ಮಿದುಳು ಕ್ಯಾನ್ಸರ್ ಚಿಕಿತ್ಸೆ ಭಾರತೀಯ ವೈದ್ಯೆತಂಡ ಕೊಡುಗೆ
Team Udayavani, May 20, 2023, 7:26 AM IST
ವಾಷಿಂಗ್ಟನ್: ಮಿದುಳಿನ ಕ್ಯಾನ್ಸರ್‌ಗೆ ಗುರಿಯಾಗಿರುವ ರೋಗಿಗಳಿಗೆ ನೀಡುವ ಚಿಕಿತ್ಸೆಗೆ ಬಹುದೊಡ್ಡ ಸಹಾಯ ಒದಗಿಸುವಂಥ ಆವಿಷ್ಕಾರವನ್ನು ಭಾರತ ಮೂಲದ ವೈದ್ಯೆ ನೇತೃತ್ವದ ಅಮೆರಿಕ ವೈದ್ಯರ ತಂಡ ಪತ್ತೆಹಚ್ಚಿದ್ದು, ಈ ಆವಿಷ್ಕಾರ ರೋಗಿಗಳ ಜೀವ ಉಳಿಸುವಲ್ಲಿ ಸಹಾಯವಾಗಲಿದೆ ಎಂದು “ನೇಚರ್” ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ವರದಿಗಳ ಪ್ರಕಾರ ಭಾರತದ ಕೇರಳ ಮೂಲದ ವೈದ್ಯೆಯಾದ ಸರಿತಾ ಕೃಷ್ಣಾ ಅವರ ನೇತೃತ್ವದಲ್ಲಿ ಸ್ಯಾನ್‌ಫ್ಯಾನ್ಸಿಸ್ಕೋ ಮೆಡಿಕಲ್ ಸೆಂಟರ್ ಹಾಗೂ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಸಂಶೋಧನೆಯೊಂದನ್ನು ಕೈಗೊಂಡಿದ್ದಾರೆ. ಆ ಪ್ರಕಾರ ಕ್ಯಾನ್ಸರ್‌ಗೆ ಗುರಿಯಾಗಿರುವ ಮಿದುಳಿನ ಜೀವಕೋಶಗಳು ಇತರೆ ಆರೋಗ್ಯಕರ ಜೀವಕೋಶಗಳೊಂದಿಗೆ ಸಂಪರ್ಕಸಾಧಿಸಬಲ್ಲವು. ಈ ರೀತಿ ಸಂಪರ್ಕ ಸಾಧಿಸಿದರೆ ರೋಗಿಯ ಮಿದುಳಿನ ಕ್ಯಾನ್ಸರ್ ಉಲ್ಬಣಗೊಳ್ಳುವ ಜತೆಗೆ ಆತನ ಅರಿವಿನ ಶಕ್ತಿ ವೇಗವಾಗಿ ನಷ್ಟವಾಗುವುದಲ್ಲದೇ ಬೇಗ ಸಾವಿನ ಅಂಚಿಗೆ ನೂಕಬಲ್ಲದಂತೆ.
ಆದರೆ, ಈ ಕ್ಯಾನ್ಸರ್‌ಪೀಡಿತ ಹಾಗೂ ಆರೋಗ್ಯಕರ ಜೀವಕೋಶಗಳ ಸಂಪರ್ಕವನ್ನು ಸಾಮಾನ್ಯವಾಗಿ ಬಳಕೆಮಾಡುವ ಆ್ಯಂಟಿ-ಸೀಜರ್ ಡ್ರಗ್ ಗುಣಪಡಿಸಬಲ್ಲದು ಎಂದು ಸಂಶೋಧಕರ ತಂಡ ಪತ್ತೆ ಹಚ್ಚಿದೆ. ಈ ಚಿಕಿತ್ಸೆ ವಿಧಾನವು ಮಿದುಳಿನ ಕ್ಯಾನ್ಸರ್‌ನಲ್ಲಿ ಅತೀ ಅಪಾಯಕಾರಿ ಎನ್ನಲಾಗುವ ಗ್ಲಿಯೋಬ್ಲಾಸ್ಟೋಮಾ ರೋಗಕ್ಕೆ ತುತ್ತಾದ ರೋಗಿಗಳ ಜೀವಿತಾವಧಿ ವೃದ್ಧಿಸಲು ಸಹಾಯವಾಗಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.