![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 24, 2021, 1:12 PM IST
ಬೆಂಗಳೂರು : ಸಿದ್ದರಾಮಯ್ಯ ಅವರ ಮೂರನೇ ದೆಹಲಿ ಭೇಟಿ ಡಿ. ಕೆ. ಶಿವಕುಮಾರ್ ಅವರ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ ಎಂದು ಪ್ರಶ್ನಿಸಿ ಬಿಜೆಪಿ ಭಾನುವಾರ ಟ್ವೀಟ್ ಮಾಡಿದೆ.
”ಸಿದ್ದರಾಮಯ್ಯ ಅವರ ಮೊದಲ ದೆಹಲಿ ಭೇಟಿ ಡಿಕೆಶಿ ಮಾಡಿದ ಪದಾಧಿಕಾರಿಗಳ ಪಟ್ಟಿಯನ್ನು ನಿರ್ಲಕ್ಷ್ಯ ಮಾಡುವಂತೆ ಮಾಡಿತು. ಎರಡನೇ ಭೇಟಿ ಪದಾಧಿಕಾರಿಗಳ ಪಟ್ಟಿಯನ್ನೇ ತಿರಸ್ಕರಿಸುವಂತೆ ಮಾಡಿತು. ಸಿದ್ದರಾಮಯ್ಯ ಅವರ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ? #ಅಸಹಾಯಕಡಿಕೆಶಿ ಎಂದು ಟ್ವೀಟ್ ಮಾಡಿದೆ.
ಸಿದ್ದರಾಮಯ್ಯ ಅವರ ಮೊದಲ ದೆಹಲಿ ಭೇಟಿ ಡಿಕೆಶಿ ಮಾಡಿದ ಪದಾಧಿಕಾರಿಗಳ ಪಟ್ಟಿಯನ್ನು ನಿರ್ಲಕ್ಷ್ಯ ಮಾಡುವಂತೆ ಮಾಡಿತು.
ಎರಡನೇ ಭೇಟಿ ಪದಾಧಿಕಾರಿಗಳ ಪಟ್ಟಿಯನ್ನೇ ತಿರಸ್ಕರಿಸುವಂತೆ ಮಾಡಿತು.
ಸಿದ್ದರಾಮಯ್ಯ ಅವರ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?#ಅಸಹಾಯಕಡಿಕೆಶಿ
— BJP Karnataka (@BJP4Karnataka) October 24, 2021
ಸದಸ್ಯತ್ವ ಷರತ್ತಿಗೆ ಲೇವಡಿ
ಕಾಂಗ್ರೆಸ್ ಸದಸ್ಯತ್ವ ಷರತ್ತುಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ”ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಹಲವು ಷರತ್ತುಗಳಂತೆ!!! ಕುಡಿತ, ಡ್ರಗ್ಸ್ ಚಟ ಹೊಂದಿರಬಾರದು ಎಂಬ ಷರತ್ತು ವಿಧಿಸಿದೆ. ವಿದೇಶಿ ವಿಮಾನ ನಿಲ್ದಾಣದಲ್ಲಿ ಯಾರೂ ಸಿಕ್ಕಿಬೀಳಬಾರದು ಎಂಬ ಕಾಳಜಿಯಿಂದ ಈ ನಿಯಮ ರೂಪಿಸಿರಬಹುದೇ? #ನಕಲಿಕಾಂಗ್ರೆಸ್‌ಸದಸ್ಯತ್ವ” ಎಂದು ಟ್ವೀಟ್ ಮಾಡಿದೆ.
”ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಕಾನೂನು ಮೀರಿ ಹೆಚ್ಚಿನ ಆಸ್ತಿ ಸಂಪಾದಿಸಿರಬಾರದಂತೆ. ಅಕ್ರಮ ಸಂಪತ್ತಿನ ಮೂಲಕ ಕುಬೇರರಾದ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ಕೆಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಹಾಗೂ ನಕಲಿ ಗಾಂಧಿಗಳ ಸದಸ್ಯತ್ವ ರದ್ಧತಿಗೆ ಏನಾದರೂ ಯೋಜನೆ ರೂಪಿಸಿದ್ದೀರಾ?” ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
”ಪಿಸುಮಾತು ಪ್ರಕರಣ ಸಂಬಂಧ ಉಪಚುನಾವಣೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದಿದ್ದ ಡಿ.ಕೆ.ಶಿವಕುಮಾರ್ ಈಗ ಮೆತ್ತಗಾಗಿ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಬಣದ ಉಗ್ರಪ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರೆ ಎಲ್ಲಿ ಅಧ್ಯಕ್ಷ ಪಟ್ಟ ಕೈ ತಪ್ಪುತ್ತದೆಯೆಂಬ ಭಯವೇ?
ಸಿದ್ದರಾಮಯ್ಯ ದಿಲ್ಲಿ ಪ್ರವಾಸದಿಂದ ಡಿಕೆಶಿ ಕುಗ್ಗಿ ಹೋಗಿದ್ದಾರೆಯೇ?” ಎಂದು ಜರಿದಿದೆ.
”ಬಹುಶಃ ಕೆಪಿಸಿಸಿ ಕಂಡ ಅತ್ಯಂತ ಅಸಹಾಯಕ ಅಧ್ಯಕ್ಷ ಎಂಬ ಪಟ್ಟ ಡಿಕೆಶಿವಕುಮಾರ್ ಅವರಿಗೆ ಒಲಿದು ಬರಬಹುದು.ತಮ್ಮ ವಿರುದ್ಧ ಸಂಚು ರೂಪಿಸಿದ ವ್ಯಕ್ತಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕೂ ಡಿಕೆಶಿ ಅಳುಕುತ್ತಿದ್ದಾರೆ.ಡಿಕೆಶಿ ಎದುರು ಸಿದ್ದರಾಮಯ್ಯ ಕೈ ಮೇಲಾಯಿತೇ?” ಎಂದು ಟ್ವೀಟ್ ಮಾಡಿದೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.