Election Update: “ಲಿಂಗಾಯತ ವಿರೋಧಿ” ಸಂಕಷ್ಟದಿಂದ ಪಾರಾಗಲು BJP ಡ್ಯಾಮೇಜ್‌ ಕಂಟ್ರೋಲ್‌

ಹಿಂದೆ ಕಾಂಗ್ರೆಸ್‌ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು

Team Udayavani, Apr 21, 2023, 7:45 AM IST

BJP FLAG 1

ಹುಬ್ಬಳ್ಳಿ: ಅದು 1990ರ ಅಕ್ಟೋಬರ್‌ ತಿಂಗಳು. ಅನಾರೋಗ್ಯ ಪೀಡಿತರಾಗಿದ್ದಾರೆ ಎಂಬ ನೆಪವೊಡ್ಡಿ ಲಿಂಗಾಯತ ನಾಯಕ, ಕಾಂಗ್ರೆಸ್‌ಗೆ ಐತಿಹಾಸಿಕ ದಾಖಲೆ ರೂಪದ 178 ಸ್ಥಾನಗಳನ್ನು ಗೆಲ್ಲಿಸಿ ಕೊಟ್ಟಿದ್ದ ವೀರೇಂದ್ರ ಪಾಟೀಲರನ್ನು ಹೈಕಮಾಂಡ್‌ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತ್ತು. ತನ್ನ ನಾಯಕನನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂಬ ಲಿಂಗಾಯತರ ಸಿಟ್ಟು ಕಾಂಗ್ರೆಸ್‌ನಿಂದ ಸಮಾಜ ದೂರವಾಗುವಂತೆ ಮಾಡಿತ್ತು. ಸುಮಾರು ಎರಡು ದಶಕಗಳ ನಂತರ ಇದೀಗ ಬಿಜೆಪಿಗೂ ಅಂತಹದ್ದೇ ಸ್ಥಿತಿ ಎದುರಾಗಿದೆಯೇ?

– ಇಂತಹದೊಂದು ಪ್ರಶ್ನೆ ಈಗ ಎದುರಾಗಿದೆ. ರಾಜ್ಯದ ಒಟ್ಟು ಜನಸ್ಯಂಖ್ಯೆಯಲ್ಲಿ ಲಿಂಗಾಯತರು ಶೇ.18ರಷ್ಟು ಇದ್ದು, ವಿಶೇಷವಾಗಿ ಉತ್ತರ ಕರ್ನಾಟಕದಾದ್ಯಂತ ಪ್ರಬಲರಾಗಿದ್ದಾರೆ. ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿಯೂ ಲಿಂಗಾಯತರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. 90ರ ದಶಕದಲ್ಲಿ ಕಾಂಗ್ರೆಸ್‌ನಿಂದ ಮುನಿಸಿಕೊಂಡ ಲಿಂಗಾಯತರು ಜನತಾ ಪರಿವಾರ ನಂತರದಲ್ಲಿ ಬಿಜೆಪಿ ಕಡೆ ವಾಲಿದ್ದು, ಇದೀಗ ಬಿಜೆಪಿ ಬಗ್ಗೆಯೂ ಮುನಿಸಿಕೊಂಡ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಪಕ್ಷದಲ್ಲಿರುವ ಹಿರಿಯ ನಾಯಕರೆಲ್ಲರೂ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

ಸಾಮಾನ್ಯವಾಗಿ ಚುನಾವಣೆ ಸಂದರ್ಭ ಕೆಲ ಸೂಕ್ಷ್ಮ ವಿಚಾರಗಳು ನೋಡುವುದಕ್ಕೆ ಸಣ್ಣ ಕಿಡಿಯಾಗಿ ಕಂಡರೂ ಪರಿಣಾಮ ದೊಡ್ಡದಾಗಿರುತ್ತದೆ. ಇನ್ನು ಸಮಾಜವೆಂದು ಬಂದಾಗ ಅದು ಭಾವನಾತ್ಮಕ ವಿಚಾರವಾಗಿ ಬೇರೆಯೇ ರೂಪ ಪಡೆಯುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು ಇಂತಹ ಸೂಕ್ಷ್ಮ ವಿಚಾರ ಬೆಳೆಯುವುದಕ್ಕೆ ಅವಕಾಶ ನೀಡದೆ ಅದನ್ನು ಸರಿಪಡಿಸಲು ಯತ್ನಿಸುತ್ತವೆ. ಇದೀಗ ಬಿಜೆಪಿ ಮಾಡುತ್ತಿರುವುದು ಅದನ್ನೇ.

