BBK11: ಹನುಮಂತು ಮೇಲೆ ಮುಗಿಬಿದ್ದ ಸ್ಪರ್ಧಿಗಳು; ನನಗೆ ಆಗ್ತಾ ಇಲ್ಲ ಅಂದ ಹಳ್ಳಿಹೈದ


Team Udayavani, Oct 21, 2024, 11:13 PM IST

BBK11: ಹನುಮಂತು ಮೇಲೆ ಮುಗಿಬಿದ್ದ ಸ್ಪರ್ಧಿಗಳು; ನನಗೆ ಆಗ್ತಾ ಇಲ್ಲ ಅಂದ ಹಳ್ಳಿಹೈದ

ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ಹೊಸ ಕ್ಯಾಪ್ಟನ್ ಹನುಮಂತು ಅವರ ಅಧಿಕಾರ ಆರಂಭವಾಗಿದೆ.

ಹನುಮಂತು ವೆಸ್ಟರ್ನ್ ಟಾಯ್ಲೆಟ್ ಪಾಠ ಮಾಡಿದ ಧನರಾಜ್:
ಹಳ್ಳಿಯಿಂದ ಬಂದಿರುವ ಹನುಮಂತು ಅವರಿಗೆ ಬಿಗ್ ಬಾಸ್ ಮನೆಯನ್ನು ಪರಿಚಯಿಸಲು ಧನರಾಜ್ ಹಾಗೂ ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ಹೇಳಿದ್ದು, ಅದರಂತೆ ಧನರಾಜ್ ಅವರು ವೆಸ್ಟರ್ನ್ ಟಾಯ್ಲೆಟ್ ಬಳಸೋದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ.

ಕ್ಯಾಪ್ಟನ್ ಆಗಿದ್ದರೂ ಹನುಮಂತು ಕ್ಯಾಪ್ಟನ್ ರೂಮ್ ನಲ್ಲಿ ನೆಲದ ಮೇಲೆಯೇ ಮಲಗಿದ್ದಾರೆ.

ಕ್ಯಾರೆಕ್ಟರ್ ವಿಚಾರಕ್ಕೆ ಚೈತ್ರಾ ಗರಂ:
ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತನಾಡಿದ್ರೆ ನಾನು ಯಾರನ್ನು ಬಿಡಲ್ಲ ಎಂದು ಚೈತ್ರಾ ಅವರು ಐಶ್ವರ್ಯಾ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಮನೆ ಸದಸ್ಯರ ಸ್ಥಾನವನ್ನು ‌ನಿರ್ಧರಿಸಿದ ಕ್ಯಾಪ್ಟನ್ ಹನುಮಂತು:
ಹನುಮಂತು ಅವರು ಯಾವ ಸದಸ್ಯ ಯಾವ ಸ್ಥಾನದಲ್ಲಿರಬೇಕೆಂದು ನಿರ್ಧರಿಸಿ ತಮ್ಮ ಇಚ್ಚೆಗೆ ಅನುಗುಣವಾಗಿ ಒಬ್ಬೊಬ್ಬರನ್ನು ಒಂದೊಂದು ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

ಎಲ್ಲಾ ಸ್ಪರ್ಧಿಗಳು ಮೂರು ವಾರದ ತಮ್ಮ ಆಟದ ಬಗ್ಗೆ ಹನುಮಂತು ಅವರಿಗೆ ಹೇಳಿದ್ದು, ಹನುಮಂತು ಅವರು ಇದನ್ನು ಕೇಳಿದ ಬಳಿಕ ನಂಬರ್ ವೈಸ್ ಒಬ್ಬೊಬ್ಬರನ್ನು ನಿಲ್ಲಿಸಿದ್ದಾರೆ.

ಶಿಶಿರ್ ಅವರನ್ನು ಒಂದನೇ ಸ್ಥಾನದಲ್ಲಿ ‌ನಿಲ್ಲಿಸಿದ್ದು, ಗೌತಮಿ ಅವರನ್ನು ಎರಡನೇ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಮೂರನೇ ಸ್ಥಾನವನ್ನು ಮೋಕ್ಷಿತಾ, ನಾಲ್ಕನೇ ಸ್ಥಾನವನ್ನು ಐಶ್ವರ್ಯಾ, ಐದನೇ ಸ್ಥಾನವನ್ನು ಧನರಾಜ್ ಅವರಿಗೆ ನೀಡಿದ್ದಾರೆ. ಕೊನೆಯ ಸ್ಥಾನವನ್ನು ಗೋಲ್ಡ್ ಸುರೇಶ್ ಅವರಿಗೆ ನೀಡಿದ್ದಾರೆ.

