Bigg Boss: ಬಿಗ್ ಬಾಸ್ ವಿನ್ನರ್ ಗೆ ಸುಲಿಗೆ ಕರೆ; 1 ಕೋಟಿ ರೂ.ಗೆ ಬೇಡಿಕೆಯಿಟ್ಟ ಅಪರಿಚಿತ
Team Udayavani, Oct 26, 2023, 1:27 PM IST
ದೆಹಲಿ: ಬಿಗ್ ಬಾಸ್ ಗೆದ್ದು ಜನಪ್ರಿಯತೆಯನ್ನು ಗಳಿಸಿರುವ ಯೂಟ್ಯೂಬರ್ ಆಗಿರುವ ಎಲ್ವಿಶ್ ಯಾದವ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಆಗಿದೆ.
ಯೂಟ್ಯೂಬ್ ನಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಎಲ್ವಿಶ್ ಯಾದವ್ ಅವರು ಇತ್ತೀಚೆಗೆ ಹಿಂದಿ ಬಿಗ್ ಬಾಸ್ ಓಟಿಟಿ -2 ಸೀಸನ್ ನಲ್ಲಿ ಭಾಗಿಯಾಗಿದ್ದರು. ಬಿಗ್ ಬಾಸ್ ನಲ್ಲಿ ಅವರು ಮನರಂಜನೆಯ ಜೊತೆಗೆ ಮತ್ತಷ್ಟು ಖ್ಯಾತರಾದರು. ಬಿಗ್ ಬಾಸ್ ಓಟಿಟಿ -2 ನಲ್ಲಿ ಅತೀ ಹೆಚ್ಚು ಮತ ಪಡೆದು ಕಾರ್ಯಕ್ರಮದ ವಿಜೇತರಾದರು.
ಬಿಗ್ ಬಾಸ್ ಶೋ ಬಳಿಕ ಬ್ಯುಸಿಯಾಗಿರುವ ಎಲ್ವಿಶ್ ಯಾದವ್ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರ ಕಂಟೆಂಟ್ ವಿಚಾರದಲ್ಲಲ್ಲ. ಬಿಗ್ ಬಾಸ್ ವಿನ್ನರ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆಯ ಜೊತೆಗೆ ಸುಲಿಗೆ ಕರೆಗಳು ಮಾಡಿದ್ದಾರೆ.
ಎಲ್ವಿಶ್ ಯಾದವ್ ಅವರಿಗೆ ಅಪರಿಚಿತ ನಂಬರ್ ನಿಂದ ಕರೆಗಳು ಬಂದಿದ್ದು, 1 ಕೋಟಿ ರೂ. ನೀಡುವಂತೆ ಆ ವ್ಯಕ್ತಿ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಎಲ್ವಿಶ್ ಯಾದವ್ ಅವರು ಗುರುಗ್ರಾಮ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ: YouTube, Facebook ಸೇರಿ 9 ಮಂದಿಯ ವಿರುದ್ಧ ಕೇಸ್
“ಈ ಸಂಬಂಧ ಗುಜರಾತ್ ಪೊಲೀಸರ ಸಹಕಾರದೊಂದಿಗೆ ಗುರುಗ್ರಾಮ್ ಪೊಲೀಸರು ವಡ್ನಗರ್ ನಿವಾಸಿ ಶಾಕಿರ್ ಮಕ್ರಾನಿ ಎಂಬಾತನನ್ನು ಬಂಧಿಸಲಾಗಿದೆ. ಈತ ಯಾದವ್ ನಿಂದ ಪ್ರಭಾವಿತನಾಗಿದ್ದನು; ಹಣ ಗಳಿಸಲು ಅವನು ಸುಲಿಗೆ ಕರೆ ಮಾಡಲು ಈ ಯೋಜನೆ ರೂಪಿಸಿದ್ದನು.” ಎಂದು ಕ್ರೈಂ ಬ್ರಾಂಚ್ ನ ಎಸಿಪಿ ವರುಣ್ ದಹಿಯಾ ಎಎನ್ ಐಗೆ ಹೇಳಿದ್ದಾರೆ.
ಬಿಗ್ ಬಾಸ್ ಬಳಿಕ ಎಲ್ವಿಶ್ ಯಾದವ್ ಅವರ ಯೂಟ್ಯೂಬ್ ನಲ್ಲಿ ಚಂದಾದರರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಅವರು ಮ್ಯೂಸಿಕ್ ವಿಡಿಯೋದಲ್ಲೂ ಕಾಣಿಸಿಕೊಂಡಿದ್ದರು.
Gurugram Police arrests a man from Gujarat in connection with extortion call to Big Boss OTT 2 winner Elvish Yadav
Varun Dahiya ACP Crime Branch says, “Gurugram Police with cooperation from Gujarat Police has arrested one Shakir Makrani, a resident of Vadnagar. He was… pic.twitter.com/nvEtkjbtRe
— ANI (@ANI) October 26, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.