ನಾಡಿಮಿಡಿತ ಅರಿತಿದ್ದ ಹೆಗಡೆ: ಲಿಂಗಾಯತ ಸಮಾಜದ ಬಲ ಹಾಗೂ ಪರಿಣಾಮದ ನಾಡಿಮಿಡಿತ ಅರಿತಿದ್ದ ರಾಮಕಷ್ಣ ಹೆಗಡೆ ಲಿಂಗಾಯತ ಸಮಾಜಕ್ಕೆ ಹೆಚ್ಚು ಮನ್ನಣೆ ನೀಡಿದ್ದರಲ್ಲದೆ, ಅನೇಕ ಲಿಂಗಾಯತ ಮುಖಂಡರನ್ನು ರಾಜಕೀಯ ಮುಖ್ಯವಾಹಿನಿಗೆ ತಂದಿದ್ದರು. ಹೆಗಡೆ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಲ್ಲವಾಗಿದ್ದರೂ ಇಂದಿಗೂ ಲಿಂಗಾಯತ ನಾಯಕ ಎಂದ ಕೂಡಲೇ ಅನೇಕರು ಹೇಳುವುದು ಅವರದ್ದೇ ಹೆಸರು.

ಜನತಾ ಪರಿವಾರಕ್ಕೆ ಲಿಂಗಾಯತರು ಬೆಂಬಲ ನೀಡಿದ್ದರು. 1985ರಲ್ಲಿ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷ ಆಂತರಿಕ ಕಿತ್ತಾಟಕ್ಕೆ ಸಿಲುಕಿತ್ತು. ಇದರಿಂದ ರಾಜ್ಯದ ಮತದಾರರು ಬೇಸತ್ತಿದ್ದರು. ಲಿಂಗಾಯತರು ಇದಕ್ಕೆ ಹೊರತಾಗಿರಲಿಲ್ಲ. ಕಾಂಗ್ರೆಸ್‌ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ 1989ರಲ್ಲಿ ವಿಧಾನಸಭೆ ಚುನಾವಣೆಗೆ ಮುಂದಾದಾಗ ತಮ್ಮದೇ ಸಮುದಾಯದ ನಾಯಕನ ನೇತೃತ್ವವೆಂದು ಕಾಂಗ್ರೆಸ್‌ ಬೆಂಬಲಕ್ಕೆ ಮುಂದಾಗಿದ್ದರು. ಚುನಾವಣೆಯಲ್ಲಿ ಅಭೂತಪೂರ್ವ, ದಾಖಲೆ ರೂಪ ಎನ್ನುವಂತೆ ಕಾಂಗ್ರೆಸ್‌ 224 ಸ್ಥಾನಗಳ ಪೈಕಿ 178 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಜನತಾ ಪರಿವಾರದಲ್ಲಿ ಒಡಕಾಗಿ ಜನತಾ ದಳ 24 ಸ್ಥಾನಗಳಲ್ಲಿ ಗೆದ್ದರೆ, ಜನತಾ ಪಕ್ಷ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿತ್ತು.

ಜ್ವಾಲೆ ರೂಪ: ರಾಜ್ಯದಲ್ಲಿ ಕಾಂಗ್ರೆಸ್‌ಗೆ 178 ದಾಖಲೆ ರೂಪದ ಸ್ಥಾನಗಳ ಗೆಲುವು ತಂದುಕೊಟ್ಟು ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅನಾರೋಗ್ಯ ಕಾರಣದಿಂದ ಅಂದಿನ ಕಾಂಗ್ರೆಸ್‌ ವರಿಷ್ಠರಾಗಿದ್ದ ರಾಜೀವ ಗಾಂಧಿ ಅವಮಾನಕರ ರೀತಿಯಲ್ಲಿ ಸಿಎಂ ಪಟ್ಟದಿಂದ ಕೆಳಗಿಳಿಸಿದ್ದರು. ನಂತರ ರಾಜ್ಯದಲ್ಲಿ ಅಲ್ಪಾವಧಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತಾದರೂ ಆ ಬಳಿಕ ಎಸ್‌.ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಅಲ್ಲಿಗೆ ಕಾಂಗ್ರೆಸ್‌ ಬೆಂಬಲಿಸಿದ್ದ ಲಿಂಗಾಯತ ಸಮುದಾಯ ತಮ್ಮ ನಾಯಕನನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂಬ ಆಕ್ರೋಶದೊಂದಿಗೆ ಕಾಂಗ್ರೆಸ್‌ಗೆ ಪಾಠ ಕಲಿಸಬೇಕೆಂಬ ನಿರ್ಣಯಕ್ಕೆ ಬಂದಿತ್ತು. ಪರ್ಯಾಯ ಇಲ್ಲದೆ ಮತ್ತೆ ಜನತಾ ಪರಿವಾರ ಕಡೆ ವಾಲಿತ್ತು. ವೀರೇಂದ್ರ ಪಾಟೀಲ ನಂತರದಲ್ಲಿ ಸಮಾಜಕ್ಕೆ ಒಬ್ಬ ಗಟ್ಟಿ ನಾಯಕ ಇಲ್ಲ ಎಂಬ ಕೊರಗು ಲಿಂಗಾಯತ ಸಮಾಜದಲ್ಲಿತ್ತು. ಹೋರಾಟ ಮೂಲಕವೇ ರಾಜಕೀಯ ನಡೆ ಕಂಡುಕೊಂಡ ಬಿ.ಎಸ್‌.ಯಡಿಯೂರಪ್ಪ ನಿಧಾನವಾಗಿ ಲಿಂಗಾಯತ ಸಮಾಜಕ್ಕೆ ನಾಯಕನ ಪಟ್ಟ ತುಂಬ ತೊಡಗಿದ್ದರು. 2008ರ ನಂತರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಹೊರಹೊಮ್ಮಿದ್ದರು. ಇಂದಿಗೂ ಲಿಂಗಾಯತರ ಮೇಲೆ ತಮ್ಮದೇ ಪ್ರಭಾವ ಹೊಂದಿದ್ದಾರೆ.