ಕ್ಯಾಪ್ಟನ್ ಹನುಮಂತು ಮೇಲೆ ‌ಮುಗಿಬಿದ್ದ ಸ್ಪರ್ಧಿಗಳು:
ತಮಗೆ ‌ಕೊಟ್ಟ ಸ್ಥಾನದಿಂದ ಅಸಮಾಧಾನಗೊಂಡ ಕೆಲ ಸ್ಪರ್ಧಿಗಳು ನೀವು ಹೊರಗಡೆ ನಮ್ಮ ಆಟ ಏನು ನೋಡ್ಕೊಂಡು ಬಂದಿದ್ದೀರಾ? ಐದು‌ ನಿಮಿಷ ಆಟ ನೋಡಿ ನಮ್ಮನ್ನು ಈ ಸ್ಥಾನದಲ್ಲಿ ‌ನಿಲ್ಲಿಸಿದ್ದೀರಿ. ನಿಮ್ಮ ನಿರ್ಧಾರ ಇಲ್ಲಿ ಯಾರಿಗೂ ಸಮಾಧಾನ ತಂದಿಲ್ಲ. ನಿಮಗೆ ನೀವು ಕೊಟ್ಟದಕ್ಕೆ ಕ್ಲಾರಿಟಿ ಇಲ್ಲ ಅಂದ್ರೆ ಯಾಕೆ ಈ ಸ್ಥಾನವನ್ನು ‌ಕೊಟ್ರಿ ಎಂದು ಒಬ್ಬರ ಮೇಲೆ ಒಬ್ಬದು ಹನುಮಂತು ಮೇಲೆ ಮುಗಿಬಿದಿದ್ದಾರೆ.

ಚೈತ್ರಾ ಅವರು ತಮಗೆ ಕೊಟ್ಟ 13ನೇ ಸ್ಥಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 7ನೇ ಸ್ಥಾನ ಪಡೆದ ಭವ್ಯಾ, 12ನೇ ಸ್ಥಾನವನ್ನು ಪಡೆದ ತಿವಿಕ್ರಮ್ ಅವರು ನನಗೆ ಈ ಸ್ಥಾನ ಯಾಕೆ ಕೊಟ್ರಿ ಎಂದು ಪ್ರಶ್ನಿಸಿದ್ದಾರೆ.

ಮನೆಯವರ ಜಗಳ ನೋಡಿ ಹನುಮಂತು ನನಗೆ ಈ ಕ್ಯಾಪ್ಟನ್ ಸ್ಥಾನ ಬೇಡ ಬಿಗ್ ಈ ರೀತಿ ಜಗಳ ಮಾಡಿಕೊಳ್ಳುತ್ತಾರೆ ಅಂಥ ಗೊತ್ತು ಇದಿದ್ದರೆ ಇಲ್ಲಿಗೆ ಬರ್ತಾನೆ ಇರಲಿಲ್ಲ ಎಂದಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್: ಜೋಡಿಗಳಾಗಿ ಕಣಕ್ಕಿಳಿದ ಸ್ಪರ್ಧಿಗಳು:
ವಾರದ ಕ್ಯಾಪ್ಟನ್ ಗಾಗಿ ಬಿಗ್ ಬಾಸ್ ಕ್ಯಾಪ್ಟನ್ಸಿ ಆಕಾಂಕ್ಷಿಗಳಿಗೆ ಟಾಸ್ಕ್ ವೊಂದನ್ನು ‌ನೀಡಿದ್ದಾರೆ. ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್ ಆಗಿದ್ದಾರೆ. 7 ಜೋಡಿಗಳಾಗಿ ಟಾಸ್ಕ್ ಆಡಿದ್ದಾರೆ.

ಶಿಶಿರ್ ಅವರು ಸುರೇಶ್ ಅವರನ್ನು ಆಯ್ಕೆ ಮಾಡಿದ್ದಾರೆ. ಗೌತಮಿ ಮೋಕ್ಷಿತಾ,ಐಶ್ವರ್ಯಾ – ತಿವಿಕ್ರಮ್, ಧನರಾಜ್ – ಭವ್ಯಾ, ಮಂಜು – ಅನುಷಾ, ಧರ್ಮಕೀರ್ತಿರಾಜ್ – ಹಂಸಾ, ಮಾನಸ – ಚೈತ್ರಾ ಅವರು ಜೋಡಿಗಳಾಗಿ ಆಡಿದ್ದಾರೆ.

ಏಕಾಗ್ರತೆಗೆ ಭಂಗ ತರುವ ಟಾಸ್ಕ್ ನಲ್ಲಿ ಮೊದಲ ಜೋಡಿ ಗೌತಮಿ – ಮೋಕ್ಷಿತಾ ನೀರು ಎಸೆದ ಸವಾಲು ಮೆಟ್ಟಿ ನಿಂತು ಟಾಸ್ಕ್ ಪೂರ್ಣಗೊಳಿಸಿದ್ದಾರೆ.

