ಬಾಕ್ಸಿಂಗ್ ಡೇ ಟೆಸ್ಟ್ : ಭಾರತದ ಅಭ್ಯಾಸ ಆರಂಭ; ರವಿಶಾಸ್ತ್ರಿ, ರಹಾನೆ ಉಸ್ತುವಾರಿ
Team Udayavani, Dec 24, 2020, 12:07 AM IST
ಮೆಲ್ಬರ್ನ್: ಶನಿವಾರದಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯ ತಂಡದ ಆಟಗಾರರು ಬುಧವಾರ ಅಭ್ಯಾಸ ಆರಂಭಿಸಿದರು.
ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಮತ್ತು ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಅವರ ಮಾರ್ಗ ದರ್ಶನದಲ್ಲಿ ಆಟಗಾರರೆಲ್ಲ ಸಾಕಷ್ಟು ಬೆವರು ಸುರಿಸಿದರು. ಮುಖ್ಯವಾಗಿ ಆರಂಭಕಾರ ಶುಭಮನ್ ಗಿಲ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಸುದೀರ್ಘ ಅಭ್ಯಾಸದೊಂದಿಗೆ ಗಮನ ಸೆಳೆದರು. ಹಾಗೆಯೇ ಕೆ.ಎಲ್. ರಾಹುಲ್ ಕೂಡ ಹೆಚ್ಚಿನ ವೇಳೆ ಕಳೆದರು.
“ನಾವೀಗ ಮೆಲ್ಬರ್ನ್ನಲ್ಲಿದ್ದೇವೆ. ಇಲ್ಲಿ ರೆಡ್ ಬಾಲ್ ಟೆಸ್ಟ್ ನಡೆಯಲಿದ್ದು, ಪುನರ್ ಸಂಘಟಿತರಾಗಲು ಇದು ಸಕಾಲ’ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಆರಂಭದಲ್ಲಿ ಕೋಚ್ ರವಿಶಾಸ್ತ್ರಿ ತಂಡದ ಸದಸ್ಯರನ್ನು ಉದ್ದೇಶಿಸಿ ಪ್ರೋತ್ಸಾಹದಾಯಕ ಮಾತುಗಳನ್ನಾ ಡಿದರು. ಬಳಿಕ ಆಟಗಾರರೆಲ್ಲ ನೆಟ್ ಪ್ರ್ಯಾಕ್ಟೀಸ್‌ನಲ್ಲಿ ತೊಡಗಿದರು.
ಬದಲಾವಣೆಯ ಸೂಚನೆ
ಅಡಿಲೇಡ್‌ನಲ್ಲಿ ನಡೆದ ಪಿಂಕ್ ಟೆಸ್ಟ್ ಪಂದ್ಯದಲ್ಲಿ 36 ರನ್ನಿಗೆ ಕುಸಿದು ಹೀನಾಯ ಸೋಲಿಗೆ ತುತ್ತಾದ ಕಾರಣ, ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಬಹಳಷ್ಟು ಬದಲಾವಣೆ ಗೋಚರಿಸುವ ಸಾಧ್ಯತೆ ಇದೆ. ಗಿಲ್, ಜಡೇಜ ಅವರ ಸೇರ್ಪಡೆ ಬಹುತೇಕ ಖಚಿತವಾಗಿದೆ. ಕೀಪರ್ ಸಾಹಾ ಬದಲು ರಿಷಭ್ ಪಂತ್ ಆಡಲೂಬಹುದು. ಅವರು ಸಾಹಾಗಿಂತ ಮೊದಲು ಅಭ್ಯಾಸಕ್ಕೆ ಇಳಿದರು.
ಫಾರ್ಮಲ್ಲಿಲ್ಲದ ಪೃಥ್ವಿ ಶಾ ಬದಲು ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಶಾ ಅವರಿಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೊಡ್ ಪಾಠ ಹೇಳಿಕೊಡುತ್ತಿದ್ದುದು ಕಂಡುಬಂತು. ರವೀಂದ್ರ ಜಡೇಜ ಆಗಮಿಸಿದರೆ ತಂಡಕ್ಕೆ ಸಮರ್ಥ ಆಲ್‌ರೌಂಡರ್ ಓರ್ವ ಲಭಿಸಿದಂತಾಗುತ್ತದೆ.
ಗಾಯಾಳಾಗಿ ಹೊರಬಿದ್ದಿರುವ ಮೊಹಮ್ಮದ್ ಶಮಿ ಸ್ಥಾನಕ್ಕಾಗಿ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ರೇಸ್‌ನಲ್ಲಿದ್ದಾರೆ. ಇವರಿಬ್ಬರೂ ರಹಾನೆಗೆ ಬಹಳ ಹೊತ್ತು ಬೌಲಿಂಗ್ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.