ಇಲ್ಲಿವರೆಗೆ ಲಿಂಗಾಯತ ಸಮಾಜದ ಒಟ್ಟು 9 ಜನರು ಮುಖ್ಯಮಂತ್ರಿಯಾಗಿದ್ದು, ಎಸ್‌.ನಿಜಲಿಂಗಪ್ಪ 1962-1968ವರೆಗೆ ಪೂರ್ಣಾವಧಿ ಸಿಎಂ ಆಗಿದ್ದು ಬಿಟ್ಟರೆ ಉಳಿದವರಾರು ಅವಧಿ ಪೂರ್ಣಗೊಳಿಸಿಲ್ಲ. ಬಿ.ಡಿ.ಜತ್ತಿ, ಎಸ್‌.ಆರ್‌.ಕಂಠಿ, ವೀರೇಂದ್ರ ಪಾಟೀಲ, ಎಸ್‌.ಆರ್‌.ಬೊಮ್ಮಾಯಿ, ಜೆ.ಎಚ್‌.ಪಟೇಲ್‌, ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾರೊಬ್ಬರಿಗೂ ಪೂರ್ಣಾವಧಿ ಅಧಿಕಾರ ಸಿಕ್ಕಿಲ್ಲ ಎಂಬ ನೋವು ಲಿಂಗಾಯತರದ್ದಾಗಿದೆ.

ಕಾಂಗ್ರೆಸ್‌ “ಅಸ್ತ್ರ”-ಬಿಜೆಪಿ ಪ್ರತ್ಯಾಸ್ತ್ರ
ಯಡಿಯೂರಪ್ಪ ಅವರನ್ನು 2021ರ ಜುಲೈನಲ್ಲಿ ಸಿಎಂ ಪಟ್ಟದಿಂದ ಕೆಳಗಿಳಿಸಿದ ರೀತಿ ಹಾಗೂ 2023ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಅವರ ಘೋಷಣೆ ಲಿಂಗಾಯತರಲ್ಲಿ ನೋವು ಮೂಡಿಸಿತ್ತು. ಇದರ ಬೆನ್ನ ಹಿಂದೆಯೇ ಲಿಂಗಾಯತ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಟಿಕೆಟ್‌ ಸಿಗದೆ ಪಕ್ಷದಿಂದ ನಿರ್ಗಮಿಸಿದ್ದು ಆಕ್ರೋಶ ಹೆಚ್ಚುವಂತೆ ಮಾಡಿದೆ. ಪಕ್ಷದಲ್ಲಿ ಕಡೆಗಣನೆ, ಟಿಕೆಟ್‌ ತಪ್ಪಲು ಪ್ರಬಲ ಕಾರಣಗಳನ್ನು ಶೆಟ್ಟರ ಬಹಿರಂಗಪಡಿಸಿದ್ದು ಕಿಡಿಗೆ ತುಪ್ಪ ಸುರಿದಂತಾಗಿದೆ. ಈ ಹಿನ್ನೆಲೆಯಲ್ಲಿ “ಲಿಂಗಾಯಿತ ವಿರೋಧಿ” ಎಂಬ ಹಣೆಪಟ್ಟಿ ಹಚ್ಚುವ ಕಾಂಗ್ರೆಸ್‌ “ಅಸ್ತ್ರ’ವನ್ನು ಹಿಮ್ಮೆಟ್ಟಿಸಲು ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲೇ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ.

~ ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.