ಸುರೇಶ್ – ಶಿಶಿರ್ ಅವರಿಗೆ ಸ್ಪರ್ಧಿಗಳಿಗೆ ನಾನಾ ರೀತಿ ಉಪದ್ರ ಕೊಟ್ಟಿದ್ದಾರೆ. ಕೋಲು, ನೀರು,ದಿಂಬು ಹೀಗೆ ಟಾಸ್ಕ್ ದಾರಿಯಲ್ಲಿ ಅನೇಕ ರೀತಿಯ ತೊಂದರೆಯನ್ನು ಸ್ಪರ್ಧಿಗಳು ನೀಡಿದ್ದಾರೆ. ಶಿಶಿರ್, ಸುರೇಶ್ ಅವರು ನಡೆಯುವಾಗ ಗಡಿಯಾರದ ಬಾಣ ಮುರಿದು ಬಿದ್ದಿದೆ. ಇದನ್ನು ಉಸ್ತುವಾರಿಗಳು ಔಟ್ ಎಂದು ನಿರ್ಣಯ ಮಾಡಿದ್ದಾರೆ. ಆದರೆ ಇದನ್ನು ಸುರೇಶ್, ಶಿಶಿರ್ ಒಪ್ಪಿಲ್ಲ. ಇದೇ ಕಾರಣಕ್ಕೆ ಶಿಶಿರ್ ಅವರು ಗರಂ ಆಗಿದ್ದಾರೆ.

ನನ್ನ ಹತ್ರ ಮಾತನಾಡಬೇಡ ಎಂದು ಸುರೇಶ್ ಮಂಜು ಹತ್ರ ಹೇಳಿದ್ದಾರೆ. ನೀನ್ಯಾರೋ ನನಗೆ ಹೇಳೋಕೆ ಬಂದುಬಿಟ್ಟ ಎಂದು ಮಂಜು ಸುರೇಶ್ ಮೇಲೆ ಮುಗಿಬಿದಿದ್ದಾರೆ.

ಟಾಪ್ ನ್ಯೂಸ್

mng-Rain

Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ

Anand-ZP-CEO-DK

Vaccination Campaign: 6ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಆರಂಭ: ಜಿಪಂ ಸಿಇಒ

uu-po

Police Martyrs Day: ದೇಶದ ಅಖಂಡತೆಗೆ ಹುತಾತ್ಮರ ತ್ಯಾಗ ಸಹಾಯಕ: ನ್ಯಾಯಾಧೀಶ

Police-Marter

Mangaluru: ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ: ಕುಲಪತಿ ಪ್ರೊ. ಪಿ.ಎಲ್‌.ಧರ್ಮ

Kota-Vote

Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ

MNG-Chowta

Council By Poll: ಕೆಲವು ಸದಸ್ಯರ ಬಹಿಷ್ಕಾರ ನಡುವೆ ಎರಡೂ ಜಿಲ್ಲೆಯಲ್ಲಿ ಶೇ. 97.91 ಮತದಾನ

1-a-bss

Bulandshahr; ಸಿಲಿಂಡರ್ ಸ್ಫೋ*ಟಗೊಂಡು ಐವರು ಮೃ*ತ್ಯು: ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pranam Devaraj; ಅ.23ಕ್ಕೆ ಸನ್‌ ಆಫ್‌ ಮುತ್ತಣ್ಣ ಟೀಸರ್

Pranam Devaraj; ಅ.23ಕ್ಕೆ ಸನ್‌ ಆಫ್‌ ಮುತ್ತಣ್ಣ ಟೀಸರ್

devaru ruju hakidanu movie

Sandalwood: ʼದೇವರು ರುಜು ಹಾಕಿದನುʼ ಚಿತ್ರಕ್ಕೆ ಮುಹೂರ್ತ ಸಂಭ್ರಮ

Majestic 2

Majestic 2: ಶೂಟಿಂಗ್‌ ಮುಗಿಸಿದ ಮೆಜೆಸ್ಟಿಕ್‌-2

013

Kiccha Sudeep: ಪ್ರಜ್ಞೆಯಲ್ಲಿರುವಾಗ ನನ್ನ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಆಗಲೇ ಇಲ್ಲ..

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

mng-Rain

Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ

Anand-ZP-CEO-DK

Vaccination Campaign: 6ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಆರಂಭ: ಜಿಪಂ ಸಿಇಒ

uu-po

Police Martyrs Day: ದೇಶದ ಅಖಂಡತೆಗೆ ಹುತಾತ್ಮರ ತ್ಯಾಗ ಸಹಾಯಕ: ನ್ಯಾಯಾಧೀಶ

Police-Marter

Mangaluru: ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ: ಕುಲಪತಿ ಪ್ರೊ. ಪಿ.ಎಲ್‌.ಧರ್ಮ

Kota-Vote

Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.