Bigg Boss: ಮಾನಸಿಕ ಒತ್ತಡ, ಅನಾರೋಗ್ಯದಿಂದ ಬಿಗ್ ಬಾಸ್ ಮನೆಯಿಂದ ಹೊರ ನಡೆದ ಸ್ಪರ್ಧಿ
Team Udayavani, Oct 9, 2023, 1:06 PM IST
ಚೆನ್ನೈ: ಬಿಗ್ ಬಾಸ್ ಕಾರ್ಯಕ್ರಮ ಆರಂಭಗೊಂಡಿದೆ. ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಆದರ ಈ ನಡುವೆ ಸ್ಪರ್ಧಿಯೊಬ್ಬರು ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್ ಬಾಸ್ ತಮಿಳು ಸೀಸನ್ 7 ಆರಂಭವಾಗಿ ಒಂದು ವಾರ ಮೇಲಾಗಿದೆ. ಈ ನಡುವೆ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಸ್ವಇಚ್ಛೆಯಿಂದ ಕಾರ್ಯಕ್ರಮದಿಂದ ಹೊರಬಂದಿದ್ದಾರೆ.
ಕಮಲ್ ಹಾಸನ್ ನಡೆಸಿಕೊಡುವ ಬಿಗ್ ಬಾಸ್ ತಮಿಳು ಸೀಸನ್ 7 ಆರಂಭಗೊಂಡಿದೆ. 18 ಸ್ಪರ್ಧಿಗಳಲ್ಲಿ ಬಾವ ಚೆಲ್ಲದೊರೈ ಕೂಡ ಒಬ್ಬರು. ಇವರು ಖ್ಯಾತ ಬರಹಗಾರರಾಗಿದ್ದಾರೆ. ಆದರೆ ಬಿಗ್ ಬಾಸ್ ನಲ್ಲಿ ಭಾಗಿಯಾದ ಇವರು ಮನೆಯಿಂದ ಒಂದೇ ವಾರದಲ್ಲಿ ಹೊರ ನಡೆದಿದ್ದಾರೆ.
ಬಿಗ್ ಬಾಸ್ ತಮಿಳು ಸೀಸನ್ 7 ನಲ್ಲಿ ಈಗಾಗಲೇ ಸೋಶಿಯಲ್ ಮೀಡಿಯಾ ಪ್ರಭಾವಿ ಅನನ್ಯ ರಾವ್ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಆಗಿದ್ದಾರೆ.
ಕಳೆದ ವಾರ ಕೂಡ ಬಾವ ಚೆಲ್ಲದೊರೈ ಅವರು ಕೂಡ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು. ಈ ಕಾರಣದಿಂದ ಅವರನ್ನು ಮತ್ತೆ ಸ್ಮಾಲ್ ಬಾಸ್ ಮನೆ( ಸಣ್ಣ ಬಾಸ್ ಹೌಸ್) ಗೆ ಕಳುಹಿಸಲಾಗಿತ್ತು. ಇದರಲ್ಲಿರುವ ಸ್ಪರ್ಧಿ ಅಡುಗೆ ಮತ್ತು ಶುಚಿಗೊಳಿಸುವಿಕೆಯನ್ನು ಮಾಡಬೇಕಾಗುತ್ತದೆ ಮತ್ತು ಯಾವುದೇ ಕಾರ್ಯದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ. ಈ ಕಾರಣದಿಂದ ಬಾವ ಅವರು ಮಾನಸಿಕವಾಗಿ ಒತ್ತಡವನ್ನು ಅನುಭವಿಸಿದ್ದರು.
ಸೋಮವಾರ (ಅಕ್ಟೋಬರ್ 9 ರಂದು) ಬಾವ ಚೆಲ್ಲದೊರೈ ಅವರು ತನಗೆ ಎದೆನೋವು ಆಗುತ್ತಿದೆ ಎಂದು ಬಿಗ್ ಬಾಸ್ ಬಳಿ ಕ್ಯಾಮರಾದ ಮುಂದೆ ಹೇಳಿದ್ದರು. ತಾನು ಕಾರ್ಯಕ್ರಮದಿಂದ ಹೊರಹೋಗುವುದಾಗಿ ಹೇಳಿದ್ದರು.ಅವರಿಗೆ ಸಮಾಲೋಚನೆ ಮತ್ತು ಯೋಚಿಸಲು ಸಮಯವನ್ನು ನೀಡಿದ ನಂತರ, ಬಾವಾ ಅವರು ಕಾರ್ಯಕ್ರಮದಿಂದ ನಿರ್ಗಮಿಸಲು ಬಯಸುತ್ತಾರೆ ಎಂದು ಪುನರುಚ್ಚರಿಸಿದರು. ಆ ಬಳಿಕ ಅವರು ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ.
“ನಾನು ತಕ್ಷಣ ಕಾರ್ಯಕ್ರಮದಿಂದ ಹೊರಗುಳಿಯಲು ಬಯಸುತ್ತೇನೆ. ಆ ವಿಷಯದಲ್ಲಿ ಯಾವುದೇ ಮರು ಯೋಚನೆ ಇಲ್ಲ. ಮನೆಯವರು ನನ್ನನ್ನು ತಂದೆಯಂತೆ ನೋಡಿಕೊಂಡರು. ಕಾರ್ಯಕ್ರಮಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಬಹುದೆಂದು ನಾನು ಯೋಚಿಸುತ್ತಿದ್ದೆ. ಆದರೆ ನನ್ನ ಆರೋಗ್ಯ ಮತ್ತು ಮಾನಸಿಕ ಆರೋಗ್ಯದಿಂದ ಅದು ಆಗಿಲ್ಲ” ಎಂದು ಅವರು ಬಿಗ್ ಬಾಸ್ ಮುಂದೆ ಹೇಳಿದ್ದಾರೆ.
ಭಾನುವಾರ(ಅಕ್ಟೋಬರ್ 8 ರಂದು) ಮನೆಯ ಎರಡನೇ ಕ್ಯಾಪ್ಟನ್ ಆಗಿ ಆಯ್ಕೆಗೊಂಡ ಸರವಣ ವಿಕ್ರಂ ಅವರಿಗೆ ಸ್ಮಾಲ್ ಬಾಸ್ ಮನೆಗೆ ಕಳುಹಿಸಲು ಸ್ಪರ್ಧಿಗಳನ್ನು ಆಯ್ಕೆ ಮಾಡಲು ಅವರಿಗೆ ಟಾಸ್ಕ್ ನೀಡಲಾಯಿತು. ಅವರು ಎರಡನೇ ವಾರಕ್ಕೆ ಬಾವ ಚೆಲ್ಲದೊರೈ, ಪ್ರದೀಪ್ ಆಂಟನಿ, ಐಶ್ವರ್ಯ, ಮಾಯಾ, ಕೂಲ್ ಸುರೇಶ್, ವಿಷ್ಣು ಮತ್ತು ವಿಜಯ್ ವರ್ಮಾ ಅವರನ್ನು ಆಯ್ಕೆ ಮಾಡಿದರು.
ಬಾ ಅವರು ಕಾರ್ಯಕ್ರಮದಿಂದ ಹೊರಹೋದ ಬಳಿಕ ಬೇರೊಬ್ಬರು ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
Bava Chelladurai walks out of the show.#BiggBossTamil7 pic.twitter.com/FmVG8sdHM4
— Bigg Boss Follower (@BBFollower7) October 9, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.