BBK11: ನೀವು ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು, ಜನರ ಮನಸ್ಸು ಗೆಲ್ಲೋದು ನಾನೇ.. ಜಗದೀಶ್


Team Udayavani, Oct 16, 2024, 11:12 PM IST

ja

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದ ಬಳಿಕ ಕೆಲ ಸ್ಪರ್ಧಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಕ್ಯಾಪ್ಟನ್ ಶಿಶಿರ್ ಅವರು ಮನೆಯವರ ಪೈಕಿ ಹಂಸಾ, ಧನರಾಜ್ ಮತ್ತು ಜಗದೀಶ್, ಧರ್ಮ ಕೀರ್ತಿರಾಜ್, ಗೋಲ್ಡ್ ಸುರೇಶ್, ಗೌತಮಿ,ಚೈತ್ರಾ ಅವರನ್ನು  ನಾಮಿನೇಟ್ ಮಾಡಿದ್ದಾರೆ.  ಇದಲ್ಲದೆ ಅನುಷಾ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ.

ಜಗದೀಶ್ ಅವರು ಶಿಶಿರ್ ಅವರ ನಾಮಿನೇಷನ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾನಸ ಅವರು ಎಲ್ಲದಕ್ಕೂ ಯಾಕೆ ಮಧ್ಯ ಬಾಯಿ ಹಾಕ್ತೀರಾ ಎಂದು ಜಗದೀಶ್ ಅವರಿಗೆ ಕೇಳಿದ್ದಾರೆ. ಇದೇ ವೇಳೆ ತಿವಿಕ್ರಮ್ ಅವರು ನಾಮಿನೇಟ್ ಅದವರೇ ಏನು ಹೇಳ್ತಾ ಇಲ್ಲ, ನೀನು ಯಾವನೋ ಕೇಳೋಕೆ ಎಂದು ಜಗದೀಶ್ ಅವರಿಗೆ ಎದೆಗೆ ಎದೆ‌ ಕೊಟ್ಟು ನಿಂತಿದ್ದಾರೆ. ಮತ್ತೊಂದೆಡೆ ಮಂಜು‌ ಥೂ.. ನೀನು ಯೋಗ್ಯತೆಗಿಷ್ಟು ಎಂದು ಜಗದೀಶ್ ಅವರ‌ ಮೇಲೆ ಮುಗಿಬಿದ್ದಿದ್ದಾರೆ.

ನಾನು ಯಾರ ಎಕ್ಕಡ ತಿನ್ನೋಕು ಇಲ್ಲಿಗೆ ಬಂದಿಲ್ಲ ಎಂದ ಜಗದೀಶ್ ಅವರಿಗೆ ಹೆಣ್ಮಕ್ಕಳ ಬಗ್ಗೆ ಮಾತನಾಡುವಾಗ ಎಚ್ಚರ ಎಂದಿದ್ದಾರೆ. ಈ ವೇಳೆ ಮಂಜು ಹಾಗೂ ರಂಜಿತ್ ಜಗದೀಶ್ ಅವರನ್ನು ದೂಡಿದ್ದಾರೆ. ಪರಸ್ಪರ ಸ್ಪರ್ಧಿಗಳು ‌ಒಬ್ಬರನ್ನು‌ ಒಬ್ಬರು ನಿಂದಿಸಿ ಮಾತನಾಡಿದ್ದಾರೆ.

ಬಿಗ್ ಬಾಸ್‌ ಮನೆಯಲ್ಲಿ ಎಲ್ಲರೂ ಮಿತಿಯಲ್ಲಿರಬೇಕು. ನಿಮ್ಮನ್ನು ಕರ್ನಾಟಕದ ಜನ ನೋಡುತ್ತಿರುತ್ತಾರೆ. ನಿಮ್ಮ ನಿಮ್ಮ ಚೌಕಟ್ಟಿನಲ್ಲಿ ಇರಬೇಕು. ದೈಹಿಕವಾಗಿ ಹಲ್ಲೆಗೆ ಮುಂದಾಗುವುದು ಸರಿಯಲ್ಲ ಎಂದು ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ.

