ಬ್ಲ್ಯಾಕ್ ಫಂಗಸ್ ಬಾಧೆ ಹೆಚ್ಚಳ : 98 ಮಂದಿಯಲ್ಲಿ ಕಪ್ಪು ಶಿಲೀಂಧ್ರ ರೋಗ ಪತ್ತೆ
ಸರಕಾರದಿಂದ ಉಚಿತ ಚಿಕಿತ್ಸೆ
Team Udayavani, May 18, 2021, 7:30 AM IST
ಬೆಂಗಳೂರು: ರಾಜ್ಯದಲ್ಲಿ ಅಧಿಕೃತವಾಗಿ 98 ಮಂದಿಯಲ್ಲಿ ಬ್ಲಾಕ್ ಫಂಗಸ್ ಸೋಂಕು ಕಾಣಿಸಿ ಕೊಂಡಿದ್ದು, ಕೊರೊನೋತ್ತರ ರೋಗ ಆಗಿರುವುದರಿಂದ ಉಚಿತ ಚಿಕಿತ್ಸೆ ನೀಡಲು ಸರಕಾರ ನಿರ್ಧರಿಸಿದೆ.
ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಬ್ಲ್ಯಾಕ್ ಫಂಗಸ್ ಪೀಡಿತರನ್ನು ದಾಖಲಿಸಿಕೊಂಡು ಉಚಿತ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ಪಡೆಯುವವರ ಮಾಹಿತಿ ಯನ್ನು ಕಡ್ಡಾಯವಾಗಿ ಆರೋಗ್ಯ ಇಲಾ ಖೆಗೆ ನೀಡಬೇಕು. ಅಗತ್ಯ ಔಷಧ ವನ್ನು ಆಸ್ಪತ್ರೆ
ಗಳಿಗೆ ಕಳುಹಿಸ ಲಾಗುತ್ತದೆ ಎಂದು ಸರಕಾರ ಸೂಚಿಸಿದೆ.
ಅತೀ ಸ್ಟಿರಾಯ್ಡ ಬಳಕೆ ಮತ್ತು ಕಲುಷಿತ ವೆಂಟಿಲೇಟರ್ ಇತ್ಯಾದಿ ಉಪ ಕರಣಗಳಿಂದ ಈ ಸೋಂಕು ಬರುವ ಸಾಧ್ಯತೆಯಿದೆ. ಆಮ್ಲಜನಕ ಕಲುಷಿತವಾಗುವ ಮೂಲ ತಿಳಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಸೋಮವಾರ ಆರೋಗ್ಯ ಸೌಧದಲ್ಲಿ ಸಚಿವ ಡಾ| ಸುಧಾಕರ್ ನೇತೃತ್ವದಲ್ಲಿ ತಜ್ಞರ ಸಭೆ ನಡೆಯಿತು. ಸಭೆಯಲ್ಲಿ ಚಿಕಿತ್ಸಾ ಕ್ರಮ, ಮುಂಜಾಗ್ರತೆ ಕ್ರಮ, ಸೋಂಕಿನ ಲಕ್ಷಣಗಳು, ಔಷಧ ದಾಸ್ತಾನು, ಸೋಂಕುಪೀಡಿತರ ನಿರ್ವಹಣೆ ಕುರಿತು ಚರ್ಚಿಸಲಾಗಿದೆ.
6 ಚಿಕಿತ್ಸಾ ಕೇಂದ್ರ
ಕಪ್ಪು ಶಿಲೀಂಧ್ರ ಸೋಂಕಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ರಾಜ್ಯ ಮಟ್ಟದ ಚಿಕಿತ್ಸಾ ಕೇಂದ್ರ. ಕೆಎಂಸಿ ಮಣಿಪಾಲ, ವೆನಾÉಕ್ ಆಸ್ಪತ್ರೆ ಮಂಗಳೂರು, ಎಂಎಂಸಿ ಮೈಸೂರು, ಸಿಮ್ಸ್ ಶಿವ ಮೊಗ್ಗ, ಜಿಮ್ಸ್ ಕಲಬುರಗಿ, ಕಿಮ್ಸ್ ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರಗಳಾಗಿರುತ್ತವೆ.
