BBK11: ನಮ್ ಬಾಸ್ ಬಾಸ್ ಎನ್ನುತ್ತಲೇ ಚೈತ್ರಾಳನ್ನು ಕ್ಯಾಪ್ಟನ್ಸಿಯಿಂದ ಹೊರಗಿಟ್ಟ ರಜತ್
Team Udayavani, Dec 5, 2024, 11:13 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ವಾರದ ನಾಮಿನೇಷನ್ ಹಾಗೂ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ.
ಚೈತ್ರಾ ತ್ರಿವಿಕ್ರಮ್ ಹಾಗೂ ಭವ್ಯ ಅವರಿಗೆ ನಾಮಿನೇಟ್ ಮಾಡಿದ್ದಾರೆ. ಇದನ್ನು ಭವ್ಯ ಅವರು ನಾನು ನೀವು ಕೊಟ್ಟ ಕಾರಣವನ್ನು ಒಪ್ಪಲ್ಲ ಎಂದಿದ್ದಾರೆ. ಇನ್ನೊಂದು ಕಡೆ ತ್ರಿವಿಕ್ರಮ್ ಅವರು ಕೂಡ ಚೈತ್ರಾ ಅವರ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾಲಗೆಯಲ್ಲ ತೋಳಿನಲ್ಲಿ ಶಕ್ತಿ ಇರೋದು. ನಿಮ್ಮ ಹಾಗೆ ನನಗೆ ಚಿಕ್ಕ ನಾಲಗೆಯಿಲ್ಲ. ಶಿಶಿರ್ ನಿಮಗೆ ಇವರು ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ ಅಂಥ ಕರೆದಿದ್ದಾರೆ. ಇವಳನ್ನು ನೀವು ತಂಗಿ ಅಂಥ ಕರೆಯುತ್ತಾ ಇದ್ದೀರಿ ಅದಕ್ಕೆ ಇಷ್ಟು ದಿನ ಇದನ್ನು ಹೇಳಿರಲಿಲ್ಲ ಎಂದಿದ್ದಾರೆ.
ನಾನು ಆ ಪದವನ್ನು ಬಳಸಲೇ ಇಲ್ಲ. ಹಾಗೆ ಬಳಸಿ ಇದ್ದಿದ್ರೆ ನನ್ನ ನಾಲಗೆ ಬಿದ್ದೋಗಲಿ ಎಂದು ಚೈತ್ರಾ ಹೇಳಿದ್ದಾರೆ.
ಶಿಶಿರ್ ಅವರು ಈ ಮಾತನ್ನು ಕೇಳಿ ಇಲ್ಲಿ ಮಾನ ಮರ್ಯಾದೆ ಕಳೆದುಕೊಳ್ಳೋಕೆ ಬಂದಿಲ್ಲ. ಇದಕ್ಕೆ ಕ್ಲಾರಿಟಿ ಸಿಗದೆ ನಾನು ಇಲ್ಲಿಂದ ಹೋಗಲ್ಲ. ಹೇಳಿದ್ದಾರ ಇಲ್ವೋ ಆದರೆ ಮನೆ ಮುಂದೆ ಹೇಳುವ ಹಾಗೆ ಆಯ್ತಲ್ಲ. ನಾನು ತುಂಬಾ ಕನಸು ಇಟ್ಟುಕೊಂಡು ಬಂದಿದ್ದೇನೆ ಎಂದು ಶಿಶಿರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ದೇವ್ರಾಣೆ ನಾನು ಆ ಪದ ಬಳಸಲೇ ಇಲ್ಲ. ಇವತ್ತೇ ಅದನ್ನು ಕೇಳ್ತಾ ಇರೋದು. ನನ್ನ ಬಾಯಿಯಿಂದ ಆ ಪದ ಬಂದಿಲ್ಲ. ಹಾಗೆ ಹೇಳಿ ಇದಿದ್ರೆ ನಾನು ಶಿಶಿರ್ ಅವರ ಜತೆ ಕ್ಲೋಸ್ ಆಗಿ ಇರ್ತಾ ಇರಲಿಲ್ಲ ಎಂದು ಚೈತ್ರಾ ಹೇಳಿದ್ದಾರೆ.