ಆರಾಮವಾಗಿ ಕೂತಿದ್ದ ಜಗದೀಶ್ ಅವರ ಬಳಿ ಮಂಜು ಬಂದು ಪ್ರಚೋದಿಸಿದ್ದಾರೆ. ಇದಕ್ಕೆ ಜಗದೀಶ್ ಮಂಜ ನಿನ್ನ ಲಿಮಿಟ್ ಅಲ್ಲಿ ಇರು. ನಾನು ತಾಳ್ಮೆ ಕಳೆದುಕೊಂಡರೆ ಚೆನ್ನಾಗಿರಲ್ಲ ಎಂದು ಹೇಳಿ ಹೋಗಲೀ, ಬಾರಲೋ ಎನ್ನುವಷ್ಟ ಮಟ್ಟಿಗೆ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ತಿರುಗಿದೆ.

ಬಿಗ್ ಬಾಸ್ ನಲ್ಲಿ ‌ನೀವು ಕಪ್ ಗೆಲ್ಲಬಹುದು. ಆದರೆ ಜನಗಳ ಮನಸ್ಸು ಗೆಲ್ಲೋದು ನಾನೇ ಎಂದು ಸಹ ಸ್ಪರ್ಧಿಗಳ ಮುಂದೆ ಜಗದೀಶ್ ಹೇಳಿದ್ದಾರೆ.

ಚೈತ್ರಾನಿಗೆ ಕರೆ ಮಾಡಿದ ಬಿಗ್ ಬಾಸ್:
ಬಿಗ್ ಬಾಸ್ ಚೈತ್ರಾ ಅವರಿಗೆ ಟಾಸ್ಕ್ ವೊಂದನ್ನು ನೀಡಿದ್ದು, ಮನೆಯ ದಿನಸಿ ಸೌಲಭ್ಯ ಬೇಕಾದರೆ ನಾನು ಹೇಳಿದಂತೆ ಮಾಡಬೇಕು. ನಾಲ್ವರ ಮಹಿಳಾ ಸ್ಪರ್ಧಿಗಳ ಪೈಕಿ ಯಾರು ಸಂಕಟ ಅನುಭವಿಸಲು ಅರ್ಹರೆಂದು ಹೇಳಿ ಅವರ ಮೇಕಪ್ ಸಾಮಾನುಗಳನ್ನು ತರಬೇಕೆಂದು ಹೇಳಿದ್ದಾರೆ.ಇದಕ್ಕೆ ಚೈತ್ರಾ ಅವರು, ಭವ್ಯಾ, ಮೋಕ್ಷಿತಾ ಅವರ ಹೆಸರನ್ನು ಹೇಳಿದ್ದು, ಇಬ್ಬರ ಮೇಕಪ್ ಕಿಟ್ ಗಳನ್ನು ಸ್ಟೋರ್ ರೂಮ್ ನಲ್ಲಿಟ್ಟಿದ್ದಾರೆ.

ತಿವಿಕ್ರಮ್ ಅವರಿಗೆ ಕರೆ ಮಾಡಿದ ಬಿಗ್ ಬಾಸ್, ದಿನಸಿ ಸಾಮಾನಿನ ಎರಡನೇ ಕಂತಿಗಾಗಿ ಈ‌ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರ ಇಬ್ಬರ ಹೆಸರನ್ನು ಹೇಳುವಂತೆ ಹೇಳಿದ್ದು, ತಿವಿಕ್ರಮ್ ಐಶ್ವರ್ಯಾ ಹಾಗೂ ಮೋಕ್ಷಿತಾ ಅವರ ಹೆಸರನ್ನು ಹೇಳಿ ಅವರ ಲಗೇಜ್ ಗಳನ್ನು ಸ್ಟೋರ್ ರೂಮ್ ನಲ್ಲಿಟ್ಟಿದ್ದಾರೆ.

