BSP MP ಅಫ್ಜಲ್ ಗೆ 4 ವರ್ಷ ಜೈಲು: ಸದಸ್ಯತ್ವ ಕಳೆದುಕೊಂಡ ಮತ್ತೊಬ್ಬ ಸಂಸದ
ಬಿಜೆಪಿ ಶಾಸಕನ ಕೊಲೆ ಕೇಸ್ ;ಸಹೋದರ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು
Team Udayavani, Apr 29, 2023, 9:40 PM IST
ಘಾಜಿಪುರ: ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ರನ್ನು 2005ರಲ್ಲಿ ಅಪಹರಿಸಿ ಹತ್ಯೆ ಗೈದ ಕೇಸ್ ಗೆ ಸಂಬಂಧಿಸಿ ಉತ್ತರಪ್ರದೇಶದ ಘಾಜಿಪುರ ಕ್ಷೇತ್ರದ ಬಿಎಸ್‌ಪಿ ಸಂಸದ ಅಫ್ಜಲ್ ಅನ್ಸಾರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವನ್ನೂ ವಿಧಿಸಿ ಸಂಸದ-ಶಾಸಕ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿ ಸಹೋದರ ದರೋಡೆಕೋರ- ರಾಜಕಾರಣಿ ಮುಖ್ತಾರ್ ಅನ್ಸಾರಿ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದು,10 ವರ್ಷ ಜೈಲು ಶಿಕ್ಷೆ ವಿಧಿಸಿ 5 ಲಕ್ಷ ರೂ ದಂಡವನ್ನೂ ಹಾಕಿದೆ. ತೀರ್ಪಿನ ಹಿನ್ನೆಲೆಯಲ್ಲಿ ಘಾಜಿಪುರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿ, ಮುಖ್ತಾರ್ ಅನ್ಸಾರಿ ಮತ್ತು ಸೋದರ ಮಾವ ಎಜಾಜುಲ್ ಹಕ್ ವಿರುದ್ಧ 2007 ರಲ್ಲಿ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಎಜಾಜುಲ್ ಹಕ್ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 1 ರಂದು ಪೂರ್ಣಗೊಳಿಸಲಾಗಿತ್ತು. ಈ ಮೊದಲು ಈ ಪ್ರಕರಣದ ತೀರ್ಪು ಎ 15 ರಂದು ಬರಬೇಕಿತ್ತು, ಆದರೆ ನಂತರ ದಿನಾಂಕವನ್ನು 29 ಕ್ಕೆ ವಿಸ್ತರಿಸಲಾಗಿತ್ತು.
ನ್ಯಾಯಾಲಯದ ತೀರ್ಪಿನಿಂದಾಗಿ ಸಂಸದನಾಗಿರುವ ಅಫ್ಜಲ್ ಅನ್ಸಾರಿ ಲೋಕಸಭೆಯ ಸದಸ್ಯತ್ವ ಕಳೆದುಕೊಳ್ಳುವುದು ಖಚಿತವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡ್, ಯುಪಿಯ ರಾಮಪುರ ಶಾಸಕ ಅಜಮ್‌ಖಾನ್ , ಆತನ ಪುತ್ರ ಅಬ್ದುಲ್ಲಾ ಆಜಂ, ಬಿಜೆಪಿಯ ವಿಕ್ರಮ್ ಸೈನಿ ಖಟೌಲಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸಂಸತ್ ಮತ್ತು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.