ವಾವ್‌! ಏನು ರುಚಿ ಅಂತೀರಾ ಈ ಕಟ್ಲೆಟ್‌….ಸುಲಭ ವಿಧಾನ ಇಲ್ಲಿದೆ…

ಈ ರೀತಿ ಹಾಗಲಕಾಯಿ ಕಟ್ಲೆಟ್‌ ಮಾಡಿದ್ರೆ ಎಲ್ಲರೂ ಇಷ್ಟ ಪಟ್ಟು ತಿಂತಾರೆ....

ಶ್ರೀರಾಮ್ ನಾಯಕ್, Nov 25, 2022, 5:45 PM IST

ವಾವ್‌! ಏನು ರುಚಿ ಅಂತೀರಾ ಈ ಕಟ್ಲೆಟ್‌….

ತರಕಾರಿಗಳಲ್ಲಿ ಅತ್ಯಂತ ಕಹಿಯಾದ ಒಂದು ತರಕಾರಿಯೆಂದರೆ ಅದು ಹಾಗಲಕಾಯಿ. ಆರೋಗ್ಯದ ದೃಷ್ಟಿಯಲ್ಲಿ ಈ ತರಕಾರಿ ಉತ್ತಮ ಯಾಕೆಂದರೆ ಇದರಲ್ಲಿ ವಿಟಮಿನ್‌ ಎ ಮತ್ತು ವಿಟಮಿನ್‌ ಸಿ ಹಾಗೂ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಮಾತ್ರವಲ್ಲದೇ ಹಾಗಲಕಾಯಿ ಸೇವನೆಯಿಂದ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.ಹಾಗಲಕಾಯಿಯಿಂದ ಸಾಕಷ್ಟು ರುಚಿಯಾದ ಅಡುಗೆಯನ್ನು ಮಾಡುತ್ತಾರೆ. ಉದಾಃ ಪಲ್ಯ,ಗೊಜ್ಜು, ಸಾಂಬಾರ್‌,ಚಟ್ನಿ,ಕಿಸ್ಮುರಿ,ಚಿಪ್ಸ್‌.. ಹೀಗೆ ಪಟ್ಟಿ ಬಳೆಯುತ್ತ ಹೋಗುತ್ತದೆ.ಆದರೆ ನೀವು ಹಾಗಲಕಾಯಿಯ ಕಟ್ಲೆಟ್‌ ಮಾಡಿ ತಿಂದಿದ್ದೀರಾ..ಹಾಗಿದ್ದರೆ ಅತಿ ಕಡಿಮೆ ಸಮಯದಲ್ಲಿ ಈ ರೆಸಿಪಿಯನ್ನು ತಯಾರಿಸಬಹುದು.ಈ ರೆಸಿಪಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ….

ಬೇಕಾಗುವ ಸಾಮಗ್ರಿಗಳು
ಹಾಗಲಕಾಯಿ-1, ಬೇಯಿಸಿದ ಆಲೂಗಡ್ಡೆ (ಬಟಾಟೆ)-2 , ತುರಿದ ಕ್ಯಾರೆಟ್‌-ಅರ್ಧ ಕಪ್‌, ಬೇಯಿಸಿದ ಹಸಿ ಬಟಾಣಿ-5ಚಮಚ, ಅಮ್ಚೂರ್ ಪುಡಿ-1ಟೀ ಸ್ಪೂನ್‌, ಖಾರದ ಪುಡಿ-1ಚಮಚ, ಧನಿಯಾ ಪುಡಿ-ಅರ್ಧ ಚಮಚ, ಹಸಿಮೆಣಸು-2. ಬಾಂಬೆ ರವೆ-ಸ್ವಲ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ, ಎಣ್ಣೆ, ಉಪ್ಪು-ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಹಾಗಲಕಾಯಿ ತಿರುಳು ತೆಗೆದು ತುರಿದುಕೊಳ್ಳಿ. ತದನಂತರ ಒಂದು ಬೌಲ್‌ಗೆ ಹಾಗಲಕಾಯಿಯ ತುರಿ ಮತ್ತು ಉಪ್ಪು ಸೇರಿಸಿ ಸರಿಯಾಗಿ ಮಿಕ್ಸ್‌ ಮಾಡಿ. ಮತ್ತೊಂದು ಪಾತ್ರೆಗೆ ಬೇಯಿಸಿದ ಬಟಾಟೆ, ತುರಿದಿಟ್ಟ ಕ್ಯಾರೆಟ್‌, ಬೇಯಿಸಿದ ಹಸಿ ಬಟಾಣಿ ಸೇರಿಸಿ ಸರಿಯಾಗಿ ಮಿಕ್ಸ್‌ ಮಾಡಿಕೊಳ್ಳಿ. ನಂತರ ತುರಿದಿಟ್ಟ ಹಾಗಲಕಾಯಿ, ಧನಿಯಾ ಪುಡಿ, ಅಮ್ಚೂರ್ ಪುಡಿ, ಖಾರದ ಪುಡಿ, ಹಸಿಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪುನಃ ಮಿಕ್ಸ್‌ ಮಾಡಿಕೊಳ್ಳಿ. ಆಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಎಲ್ಲವನ್ನು ಮಿಕ್ಸ್‌ ಮಾಡಿ. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆ ಕಟ್ಟಿ, ತುಸು ಒತ್ತಿ ಚಪ್ಪಟೆ ಮಾಡಿ ರವೆಯಲ್ಲಿ ಹೊರಳಿಸಿ ತೆಗೆಯಿರಿ. ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಎಣ್ಣೆ ಸವರಿ ಕಾದ ನಂತರ 4ರಿಂದ 5 ಕಟ್ಲೆಟ್‌ ಗಳನ್ನಿಟ್ಟು ಎರಡೂ ಬದಿ ಹುರಿಯಿರಿ ನೀವು ಇದನ್ನು ಎಣ್ಣೆಯಲ್ಲಿಯೂ ಸಹ ಕರಿದು ತೆಗೆಯಬಹುದು). ಟೊಮೆಟೋ ಸಾಸ್‌ ಜೊತೆಗೆ ಬಿಸಿ ಬಿಸಿಯಾದ ಹಾಗಲಕಾಯಿ ಕಟ್ಲೆಟ್‌ ಸವಿಯಿರಿ.

ಸೂಚನೆ: ಕಟ್ಲೆಟ್‌ ಕೋಟಿಂಗ್‌ ಗೆ ರವೆ ಬದಲಿಗೆ ಬ್ರೆಡ್‌ ಕ್ರಂಬ್ಸ್ ಸಹ ಬಳಸಬಹುದು.

ಟಾಪ್ ನ್ಯೂಸ್

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

From 5 Rs Concert to 5 Grammys…: Tabla Ustad Zakir Hussain

Zakir Hussain: ‌5 ರೂ ಕಾನ್ಸರ್ಟ್‌ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್‌ ನಾದಮಯ ಪಯಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.