ಆಲೂರು : ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಬೈಕ್ ಸವಾರ ಪಾರು
Team Udayavani, Jan 24, 2021, 2:47 PM IST
ಆಲೂರು: ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬೈಕ್ ಸವಾರನೊಬ್ಬ ಕೂದಲೆಳೆ ಅಂತರ ದಲ್ಲಿ ಕಾಡಾನೆಯಿಂದ ಪಾರಾದ ಘಟನೆ ತಾಲೂಕಿನ ಕೆ.ಹೊಸ ಕೋಟೆ ಹೋಬಳಿ ಮಠದಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದಿಂದ ಒಂಟಿ ಸಲಗವೊಂದು ದಿಢೀರ್ ರಸ್ತೆಗೆ ಬಂದಿದೆ. ಈ ವೇಳೆ ಬೈಕ್ ಸವಾರ ಆನೆಗೆ ಅಡ್ಡಲಾಗಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಬೈಕ್ ಸವಾರನಿಗೆ ಹಿಂತಿರುಗಿ ಹೋಗುವಂತೆ ಕೂಗಾಡಿದ್ದಾರೆ. ಆದರೂ, ಯುವಕ ನುಗ್ಗಿ ಬಂದಿದ್ದು, ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದಾನೆ. ಒಂದು ವೇಳೆ ಆನೆ ಸೊಂಡಿಲನ್ನು ಎತ್ತಿದ್ದರೂ ಸಾಕಿತ್ತು, ಬೈಕ್ ಬಿದ್ದು ಆನೆಯ ಪಾದ ಸೇರುತ್ತಿದ್ದ ಎಂದು ಸ್ಥಳದಲ್ಲಿ ಕೆಲವರು ಹೇಳಿದ್ದಾರೆ. ಹಾರೋಹಳ್ಳಿ ಗ್ರಾಮದ ಸಂತೋಷ್ ಆನೆ ದಾಳಿಯಿಂದ ಪಾರಾದ ಯುವಕ. ಈತ ಸ್ವಗ್ರಾಮದಿಂದ ಮಗ್ಗೆ ಗ್ರಾಮಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಇದ್ದವರು ಕಾಡಾನೆಯಿಂದ
ಪಾರಾಗಿ ಬಂದ ಬೈಕ್ ಸವಾರನಿಗೆ ಸರಿಯಾಗಿಯೇ ಬುದ್ಧಿ ಹೇಳಿದ್ದಾರೆ. ಆಲೂರು- ಸಕಲೇಶಪುರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವಭಯದಿಂದ ಬದುಕು ನಡೆಸುವಂತಾಗಿದೆ.
ಇದನ್ನೂ ಓದಿ:ರೈತರ ಟ್ರಾಕ್ಟರ್ ರ‍್ಯಾಲಿಗೆ ಮಾರ್ಗಗಳನ್ನು ಸೂಚಿಸಿದ ದೆಹಲಿ ಪೊಲೀಸರು
ಕಳೆದ ಹಲವು ದಿನಗಳಿಂದ ಆಲೂರು ತಾಲೂಕಿನ ಕುಂದೂರು, ಕೆ.ಹೊಸಕೋಟೆ ಹೋಬಳಿಗಳಲ್ಲಿ ಭೀಮ ಎಂದು ಕರೆಯಲ್ಪಡುವ ಒಂಟಿ ಸಲಗವೊಂದು ಹಲವು ದಿನಗಳಿಂದ ಗ್ರಾಮಗಳ ಮುಖ್ಯ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ.
ಈವರೆಗೆ ಯಾವ ಪ್ರಾಣ ಹಾನಿಯಾಗದಿದ್ದರೂ ಜನ ಸಾಮಾನ್ಯರು ಭಯ ಭೀತರಾಗಿದ್ದಾರೆ. ಈ ಕಾಡಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆನ್ನುವುದು ಜನಸಾಮಾನ್ಯರ ಒತ್ತಾಯವಾಗಿದೆ. ಸೌಮ್ಯ ಸ್ವಭಾವದ ಆನೆ: ಮಠದ ಕೊಪ್ಪಲು ಗ್ರಾಮದ ಕಾಫಿ ತೋಟದಲ್ಲಿ ಶನಿವಾರ ದಿಢೀರ್ ಪ್ರತ್ಯಕ್ಷವಾದ ಒಂಟಿ ಸಲಗ(ಭೀಮ) ಸೌಮ್ಯ ಸ್ವಭಾವದ್ದಾಗಿದೆ. ಹಲವು ಗ್ರಾಮಗಳಲ್ಲಿ ಗಂಭೀರ್ಯದೊಂದಿಗೆ ಓಡಾಟ ನಡೆಸಿದ್ದ ಭೀಮ, ಬೆಳೆಗಳನ್ನು ಬಿಟ್ಟರೆ ಮನುಷ್ಯರಿಗೆ ಯಾವುದೇ ತೊಂದರೆ ಮಾಡಿಲ್ಲ.
ತಾಲೂಕಿನ ನಿಡನೂರು, ಮೆಣಸಮಕ್ಕಿ, ಬಾಳ್ಳುಪೇಟೆ, ಮಲ್ಲೇನಹಳ್ಳಿ, ಹಾಚ್ಗೋಡ್ನಹಳ್ಳಿ, ಚಿಗಳೂರು, ಅರಹಳ್ಳ ಕೊಪ್ಪಲು, ಅಬ್ಬನ, ಚಿನ್ನಳ್ಳಿ ಹಾಗೂ ಪಾಳ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಓಡಾಟ ನಡೆಸಿದ್ದ ಭೀಮ, ಯಾರಿಗೂ ತೊಂದರೆ ಮಾಡಿಲ್ಲ. ಇತ್ತ ಪುಂಡಾನೆ ಸೆರೆ ಹಿಡಿಯಲು, ಮೂರು ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಒಂದೆಡೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಇತ್ತ ಮತ್ತೂಂದು ಒಂಟಿ ಸಲಗ ಊರೂರು ತಿರುಗುತ್ತಾ, ಭೀತಿ ಹುಟ್ಟಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.