400 ಕಾರುಗಳಲ್ಲಿ ಸೈರನ್ ಮೊಳಗಿಸುತ್ತಾ ಬಂದ BJP ಶಾಸಕ ಕಾಂಗ್ರೆಸ್‌ಗೆ ಸೇರ್ಪಡೆ
300 ಕಿಮೀ ದೂರದಿಂದ ಬೆಂಬಲಿಗರ ಜತೆ ಬಂದ ಬೈಜನಾಥ ಸಿಂಗ್
Team Udayavani, Jun 16, 2023, 7:19 AM IST
ಭೋಪಾಲ: ಒಂದು ಪಕ್ಷ ತೊರೆದು ಮತ್ತೂಂದು ಪಕ್ಷ ಸೇರ್ಪಡೆಯಾಗುವುದು ಚುನಾವಣಾ ವರ್ಷದಲ್ಲಿ ಸಾಮಾನ್ಯ. ಆದರೆ, ಮಧ್ಯಪ್ರಶದ ಬಿಜೆಪಿ ಶಾಸಕ ಬೈಜನಾಥ ಸಿಂಗ್ ಮಾತ್ರ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಶಿವಪುರಿಯಿಂದ 300 ಕಿಮೀ ದೂರ ಇರುವ ರಾಜಧಾನಿ ಭೋಪಾಲಕ್ಕೆ ಕಾರ್‌ನಲ್ಲಿ ಸೈರನ್ ಮೊಳಗಿಸುತ್ತಾ ತೆರಳಿದ್ದಾರೆ. ತನ್ನ ಜತೆಗೆ 400 ಕಾರುಗಳಲ್ಲಿ ಬೆಂಬಲಿಗರನ್ನೂ ಕರೆದುಕೊಂಡು ವಿಶೇಷ. ದಾರಿಯುದ್ದಕ್ಕೂ ಜನರು ಅದನ್ನು ತಮ್ಮ ಮೊಬೈಲಲ್ಲಿ ಚಿತ್ರೀಕರಿಸಿದ್ದಾರೆ. ಫೋಟೋ ಮತ್ತು ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.ನಿಯಮಗಳ ಪ್ರಕಾರ ಸೈರನ್‌ಗಳನ್ನು ಮೊಳಗಿಸಿ ಸಂಚರಿಸಲು ಅನುಮತಿ ಇರುವುದು ಆ್ಯಂಬ್ಯುಲೆನ್ಸ್‌ಗಳಿಗೆ, ಅಗ್ನಿಶಾಮಕ ದಳ, ಪೊಲೀಸರಿಗೆ ಮಾತ್ರ.
ಹೀಗೆ ಭೋಪಾಲ ತಲುಪಿದ ಬೈಜನಾಥ ಅವರನ್ನು ಕಾಂಗ್ರೆಸ್ ನಾಯಕ ಕಮಲ್‌ನಾಥ್ ಮತ್ತು ಇತರ ಪ್ರಮುಖ ನಾಯಕರು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕೆಲವರು ಅದನ್ನು ಸಿಂಘಮ್ ಸಿನಿಮಾದಲ್ಲಿನ ದೃಶ್ಯಾವಳಿಗೆ ಹೋಲಿಕೆ ಮಾಡಿದ್ದರೆ, ಇತರರು ಅದನ್ನು ಟೀಕಿಸಿದ್ದಾರೆ. 2020ರಲ್ಲಿ ಮುಖ್ಯಮಂತ್ರಿಯಾಗಿದ್ದ ಕಮಲ್‌ನಾಥ್ ವಿರುದ್ಧ ಹಾಲಿ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಬಂಡಾಯ ಎದ್ದಿದ್ದ ಶಾಸಕರ ಪೈಕಿ ಬೈಜನಾಥ್ ಕೂಡ ಒಬ್ಬರಾಗಿದ್ದಾರೆ. ಅವವರ್ಷಾಂತ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಅವರಿಗೆ ಟಿಕೆಟ್ ಸಿಗುವುದು ಅಸಂಭವ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.