ಬಿಗ್ ಬಾಸ್ ನಿಂದ ಶಿಕ್ಷೆ:
ವ್ಯಾಯಾಮ ನಡೆಸುವಾಗ ಮೈಕ್ ಧರಿಸದೆ ಇದ್ದ ಭವ್ಯಾ, ಅನುಷಾ ಅವರ ತಪ್ಪಿಗೆ ಇಡೀ ಮನೆಯ ಸದಸ್ಯರಿಗೆ ಮುಂದಿನ ಆದೇಶದವರೆಗೂ ಜಿಮ್ ಬಳಸುವಂತಿಲ್ಲ ಹಾಗೂ ಬೆಡ್ ಬಳಸುವಂತಿಲ್ಲ ಎನ್ನುವ ಶಿಕ್ಷೆಯನ್ನು ನೀಡಿದ್ದಾರೆ.

ಪತ್ನಿ, ‌ಮಗಳ ಜೊತೆ ಮಾತನಾಡಿದ ಧನರಾಜ್:
ಸಣ್ಣ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿರುವ ಧನರಾಜ್ ಅವರಿಗೆ ಬಿಗ್ ಬಾಸ್ ಕರೆ ಮಾಡಿಸಿ ಪತ್ನಿ ಮತ್ತು ಮಗಳ ಧ್ವನಿಯನ್ನು ಕೇಳಿಸಿದ್ದಾರೆ. ಧನರಾಜ್ ಮಗಳ ಧ್ವನಿ ಕೇಳಿ ಕಣ್ಣೀರಿಟ್ಟಿದ್ದಾರೆ. ನನ್ನ ಮಗಳೇ ನನಗೆ ಸ್ಪೂರ್ತಿ, ಇನ್ಮುಂದೆ ಎಲ್ಲರ ಮುಂದೆ ಆಡಿ ತೋರಿಸುತ್ತೇನೆ ಎಂದಿದ್ದಾರೆ.

ಕನ್ನಡ ಭಾಷೆ ಬಳಸಿ ಬಿಗ್ ಬಾಸ್ ಸೂಚನೆ:
ಬಿಗ್ ಬಾಸ್ ನಲ್ಲಿ ಕನ್ನಡ ಅಷ್ಟಾಗಿ ಬಳಕೆ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಕನ್ನಡದಲ್ಲೇ ಹೆಚ್ಚು ಮಾತನಾಡಿ, ನಿಮ್ಮನ್ನು ಇಡೀ ಕರ್ನಾಟಕ ಜನತೆ ನೋಡುತ್ತಿದೆ ಎಂದು ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ.

ಮಾತಿನ ಭರದಲ್ಲಿ ಅಲ್ಲಲ್ಲಿ ಇಂಗ್ಲಿಷ್ ಪದಗಳು ಬಂದರೆ ಪರವಾಗಿಲ್ಲ ಆದರೆ ಇಡೀ ಮಾತೇ ಇಂಗ್ಲಿಷ್ ನಲ್ಲಿರಬಾರದು. ಇದು ಮೊದಲ ಹಾಗೂ ಕೊನೆಯ ಎಚ್ಚರಿಕೆ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಹೆಣ್ಮಕ್ಕಳ ಬಗ್ಗೆ ಜಗದೀಶ್ ಮಾತು; ಇಡೀ ಮನೆಯೇ ಗರಂ:
ಹೆಣ್ಮಕ್ಕಳ ‌ಬಗ್ಗೆ ಮಾತನಾಡುವಾಗ ಎಚ್ಚರವೆಂದು ಗೋಲ್ಡ್ ಸುರೇಶ್ ಅವರು ಹೇಳಿದಾಗ, ಜಗದೀಶ್ ಮಾತನಾಡ್ತೀನಿ ನೀನ್ಯಾರೋ ಕೇಳೋಕೆ ಎಂದಿದ್ದಾರೆ. ಈ ವೇಳೆ ಚೈತ್ರಾ ಅವರೊಂದಿಗೂ ಜಗದೀಶ್ ವಾಗ್ವಾದಕ್ಕೆ ಇಳಿದಿದ್ದಾರೆ. ಇತ್ತ ಹಂಸಾ ಅವರು ಇಲ್ಲಿ ಏನೆಲ್ಲ ಹೇಳಿಸಿಕೊಳ್ಳೋಕ್ಕೆ ನಾವು ರೆಡಿಯಿಲ್ಲ. ನಿನ್ನ ಅಪ್ಪನಿಗೆ ಹುಟ್ಟಿದರೆ ಬಾ ಎಂದು ಚೈತ್ರಾ ಸವಾಲು ಎಸೆದಿರುವುದನ್ನು ತೋರಿಸಲಾಗಿದೆ.

