ಬಿಜೆಪಿ ಸರ್ಕಾರ ಗೋಮಂತಕೀಯ ಕಲಾವಿದರ ಗೌರವ ಉಳಿಸಿಕೊಳ್ಳುವಲ್ಲಿ ವಿಫಲ: ಕಾಮತ್
ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋವಾ ಪ್ರೀಮಿಯರ್ ಅಧೀಕೃತ ಮಾಡಿ
Team Udayavani, Nov 15, 2021, 2:44 PM IST
ಪಣಜಿ: ಗೋವಾದಲ್ಲಿ ನೊವೆಂಬರ್ 20 ರಿಂದ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೊಂಕಣಿ ಹಾಗೂ ಮರಾಠಿ ಚಲನಚಿತ್ರಗಳಿಗಾಗಿ ಗೋವಾ ಪ್ರೀಮಿಯರ್ ಅಧೀಕೃತ ವಿಭಾಗ ಮಾಡುವ ಅಗತ್ಯವಿದ್ದು, ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ತ್ವರಿತವಾಗಿ ಹಸ್ತಕ್ಷೇಪ ಮಾಡಿ ಗೋವಾದ ಚಲನಚಿತ್ರ ಕ್ಷೇತ್ರಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಆಗ್ರಹಿಸಿದ್ದಾರೆ.
ಮಡಗಾಂವ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರವು ಗೋಮಂತಕೀಯ ಕಲಾವಿದರು ಮತ್ತು ಚಲನಚಿತ್ರ ಕಲಾಕಾರರ ಗೌರವವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಕೋವಿಡ್ ಮಹಾಮಾರಿಯ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಕೂಡ ಗೋವಾದ ಚಲನಚಿತ್ರ ನಿರ್ಮಾಪಕರು ಚಲನಚಿತ್ರ ನಿರ್ಮಾಣ ಮಾಡಿದ್ದಾರೆ. ಇದು ಅಭಿಮಾನ ಪಡುವ ವಿಷಯವಾಗಿದೆ. ಸರ್ಕಾರವು ಇವರ ಚಲನಚಿತ್ರಗಳನ್ನು ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ಅಧೀಕೃತ ವಿಭಾಗದಲ್ಲಿ ಪ್ರದರ್ಶಿಸುವುದು ಈ ಚಲನಚಿತ್ರ ನಿರ್ಮಾಪಕರಿಗೆ ಮತ್ತು ಕಲಾವಿದರಿಗೆ ಗೌರವ ನೀಡಿದಂತೆ’ ಎಂದು ದಿಗಂಬರ್ ಕಾಮತ್ ಅಭಿಪ್ರಾಯಪಟ್ಟರು.
‘ಗೋವಾ ಫಿಲ್ಮ್ ಫೈನಾನ್ಸ್ ಯೋಜನೆಯ ಅಡಿಯಲ್ಲಿ ಕಲಂ 8 ರ ನಿಯಮ ಕ ಪ್ರಕಾರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಫಿಚ್ಚರ್ ಫಿಲ್ಮ್ ಗೆ 5 ಲಕ್ಷ ರೂ. ಹಾಗೂ ನಾನ್ ಫಿಚ್ಚರ್ ಫಿಲ್ಮ್ ಗೆ 2.50 ಲಕ್ಷ ರೂ ಆರ್ಥಿಕ ಸಹಾಯ ನೀಡಲಾಗುತ್ತಿತ್ತು. ಆದರೆ ಕಳೆದ 5 ವರ್ಷಗಳಿಂದ ಈ ಯೋಜನೆಯ ಅಡಿಯಲ್ಲಿ ಯಾವುದೇ ಅನುದಾನ ನೀಡಲಾಗಿಲ್ಲ’ ಎಂದು ದಿಗಂಬರ್ ಕಾಮತ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.