ಆರೋಗ್ಯವಂತರಿಗೆ ಹಾನಿ ಮಾಡುವುದಿಲ್ಲ
ಕಪ್ಪು ಶಿಲೀಂಧ್ರವು ಒಂದು ಸೋಂಕು. ಎಲ್ಲ ಕಡೆ, ಎಲ್ಲರ ಮೈ ಮೇಲೆಯೂ ಇರುತ್ತದೆ. ಆದರೆ ರೋಗನಿರೋಧಕ ಶಕ್ತಿ ತೀರಾ ಕಡಿಮೆ ಇರುವವರಲ್ಲಿ ಪ್ರತಾಪ ತೋರುತ್ತದೆ ಎಂದು ನೇತ್ರ ತಜ್ಞ ಡಾ| ಭುಜಂಗ ಶೆಟ್ಟಿ ಹೇಳಿದ್ದಾರೆ. ಸಾಮಾನ್ಯ ಸಂದರ್ಭದಲ್ಲಿ ವರ್ಷಕ್ಕೆ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿದ್ದವು. ಕೊರೊನಾ ಸೋಂಕಿನಂತೆ ಆರೋಗ್ಯವಂತ ಸಾಮಾನ್ಯ ಜನರಿಗೆ ತಗಲುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್‌ನಿಂದ ಇಬ್ಬರು ಸಾವು
ವಿಜಯಪುರ/ಹುಮನಾಬಾದ : ವಿಜಯಪುರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಹುಮ್ನಾಬಾದ್ ತಾಲೂಕಿನ ಹಣಕುಣಿ ಗ್ರಾಮದ ಮಹಿಳೆ ಮತ್ತು ಆಳಂದ ತಾಲೂಕಿನ ರೈತರೊಬ್ಬರು ಕಪ್ಪು ಶಿಲೀಂಧ್ರ ರೋಗಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯ 26 ಮಂದಿಯಲ್ಲಿ ಇದು ಕಾಣಿಸಿಕೊಂಡಿದೆ. ಇದೇ ಗ್ರಾಮದ ಪಕ್ಕದ ಸಿಂಧನಕೇರಾ ಗ್ರಾಮದ ವ್ಯಕ್ತಿಯೊಬ್ಬರಿಗೂ ಬ್ಲ್ಯಾಕ್ ಫಂಗಸ್ ಸೋಂಕು ತಗಲಿದ್ದು, ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 26 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗಲಿದೆ. ಬಿಎಲ್‌ಡಿಇ ಬಿ.ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆಯಲ್ಲಿ 15, ಆಯುಷ್ ಆಸ್ಪತ್ರೆಯಲ್ಲಿ 5, ಅಶ್ವಿನಿ ಆಸ್ಪತ್ರೆಯಲ್ಲಿ 1, ಚೌಧರಿ ಆಸ್ಪತ್ರೆಯಲ್ಲಿ 2, ಯಶೋದಾ ಆಸ್ಪತ್ರೆಯಲ್ಲಿ 2 ಮತ್ತು ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 1 ಪ್ರಕರಣ ಪತ್ತೆಯಾಗಿವೆ.
ಕಪ್ಪು ಶಿಲೀಂಧ್ರ ಸೋಂಕು ಲಕ್ಷಣ?
ಕಪ್ಪು ಶಿಲೀಂಧ್ರ ಮೂಗಿನ ಮೂಲಕ ದೇಹ ಸೇರುತ್ತದೆ. ಮೂಗಿನಲ್ಲಿ ಕಪ್ಪು ದ್ರವ, ರಕ್ತ ಬರುತ್ತದೆ. ಅನಂತರ ತಲೆಯ ಭಾಗಕ್ಕೆ ಹೋದರೆ ದವಡೆ ನೋವು, ಹಲ್ಲುಗಳು ಸಡಿಲ ವಾಗುವುದು, ದವಡೆ ನಿಷ್ಕ್ರಿಯವಾಗುತ್ತದೆ. ಕಣ್ಣಿಗೆ ಹೋದರೆ ಕಣ್ಣಿನ ಪಕ್ಕದಲ್ಲಿ ಕಪ್ಪು ಕಲೆ, ಕಣ್ಣಿಗೆ ಹಾನಿಯಾಗುತ್ತದೆ. ಕೊನೆಯದಾಗಿ ಮೆದುಳಿಗೆ ತಲುಪಿದಾಗ ವ್ಯಕ್ತಿ ಸಾವಿಗೀಡಾಗುತ್ತಾನೆ. ಈ ಯಾವುದೇ ಲಕ್ಷಣ ಕೊರೊನಾ ಪೀಡಿತರು, ಗುಣಮುಖರಲ್ಲಿ ಕಂಡುಬಂದರೆ ಶೀಘ್ರವೇ ವೈದ್ಯರನ್ನು ಸಂಪರ್ಕಿಸಬೇಕು.
ಮುಂಜಾಗ್ರತೆ ಕ್ರಮ?
– ಕೊರೊನಾ ಪೀಡಿತರು ಮಧುಮೇಹ ನಿಯಂತ್ರಿಸಬೇಕು.
– ಆಸ್ಪತ್ರೆಗಳಲ್ಲಿ ಅಗತ್ಯವಿದ್ದಲ್ಲಿ ಮಾತ್ರ ಮಿತವಾಗಿ ಸ್ಟಿರಾಯ್ಡ ಬಳಸಬೇಕು.
– ಮನೆ ಆರೈಕೆಯಲ್ಲಿರುವವರು ಸ್ಟಿರಾಯ್ಡ ಬಳಸಬಾರದು.
– ಗುಣವಾದ ಬಳಿಕ ಓಡಾಟ ಬೇಡ.
– ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು.
– ಒಂದು ತಿಂಗಳು ಎಚ್ಚರ ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.