![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Mar 11, 2022, 6:11 PM IST
ಬೆಂಗಳೂರು : ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ಕಡೆ ಸರಕಾರ ರಚಿಸುತ್ತಿರುವ ಸಂಭ್ರಮದಲ್ಲಿರುವ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಟ್ವೀಟ್ ಗಳ ಮೂಲಕ ಟಾಂಗ್ ನೀಡಿದೆ.
ಕಾಂಗ್ರೆಸ್ ಪಕ್ಷಆಡಳಿತ ಪಕ್ಷ ಬಿಡಿ ವಿಪಕ್ಷ ಸ್ಥಾನಕ್ಕೂ ಅರ್ಹವಲ್ಲ. ಸಿಧು ಮತ್ತು ಚನ್ನಿ ಆಂತರಿಕ ಕಲಹದ ಪ್ರತಿಫಲವಾಗಿ ಪಂಜಾಬಿನಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ನೆಲ ಕಚ್ಚಲಿದೆ. ಡಿಕೆಶಿ ಹಾಗೂ ಸಿದ್ದು ಅವರ ನಡುವಿನ ಕಲಹದಿಂದಾಗಿ ವಿಪಕ್ಷ ಸ್ಥಾನವನ್ನೇ ಭದ್ರಪಡಿಸಿಕೊಳ್ಳಲಿದೆ. ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ ಎಂಬ ಪೂಜಾರಿಯವರ ಮಾತು ನೆನಪಿಸುತ್ತಿದ್ದೇವೆ ಎಂದು ಬರೆದಿದೆ.
ಪಂಚ ರಾಜ್ಯದ ಫಲಿತಾಂಶದಿಂದ ಒಂದು ವಿಚಾರ ಸ್ಪಷ್ಟವಾಗಿದೆ.ಕಾಂಗ್ರೆಸ್ ಪಕ್ಷವು, ಆಡಳಿತ ಪಕ್ಷ ಬಿಡಿ ವಿಪಕ್ಷ ಸ್ಥಾನಕ್ಕೂ ಅರ್ಹವಲ್ಲ ಎಂಬ ತೀರ್ಪನ್ನು ಮತದಾರರು ನೀಡಿದ್ದಾರೆ. ಶತಮಾನದ ಇತಿಹಾಸ ಇರುವ ಪಕ್ಷ, ಇತಿಹಾಸ ಪುಟ ಸೇರುವ ಸಮಯ ಬಂದಾಗಿದೆ ಎಂದು ಇನ್ನೊಂದು ಟ್ವೀಟ್ ಮಾಡಿದೆ.
ಯುಪಿಯಲ್ಲಿ ನಮ್ಮ ಪಕ್ಷದ ಸಂಘಟನೆ ಸ್ವಲ್ಪ ದುರ್ಬಲವಾಗಿದೆ, ಪಕ್ಷ ಸಂಘಟನೆಯ ಕೊರತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಅಂದರೆ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಅವರು ವಿಫಲರಾಗಿದ್ದಾರೆ ಎನ್ನುವುದು ನಿಜವಾಗಿದೆ.ರಾಜ್ಯದಲ್ಲೇ ವಿಫಲರಾದವರನ್ನು ದೇಶದ ಪ್ರಧಾನಿಯಾಗಿ ಬಿಂಬಿಸುವುದು ಮೂರ್ಖತನವಲ್ಲವೇ? ಎಂದು ಪ್ರಶ್ನಿಸಿದೆ.
ಸುರಕ್ಷಿತ ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಪಂಚರಾಜ್ಯಗಳ ಫಲಿತಾಂಶ ಬಂದ ನಂತರವೂ ಯಾವುದಾದರು ಕ್ಷೇತ್ರದಲ್ಲಿ ನಿಂತು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆಯೇ? ಕಾಂಗ್ರೆಸ್ ಸಾಧನೆ ಹೇಳುವುದು ಬಿಟ್ಟು ಬಿಜೆಪಿ ಸಾಧನೆಯ ಬಗ್ಗೆ ಪರಾಮರ್ಶಿಸಲು ನಾಚಿಗೆಯೆನಿಸುವುದಿಲ್ಲವೇ? ಎಂದು ವ್ಯಂಗ್ಯವಾಡಿದೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.