ಹೊಡೆದಾಡಿಕೊಂಡ ಪರಿಣಾಮ ಬಿಗ್ ಬಾಸ್ ಮನೆಯಿಂದ ರಂಜಿತ್ – ಜಗದೀಶ್ ಹೊರಗೆ ಹೋಗಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

MGM-College

Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ

DC-Office

Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

PUTHIGE-kar

Udupi: ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ: ಕಾರ್ಯಾಲಯ ಉದ್ಘಾಟನೆ

Congress-Symbol

Mangaluru: ಕೇಂದ್ರದ ತೆರಿಗೆ ವಿಷಯದಲ್ಲಿ ಬಿಜೆಪಿ ಮೌನ: ಯು.ಟಿ. ಫರ್ಝಾನ

ANAKU-operation

Udupi: “ಸಾಗರ್‌ ಕವಚ್‌’ ಅಣಕು ಕಾರ್ಯಾಚರಣೆ; 21 ಮಂದಿ ಬಂಧನ, 2 ಬೋಟ್‌, ವಾಹನಗಳು ವಶಕ್ಕೆ

Udupi: ಗೀತಾರ್ಥ ಚಿಂತನೆ-66: ಮಕ್ಕಳ ಮೇಲೆ ತಂದೆತಾಯಿಯ ಮನೋಧರ್ಮ

Udupi: ಗೀತಾರ್ಥ ಚಿಂತನೆ-66: ಮಕ್ಕಳ ಮೇಲೆ ತಂದೆತಾಯಿಯ ಮನೋಧರ್ಮ

Sathish-Kumpala

Hubballi: ಪೊಲೀಸ್‌ ಠಾಣೆ ಮೇಲೆ ದಾಳಿ ಪ್ರಕರಣ ವಾಪಸ್‌: ದ. ಕನ್ನಡ ಜಿಲ್ಲಾ ಬಿಜೆಪಿ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ellige Payana Yaavudo Daari Movie: ಟ್ರೇಲರ್‌ನಲ್ಲಿ ಅಭಿಮನ್ಯು ಪಯಣ

Tenant Kannada Movie ನ.22ಕ್ಕೆ ಟೆನೆಂಟ್‌ ರಿಲೀಸ್‌

Tenant Kannada Movie ನ.22ಕ್ಕೆ ಟೆನೆಂಟ್‌ ರಿಲೀಸ್‌

Sandalwood: ಮತ್ತೆ ತೆರೆಯತ್ತ ದರ್ಶನ್‌ ನಮ್ಮ ಪ್ರೀತಿಯ ರಾಮು

Sandalwood: ಮತ್ತೆ ತೆರೆಯತ್ತ ದರ್ಶನ್‌ ನಮ್ಮ ಪ್ರೀತಿಯ ರಾಮು

darshna-Court

Renukaswamy Case: ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ನಟ ದರ್ಶನ್‌

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

MGM-College

Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ

DC-Office

Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

PUTHIGE-kar

Udupi: ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ: ಕಾರ್ಯಾಲಯ ಉದ್ಘಾಟನೆ

Congress-Symbol

Mangaluru: ಕೇಂದ್ರದ ತೆರಿಗೆ ವಿಷಯದಲ್ಲಿ ಬಿಜೆಪಿ ಮೌನ: ಯು.ಟಿ. ಫರ್ಝಾನ

ANAKU-operation

Udupi: “ಸಾಗರ್‌ ಕವಚ್‌’ ಅಣಕು ಕಾರ್ಯಾಚರಣೆ; 21 ಮಂದಿ ಬಂಧನ, 2 ಬೋಟ್‌, ವಾಹನಗಳು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.