಜನರನ್ನು ನೋಡಿದ್ದೇನೆ ಚೈತ್ರಾ ರಜತ್ ಮೇಲೆ ರೇಗಾಡಿದ್ದಾರೆ.
ಮಂಜು – ರಜತ್ ನಡುವೆ ಮಾತಿನ ಚಕಮಕಿ:
ಇನ್ನೊಂದೆಡೆ ಮಂಜು ಟಿವಿಯಲ್ಲಿ ಗೇಮ್ ನೋಡ್ಕೊಂಡು ಬಂದವರದ್ದು ಎಲ್ಲ ಇದೇ ಕಥೆ ಎಂದಿದ್ದಾರೆ. ಇದನ್ನು ಕೇಳಿ ರಜತ್ ನೀನೇನು ಸಾಚಾ ತರಾ ಮಾತನಾಡುತ್ತಾ ಇದ್ದೀಯಾ. ಸಾಚಾ ಅನ್ನುವವರನ್ನು ನಾನು ನೋಡ್ಕೊಂಡೇ ಬಂದಿರೋದು ಎಂದಿದ್ದಾರೆ.
ಏನೋ ಮಾಡುತ್ತೀಯಾ, ಮುಟ್ಟುತ್ತೀಯಾ, ಮುಟ್ಟಲೋ, ತಾಕತ್ತಿದ್ರೆ ಮುಟ್ಟೋ ಎಂದು ಮಾತಿಗೆ ಮಾತು ಬೆಳೆಸಿ ಹೊಡೆಯಲು ಹೋದಂತೆ ಹೋಗಿದ್ದಾರೆ.
ಮಂಜು – ರಜತ್ ನಡುವೆ ಹಲ್ಲೆಗೆ ಹೋಗುವವರೆಗೆ ವಾಗ್ವಾದ ನಡೆದಿದೆ.
ನಿನ್ನ ತರ ಬೇಕಂತ ಮೈಮುಟ್ಟಿಲ ನಾನು ಎಂದು ರಜತ್ ಮಂಜು ಮೇಲೆ ರೇಗಾಡಿದ್ದಾರೆ. ನೀನು ಜುಟ್ಟು ಮಗನೇ ಎಂದು ಮಂಜು ರಜತ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಟ್ಟಿನ ಭರದಲ್ಲಿ ಮಂಜು ‘ಬೇವಾರ್ಸಿ’ ಎಂದು ರಜತ್ ಗೆ ಹೇಳಿದ್ದಾರೆ.
ಚೈತ್ರಾ ಬಳಿ ಕ್ಷಮೆಯಾಚಿಸಿದ ರಜತ್:
ಹೆಣ್ಣನ್ನು ತಳ್ಳೋದು ತಪ್ಪಾಗಿ ಕಾಣುತ್ತದೆ ರಜತ್ ಎಂದು ಮೋಕ್ಷಿತಾ ಹಾಗೂ ಐಶ್ವರ್ಯಾ ಅವರು ಹೇಳಿದ್ದು, ಇದಕ್ಕೆ ಚೈತ್ರಾ ಅವರ ಬಳಿ ಹೋಗಿ ರಜತ್ ಅವರು ತಾನು ಆ ರೀತಿ ವರ್ತಿಸಿದ್ದಕ್ಕೆ ಕ್ಷಮೆ ಕೇಳಿದ್ದಾರೆ.
ನಾಮಿನೇಟ್ ಆದವರು ಯಾರು?:
ಮೊದಲ ಟಾಸ್ಕ್ ನಲ್ಲಿ ಸೋತ ಕಾರಣ ತ್ರಿವಿಕ್ರಮ್ ಅವರ ತಂಡ ಎದುರಾಳಿ ತಂಡದ ಐಶ್ವರ್ಯಾ ಅವರನ್ನು ಮೊದಲು ನಾಮಿನೇಟ್ ಮಾಡಿದೆ. ತ್ರಿವಿಕ್ರಮ್ ಅವರ ತಂಡ ಚರ್ಚಿಸಿ ರಜತ್ ಅವರನ್ನು ನಾಮಿನೇಟ್ ಮಾಡಿದೆ.
ಆ ಬಳಿಕ ತ್ರಿವಿಕ್ರಮ್ ಅವರು ಮೋಕ್ಷಿತಾ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.