ಭವ್ಯ ಅವರು ಚೈತ್ರಾ ಅವರು ಈ ಮನೆಯಲ್ಲಿ ಇರಲು ಅರ್ಹತೆಯಿಲ್ಲ ಎನ್ನುವ ಕಾರಣವನ್ನು ಕೊಟ್ಟಿದ್ದಾರೆ. ಮೋಕ್ಷಿತಾ ಅವರನ್ನು ಸಹ ನಾಮಿನೇಟ್ ಮಾಡಿದ್ದಾರೆ.
ಶಿಶಿರ್ ಮಂಜು, ಗೌತಮಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಸುರೇಶ್ ಅವರು ಹನುಮಂತು, ರಜತ್ ಅವರ ಬೆನ್ನಿಗೆ ಚೂರಿ ಹಾಕಿ ನಾಮಿನೇಟ್ ಮಾಡಿದ್ದಾರೆ.
ಮಂಜು ಅವರು ಐಶ್ವರ್ಯಾ, ಚೈತ್ರಾ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಈ ವಾರ ನಾಮಿನೇಟ್ ಆದವರು:
ಮಂಜು, ಗೌತಮಿ, ಮೋಕ್ಷಿತಾ, ಚೈತ್ರಾ, ಭವ್ಯ, ಸುರೇಶ್, ಐಶ್ವರ್ಯಾ ಹಾಗೂ ರಜತ್ ನಾಮಿನೇಟ್ ಆಗಿದ್ದಾರೆ.
ಧೂಳು ಧಮಾಕ ಟಿವಿ 212 ಪಾಯಿಂಟ್ಸ್,ಮಸ್ತ್ ಮಜಾ ಟಿವಿ ತಂಡದವರು 295 ಪಾಯಿಂಟ್ಸ್ ಗಳನ್ನು ಗಳಿಸಿದ್ದಾರೆ. ವೀಕ್ಷಕರ ಮತದ ಆಧಾರದ ಮೇಲೆ ಮಸ್ತ್ ಮಜಾ ತಂಡದವರು ಗೆದ್ದಿದ್ದಾರೆ. ಆ ತಂಡದ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್ ಆಡಲಿದ್ದಾರೆ. ವೀಕ್ಷಕರು ಒಟ್ಟು 93 ಲಕ್ಷ ಮತವನ್ನು ಚಲಾಯಿಸಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ನಿಂದ ಒಬ್ಬರನ್ನು ಹೊರಗೆ ಇಡುವ ಜವಾಬ್ದಾರಿ ಕ್ಯಾಪ್ಟನ್ ಧನರಾಜ್ ಅವರಿಗೆ ನೀಡಿದ್ದು, ಇದಕ್ಕೆ ಧನರಾಜ್ ಅವರು ಕ್ಯಾಪ್ಟನ್ಸಿ ಓಟದಿಂದ ತಾವೇ ಹೊರಗೆ ಉಳಿಯುತ್ತೇನೆ ಎಂದಿದ್ದಾರೆ.
ಕ್ಯಾಪ್ಟನ್ಸಿ ಓಟಕ್ಕಾಗಿ ಕಸರತ್ತು:
ಕ್ಯಾಪ್ಟನ್ಸಿ ಓಟದಲ್ಲಿರುವ ಸದಸ್ಯರು ಮನೆಯ ಇತರೆ ಸದಸ್ಯರನ್ನು ಮನವೊಲಿಸಿ ಅವರ ಪರವಾಗಿ ಆಡುವಂತಹ ಆಯ್ಕೆಯನ್ನು ನೀಡಲಾಗಿದೆ.
ಶಿಶಿರ್ ಅವರು ತಮ್ಮ ಪರವಾಗಿ ಭವ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಜತ್ ಅವರು ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹನುಮಂತು ಅವರ ಪರ ಮಂಜು ಅವರು ಆಡಲಿದ್ದಾರೆ.
