ಉರುಂಬಿಗೆ ಜೀವವೈವಿಧ್ಯ ಪಾರಂಪರಿಕ ತಾಣ ಪಟ್ಟ?
Team Udayavani, Feb 1, 2021, 6:50 AM IST
ಬೆಂಗಳೂರು: ದಕ್ಷಿಣ ಕನ್ನಡದ ಕುಮಾರ ಧಾರಾ ನದಿ ಪ್ರದೇಶ, ಕೋಲಾರದ ಅಂತರಗಂಗೆ ಬೆಟ್ಟ ಮತ್ತು ಬೆಂಗಳೂರಿನ ತಾತಗುಣಿ ಎಸ್ಟೇಟ್ ಸಹಿತ ರಾಜ್ಯದ 7 ಪರಿಸರ ಸೂಕ್ಷ್ಮ ಪ್ರದೇಶಗಳಿಗೆ “ಜೀವ ವೈವಿಧ್ಯ ಪಾರಂಪರಿಕ ತಾಣ’ಗಳ ಪಟ್ಟ ದೊರಕಲಿದೆ.
ಈ ಕುರಿತು ಕರ್ನಾಟಕ ಜೀವವೈವಿಧ್ಯ ಮಂಡಳಿ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅದಕ್ಕೆ ರಾಜ್ಯ ಸರಕಾರದ ಅನುಮೋದನೆ ಸಿಗಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಈಗಾಗಲೇ 4 ಪ್ರದೇಶಗಳನ್ನು ಜೀವವೈವಿಧ್ಯ ಪಾರಂಪರಿಕ ತಾಣಗಳಾಗಿ ಘೋಷಿಸಲಾಗಿದ್ದು, ಈಗ ಮತ್ತೆ ಏಳು ಪ್ರದೇಶಗಳನ್ನು ಅದಕ್ಕೆ ಸೇರಿಸಲಾಗುತ್ತದೆ.
ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇವು ಹೊಸ ತಾಣಗಳು
– ದಕ್ಷಿಣ ಕನ್ನಡ ಜಿಲ್ಲೆಯ ಉರುಂಬಿ – ಕುಮಾರಧಾರಾ ನದಿಪ್ರದೇಶ
– ಅಘನಾಶಿನಿಯ ಕಗ್ಗ ಭತ್ತದ ಪ್ರದೇಶ
– ಕೋಲಾರದ ಅಂತರಗಂಗೆ ಬೆಟ್ಟ
– ಚಿಕ್ಕಬಳ್ಳಾಪುರದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟ
– ನೆಲಮಂಗಲದ ಮಹಿಮಾರಂಗ ಬೆಟ್ಟ
– ಶಿರಸಿಯ ರಾಮಪತ್ರೆ ಜಡ್ಡಿ
– ಬೆಂಗಳೂರು ನಗರ ಜಿಲ್ಲೆಯ ರೋರಿಚ್ ಎಸ್ಟೇಟ್ (ತಾತಗುಣಿ ಎಸ್ಟೇಟ್)
ಉರುಂಬಿಯ ವೈಶಿಷ್ಟ್ಯ
ಕುಮಾರಧಾರಾ ನದಿ ತೀರದ ಉರುಂಬಿಯು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದೆ. ಕಡಬ ತಾಲೂಕಿಗೆ ಸೇರುತ್ತದೆ. ಹಲವು ಜೀವ ಸಂಕುಲಗಳನ್ನು ಒಳಗೊಂಡ ತಾಣ. ಅಪಾರ ಅರಣ್ಯ ಸಂಪತ್ತು ಹೊಂದಿದೆ. ಜತೆಗೆ ವನ್ಯಜೀವಿ, ಜೀವರಾಶಿ ವೈವಿಧ್ಯವನ್ನು ಹೊಂದಿದೆ. ಉರುಂಬಿಯು ಔಷಧ ಸಸ್ಯಗಳ ಜತೆಗೆ ವಿವಿಧ ಜಾತಿಯ ಕೀಟ, ಸರೀಸೃಪಗಳ ಆಶ್ರಯ ತಾಣವಾಗಿದೆ. ಈ ಪ್ರದೇಶವನ್ನು ಸೂಕ್ಷ್ಮ ಜೀವ ಸಂಕುಲವಿರುವ ಜಾಗವೆಂದು ಅರಣ್ಯ ಇಲಾಖೆ ಈಗಾಗಲೇ ಗುರುತಿಸಿದೆ.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.