ಕಣ್ಣಿಗೆ ಕಂಡರೂ ಕಿವಿಗೆ ಕೇಳಿಸುತ್ತಿಲ್ಲ! ಆಲೂರು- ಹರ್ಕೂರು: BSNL ಬಳಕೆದಾರರು ಹೈರಾಣು
Team Udayavani, Mar 13, 2021, 6:00 AM IST
ಆಲೂರು : ನೆಟ್ ವರ್ಕ್ ತೋರಿಸುತ್ತಿದೆ. ಆದರೆ ಕರೆ ಮಾಡಲು ಹೋದರೆ ಕರೆ ಹೋಗಲ್ಲ. ಆಚೆ ಕಡೆಯಿಂದ ಕರೆ ಮಾಡಿದಾಗಲೂ ನಾಟ್ ರೀಚೆಬಲ್ ಅಥವಾ ಸ್ವಿಚ್ ಆಫ್ ಅಂತ ಬರುತ್ತಿದೆ.
ಇನ್ನು ಅಂತರ್ಜಾಲ ಬಳಸಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಿತ್ರ ಡೌನ್‌ಲೋಡ್ ಮಾಡಬೇಕಾದರೆ 1 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಇದು ಆಲೂರು, ಹರ್ಕೂರು ಭಾಗದ ಸಾವಿರಾರು ಮಂದಿ ಬಿಎಸ್ಸೆನ್ನೆಲ್ ಮೊಬೈಲ್ ಬಳಕೆದಾರರು ಕಳೆದ 10-12 ದಿನಗಳಿಂದ ಅನುಭವಿಸುತ್ತಿರುವ ಹೊಸ ಸಮಸ್ಯೆ. ಈ ಬಗ್ಗೆ ಸಂಬಂಧಪಟ್ಟ ಬಿಎಸ್ಸೆನ್ನೆಲ್ ಸಿಬಂದಿಯಲ್ಲಿ ಕೇಳಿದರೆ ನಮಗೂ ಏನು ಸಮಸ್ಯೆ ಎಂಬು ದು ಗೊತ್ತಿಲ್ಲ. ಪರಿಶೀಲಿಸಿ ಹೇಳುತ್ತೇವೆ ಎಂದು ಸಮಜಾಯಿಸಿ ಕೊಡುತ್ತಾರಷ್ಟೇ.
ಎಲ್ಲೆಲ್ಲ ಸಮಸ್ಯೆ?
ಪ್ರಮುಖವಾಗಿ ಆಲೂರು ಸುತ್ತಮುತ್ತಲಿ ನಲ್ಲಿ ಬಿಎಸ್ಸೆನ್ನೆಲ್ ಬಳಕೆದಾರರು ನೆಟ್ ವರ್ಕ್ ಸಮಸ್ಯೆಯಿಂದಾಗಿ ಭಾರೀ ತೊಂದರೆ ಎದುರಿಸುತ್ತಿದ್ದಾರೆ. ಇದಲ್ಲದೆ ಹರ್ಕೂರು, ಮುತ್ತಬೇರು, ಹೇರೂರಿನ ಕೆಲವು ಭಾಗದವರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ನೆಟ್ ವರ್ಕ್ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಈ ಭಾಗದಲ್ಲಿ ಬೇರೆ ಬೇರೆ ಕಂಪೆನಿಗಳ ಸಿಮ್ ಬಳಕೆದಾರರಿದ್ದರೂ, ಗ್ರಾಮೀಣ ಭಾಗವಾಗಿರುವುದರಿಂದ ಬಿಎಸ್ಸೆನ್ನೆಲ್ ಬಳಕೆದಾರರೇ ಹೆಚ್ಚು ಮಂದಿಯಿದ್ದಾರೆ.
ಹಿಂದೆ ಕರೆಂಟ್ ಇಲ್ಲದಾಗ ಮಾತ್ರ ನೆಟ್ ವರ್ಕ್ ಸಮಸ್ಯೆಯಿತ್ತು. ಆದರೆ ಈಗ ಕರೆಂಟ್ ಇದ್ದರೂ ಒಂದೇ, ಇಲ್ಲದಿದ್ದರೂ ಈ ನೆಟ್ ವರ್ಕ್ ಸಮಸ್ಯೆಯಿದೆ. ಈಗ ಇದರ ನಿರ್ವಹಣೆಯನ್ನು ಬೇರೆಯವರಿಗೆ ವಹಿಸಿಕೊಡಲಾಗಿದ್ದು, ಅದರ ಬಳಿಕ ಕೆಲವು ದಿನಗಳಿಂದ ನೆಟ್ ವರ್ಕ್ ತೋರಿಸುತ್ತಿದ್ದರೂ, ಕರೆ ಹೋಗುತ್ತಿಲ್ಲ ಎನ್ನುವುದಾಗಿ ಆ ಭಾಗದ ಜನರು ದೂರಿದ್ದಾರೆ.
ದೂರು ಕೊಟ್ಟಿದ್ದೇವೆ
ನೆಟ್ ವರ್ಕ್ ತೋರಿಸುತ್ತಿದೆ. ಆದರೆ ಕರೆ ಮಾಡಿದಾಗ ಕರೆ ಹೋಗಲ್ಲ. ಬೇರೆಯವರು ನಮಗೆ ಕರೆ ಮಾಡಿದರೂ ಸ್ವಿಚ್ ಆಫ್ ಅಥವಾ ನಾಟ್ ರೀಚೆಬಲ್ ಬರುತ್ತಿದೆ. ನಾವು ಈಗ ಕರೆ ಮಾಡಬೇಕಾದರೆ ಬೇರೆ ಕಡೆಗೆ ಹೋಗಿ ಮಾಡಬೇಕಿದೆ. ಈ ಬಗ್ಗೆ ದೂರು ಕೊಟ್ಟಿದ್ದೇವೆ. ನಾವು ವರ್ಷ, 6 ತಿಂಗಳುಗಳದ್ದು ರೀಚಾರ್ಜ್ ಮಾಡಿಸಿದ್ದೇವೆ. ಈಗ ಬೇರೆ ಸಿಮ್‌ಗೆ ಬದಲಾಯಿಸುವುದಾದರೂ ಹೇಗೆ?
– ಪ್ರಶಾಂತ್ ಕುಲಾಲ್ ಆಲೂರು, ಬಿಎಸ್ಸೆನ್ನೆಲ್ ಬಳಕೆದಾರರು
ಶೀಘ್ರ ಪರಿಹಾರ
ಆಲೂರು ಹಾಗೂ ಗುಡ್ಡೆಯಂಗಡಿಯಲ್ಲಿ ಬಿಎಸ್ಸೆನ್ನೆಲ್ ನೆಟ್ ವರ್ಕ್ ಸಮಸ್ಯೆ ಬಗ್ಗೆ ದೂರು ಬಂದಿದೆ. ಒಎಫ್‌ಸಿಯಲ್ಲಿ ಸಮಸ್ಯೆ ಇರುವುದರಿಂದ ಕರೆ ಕಡಿತ ಆಗುತ್ತಿದೆ. ಆದಷ್ಟು ಶೀಘ್ರ ಸರಿಪಡಿಸಲಾಗುವುದು.
– ರಾಮಚಂದ್ರ, ಬಿಎಸ್ಸೆನ್ನೆಲ್ ಎಜಿಎಂ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.