ಬೊಮ್ಮಾಯಿ ಅವರೇ ಯೋಗಿ ತರಹ ಮೈ ಕೊಡವಿ ನಿಲ್ಲಿ: ಮುತಾಲಿಕ್ ಕಿಡಿ
ಮುಸ್ಲಿಮರ ಪರ ನಿಂತು ಕಾಂಗ್ರೆಸ್ ನೆಲಕಚ್ಚಿದೆ, ಮುಂದೆ ಜೆಡಿಎಸ್ ಕೂಡ...
Team Udayavani, Apr 18, 2022, 2:04 PM IST
ಚಿಕ್ಕಮಗಳೂರು: ‘ಹುಬ್ಬಳ್ಳಿ ಯಲ್ಲಿ ಗಲಾಟೆ ಮಾಡಿದವರು ಯಾರೂ ಅಮಾಯಕರಲ್ಲ, ಅವರ ವಿರುದ್ಧ ಗೂಂಡಾ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಿಸಬೇಕು’ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಪೂರ್ವ ಯೋಜಿತ ಕಾರ್ಯಕ್ರಮ. ಬಸವರಾಜ್ ಬೊಮ್ಮಾಯಿ ಅವರೇ ಯೋಗಿ ತರಹ ಮೈ ಕೊಡವಿ ನಿಲ್ಲಿ. ಯಾರು ಅಮಾಯಕರಲ್ಲ ಎಲ್ಲರೂ ಗುಂಡಾಗಳೇ. ಅಲ್ಲಿನ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಹೊಣೆಗಾರರು. ಮುಸ್ಲಿಂ ಸಮಾಜ ಹತಾಶವಾಗಿದ್ದು, ಅಪಹಾಸ್ಯ ಒಳಗಾಗುತ್ತಿದ್ದಾರೆ.ಅಕ್ರೋಶ ಗಲಾಟೆಗೆ ಕಾರಣವಾ ಗುತ್ತಿದೆ. ಮೌಲಿಗಳು ಇಂತರವನ್ನು ಹದ್ದುಬಸ್ತಿನಲ್ಲಿ ಇಡಬೇಕು’ ಎಂದು ಆಗ್ರಹಿಸಿದರು.
‘ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ನವರು ಮುಸ್ಲಿಮರನ್ನ ಯಾವಾಗಲು ಅಮಾಯಕ ರೆಂದು ಹೇಳುತ್ತಾರೆ. ಅಮಾಯಕರು ಎನ್ನುವುದೇ ಒಂದು ಸ್ಟ್ಯಾಂಡ್. ನಾಚಿಕೆ ಆಗುವುದಿಲ್ಲವೇ ನಿಮಗೆ? ಅಮಾಯಕರ ಕುಮಾರಸ್ವಾಮಿ ಅವರೇ, ಹೋಮ ಹವನ ಮಾಡುವಂತಹ ನೀವು ಪೋಲಿಸ್ ಸ್ಟೇಷನ್ ಮೇಲೆ, ದೇವಸ್ಥಾನದ ಮೇಲೆ ಕಲ್ಲು ತೂರಿದವರು ಅಮಾಯಕರೆನ್ನುತ್ತೀರಾ’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟವರಿಂದ ನಾನೇನು ಕಲಿಯಬೇಕಿಲ್ಲ: ಹೆಚ್ ಡಿಕೆ
‘ಮುಸ್ಲಿಮರ ಪರ ನಿಂತು ಕಾಂಗ್ರೆಸ್ ನೆಲಕಚ್ಚಿದೆ, ಕುಮಾರಸ್ವಾಮಿಯವರೇ ಮುಂದಿನ ದಿನಗಳಲ್ಲಿ ಇದೇ ನಿಲುವು ಅನುಸರಿಸಿದರೆ ಜೆಡಿಎಸ್ ಕೂಡ ನೆಲಕಚ್ಚುತ್ತದೆ. ಅಲ್ಲಿರುವ ಅಕ್ರಮ ಮನೆಗಳಿವೆ ಅದನ್ನು ಕಿತ್ತು ಬಿಸಾಕಿ’ ಎಂದು ಸವಾಲೆಸೆದರು.
‘ಬುದ್ದಿ ಜೀವಿಗಳು ಬಾಯಿ ಮುಚ್ಚಿಕೊಂಡಿದ್ದಾರೆ. ಅವರೆಲ್ಲರೂ ಮುಸ್ಲಿಂ ಕ್ರಿಶ್ವಿಯನರ ಎಜೆಂಟರು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
MUST WATCH
ಹೊಸ ಸೇರ್ಪಡೆ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.