ಭಾರತ ದರ್ಶನ: ಬಿಜೆಪಿ ಯುವಮೋರ್ಚಾದ 16 ರಾಜ್ಯದ 40ಕ್ಕೂ ಅಧಿಕ ಮಂದಿ ಭಾಗಿ
Team Udayavani, Apr 1, 2022, 4:40 PM IST
ಬೆಂಗಳೂರು: ಭಾರತ ದರ್ಶನ ಹೆಸರಿನಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ದೇಶದ 16 ರಾಜ್ಯದ 40ಕ್ಕೂ ಅಧಿಕ ಬಿಜೆಪಿ ಯುವ ಮೋರ್ಚಾ ಹಲವು ಪದಾಧಿಕಾರಿಗಳು ಏಪ್ರಿಲ್ ಒಂದರಿಂದ 4ರ ತನಕ ಪ್ರವಾಸ ನಡೆಸಲಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಪರಿಕಲ್ಪನೆಯಾದ ಭಾರತ ದರ್ಶನ ಕ್ಕಾಗಿ ನಮ್ಮ ದೇಶದ ಉದ್ದಗಲಕ್ಕೂ ಸಂಪೂರ್ಣವಾಗಿ ಪ್ರವಾಸ ಮಾಡಿ ಈ ಯೋಜನೆಯನ್ನು ಎಲ್ಲಾ ಕಾರ್ಯಕರ್ತರಿಗೆ ತಿಳಿಸುವ ವಿಚಾರವಾಗಿದ್ದು, ವಿವಿಧ ರಾಜ್ಯದ ಕಾರ್ಯಕರ್ತರು ದೇಶದ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಆ ರಾಜ್ಯದ ಪರಂಪರೆ ಮತ್ತು ವಿಚಾರಗಳನ್ನು ತಿಳಿಸಿಕೊಡುವ ಪ್ರಯತ್ನವಾಗಿರುತ್ತದೆ.
ಮೊದಲಿಗೆ ಕರ್ನಾಟಕ ರಾಜ್ಯವನ್ನು ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಆಯ್ಕೆ ಮಾಡಿದ್ದು, ಬೆಂಗಳೂರು ಸೇರಿದಂತೆ ಎಚ್ಎಎಲ್, ಬಿಎಎಲ್, ಕಬ್ಬನ್ ಪಾರ್ಕ್, ಕೆಲವು ಸ್ಟಾರ್ಟ್ಅಪ್ ಕಂಪನಿಗಳನ್ನು ಹಾಗೂ ಓಲಾ ಪ್ಲಾಂಟ್ ಕೃಷ್ಣಗಿರಿಗೆ ಭೇಟಿ ನೀಡಲಿದ್ದು, ನಂತರ ಹಲವು ಕಲಾತ್ಮಕ ಕಾರ್ಯಕ್ರಮಗಳಿಗೂ ಕರೆದೊಯ್ಯಲಾಗುತ್ತದೆ. ಹಂಪಿ ಮತ್ತು ಅಲ್ಲಿನ ಸುತ್ತಮುತ್ತ ಪ್ರದೇಶಗಳನ್ನು ನೋಡಲು, ನಂತರ ಪಾವಗಡದ ಸೌರಶಕ್ತಿ ಪ್ಲಾಂಟ್ ಗೆ ಭೇಟಿ ನೀಡಿ ಅದರ ವಿಚಾರಗಳನ್ನು ತಿಳಿಸಿಕೊಡಲಾಗುವುದು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾದ ರಾಜ್ಯ ಅಧ್ಯಕ್ಷರಾದ ಡಾ. ಸಂದೀಪ್ ಅವರು ಹಾಗೂ ಎಲ್ಲ ಪದಾಧಿಕಾರಿಗಳು ಮತ್ತು ಬೆಂಗಳೂರಿನ ಮೂರು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಜೊತೆಗಿದ್ದು ಊಟದ ಮತ್ತು ವಸತಿ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದ್ದಾರೆ. ಬೆಂಗಳೂರಿನಾದ್ಯಂತ ತಂಡೋಪತಂಡವಾಗಿ ಹಲವು ಪ್ರದೇಶಗಳಿಗೆ ಭೇಟಿಯನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.