ಆದರೆ ಮೋಕ್ಷಿತಾ ಅವರು ನಾನು ಗೌತಮಿ ಹತ್ರ ಅಂತೂ ಏನೇ ಆಗಲಿ ಆಡಿ ಎಂದು ಕೇಳಲ್ಲ. ಅವರಿಂದ ನಾನು ಕ್ಯಾಪ್ಟನ್ ಆಗಬೇಕೆಂದಿದ್ದಾರೆ ನಾನು ಆಡೋದೆ ಇಲ್ಲ. ನನ್ನ ಸ್ವಾಭಿಮಾನದ ಮುಂದೆ ನನಗೆ ಯಾವುದು ದೊಡ್ಡದಲ್ಲ. ನನ್ನನ್ನು ಕಳಿಸೋದಾದ್ರೆ ನಾಳೆನೇ ಕಳಿಸಲಿ ನಾನು ಹೋಗ್ತೀನಿ ಎಂದು ಹಟ ಹಿಡಿದು ಕೂತಿದ್ದಾರೆ.
ಮೋಕ್ಷಿತಾ ಅವರ ಈ ನಿರ್ಧಾರಕ್ಕೆ ಬಿಗ್ ಬಾಸ್ ಪ್ರತಿಕ್ರಿಯಿಸಿದ್ದು, ದೊಡ್ಡ ದೊಡ್ಡ ನಿರ್ಧಾರಗಳ ಜತೆ ಅದಕ್ಕೆ ತಕ್ಕೆ ಬೆಲೆನೂ ಕಟ್ಟಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಈ ಕಾರಣದಿಂದ ಕ್ಯಾಪ್ಟನ್ಸಿ ಆಟ ಆಡುವ ಅವಕಾಶ ಗೌತಮಿ ಅವರಿಗೆ ಲಭಿಸಿದೆ. ಈ ಅವಕಾಶ ಬಳಸಿಕೊಂಡು ಗೌತಮಿ ಧನರಾಜ್ ಅವರನ್ನು ತಮ್ಮ ಸಹಾಯಕರಾಗಿ ಆಯ್ದುಕೊಂಡಿದ್ದಾರೆ.
ಟಾಸ್ಕ್‌ವೊಂದನ್ನು ನೀಡಿ ಅದರಲ್ಲಿ ಗೆದ್ದ ಸದಸ್ಯರು ಒಬ್ಬರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಹಾಕುವ ಅಧಿಕಾರವನ್ನು ನೀಡಲಾಗಿದೆ. ಇದರಲ್ಲಿ ರಜತ್ ಅವರು ಚೈತ್ರಾ ಅವರನ್ನು ಹೊರಗಿಟ್ಟಿದ್ದಾರೆ.
ರಜತ್ ನಿರ್ಧಾರಕ್ಕೆ ಚೈತ್ರಾ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ನಿಮ್ಮ ನಿರ್ಧಾರ ಅಲ್ಲ ಅಂತ ಗೊತ್ತಿದೆ. ಭುಜ ಬಲ ಇರೋನು ಮಾತ್ರ ಇಲ್ಲಿ ಇರಬೇಕಾಗಿಲ್ಲ. ನಿಮಗೆ ನನ್ನ ಭಯಯಿದೆ ಅಲ್ವಾ ಅದೇ ಖುಷಿ ನನಗೆ ಎಂದಿದ್ದಾರೆ.
ರಜತ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಯಾವಾಗ ನೋಡಿದ್ರು ಈ ಅಮ್ಮನದು ಗೋಳು. ಇವರನ್ನು ಆಚೆನೇ ಹಾಕೋಕೆ ಇಲ್ವಾ. ಚೈತ್ರಾ ಸೂಪರ್. ನನಗೆ ನಿಮ್ಮನ್ನು ನೋಡಿದ್ರೆ ನಗು ಬರುತ್ತದೆ. ಅವಳಿಗೆ ದಿನ ದಿನ ಹುಚ್ಚ ಜಾಸ್ತಿ ಆಗುತ್ತಿದೆ ಎಂದು ರಜತ್ ಹೇಳಿದ್ದಾರೆ.
ರಜತ್ ಅವರು ಮುಂದಿನ ಸುತ್ತಿನಲ್ಲಿ ಗೆದ್ದಿದ್ದು ಹನುಮಂತು ಅವರನ್ನು ಹೊರಗಿಟ್ಟಿದ್ದಾರೆ.
ಆ ಬಳಿಕ ರಜತ್ ಅವರು ಟಾಸ್ಕ್ ನಿಂದ ಹೊರಬಿದ್ದಿದ್ದು. ಇದನ್ನು ನೋಡಿ ಚೈತ್ರಾ ಕುಣಿದಾಡಿ ಇರುವುದನ್ನು ತೋರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.