ಶಬ್ದಾತೀತ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ದೇಶೀಯ ನಿರ್ಮಿತ ಐಎನ್‌ಎಸ್ ಮೊರ್ಮಗಾಂವ ನೌಕೆಯಿಂದ ಉಡಾವಣೆ
Team Udayavani, May 15, 2023, 7:21 AM IST
ನವದೆಹಲಿ: ಭಾರತೀಯ ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸಲಿರುವ ಬ್ರಹ್ಮೋಸ್ ಸೂಪರ್ ಸಾನಿಕ್ (ಶಬ್ದಾತೀತ) ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಭಾನುವಾರ ಯಶಸ್ವಿಯಾಗಿದೆ. ಮಾರ್ಗದರ್ಶಿ ಕ್ಷಿಪಣಿಯನ್ನು, ಯುದ್ಧನೌಕೆ ಐಎನ್‌ಎಸ್ ಮೊರ್ಮಗಾಂವ ಮೂಲಕ ಉಡಾವಣೆಗೊಳಿಸಲಾಗಿದೆ. ವಿಶೇಷವೆಂದರೆ ಈ ಯುದ್ಧನೌಕೆ ಹಾಗೂ ಕ್ಷಿಪಣಿ ಎರಡನ್ನೂ ದೇಶಿಯವಾಗಿ ನಿರ್ಮಿಸಲಾಗಿದೆ.
ಆತ್ಮನಿರ್ಭರ ಭಾರತ ಸಂಕಲ್ಪ ಉತ್ತೇಜಿಸುವ ನಿಟ್ಟಿನಲ್ಲಿ ಇತ್ತೀಚೆಗೆಷ್ಟೇ ಮೊರ್ಮಗಾಂವನ್ನು ಅಭಿವೃದ್ಧಿಪಡಿಸಲಾಗಿತ್ತು. ಅದರಂತೆ ಬ್ರಹ್ಮೋಸ್ ಕೂಡ ಭಾರತದ ದೇಶಿಯ ಕ್ಷಿಪಣಿಯಾಗಿದ್ದು, ಇದೀಗ ಈ ಪರೀಕ್ಷೆ ಯಶಸ್ವಿಗೊಳ್ಳುವ ಮೂಲಕ ರಕ್ಷಣಾಕ್ಷೇತ್ರದ ಆತ್ಮನಿರ್ಭರತೆಗೆ ಭಾರತ ಹೊಸ ಮುನ್ನುಡಿ ಬರೆದಂತಾಗಿದೆ. ಜತೆಗೆ ನಿಖರವಾದ ಗುರಿ ಛೇದಿಸುವ ಮೂಲಕ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದ್ದು, ಇದು ಭಾರತದ ನೌಕಾಪಡೆ ಸಾಮರ್ಥ್ಯವನ್ನು ಪ್ರತಿಬಿಂಬಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಯುದ್ಧನೌಕೆ, ಯುದ್ಧ ವಿಮಾನ ಹಾಗೂ ಜಲಾಂತರ್ಗಾಮಿ ನೌಕೆಗಳಿಂದಲೂ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆಗೊಳಿಸಬಹುದಾಗಿದ್ದು, ಭಾರತ ಮತ್ತು ರಷ್ಯಾ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್ ಲಿಮಿಟೆಡ್ ಈ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ. ಬ್ರಹ್ಮೋಸ್ 2.8 ಮ್ಯಾಕ್ ಅಥವಾ ಶಬ್ದದ ವೇಗಕ್ಕಿಂತಲೂ 3 ಪಟ್ಟು ಹೆಚ್ಚಿನ ವೇಗದಲ್ಲಿ ಕ್ರಮಿಸಬಲ್ಲ ಕ್ಷಿಪಣಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.