4 ತಿಂಗಳು ಕಟ್ಟೆಚ್ಚರ; ಬಿಜೆಪಿ ಪ್ರಕೋಷ್ಠಗಳ ಮೊದಲ ಸಮಾವೇಶ “ಶಕ್ತಿ ಸಂಗಮ’
140 ಸ್ಥಾನಗಳ ಗೆಲುವಿಗೆ ಸಂಕಲ್ಪ ತೊಡಲು ಬಿಎಸ್‌ವೈ ಕರೆ
Team Udayavani, Dec 19, 2022, 7:00 AM IST
ಬೆಂಗಳೂರು: ರಾಜಕಾರಣ ದಲ್ಲಿ ಎಷ್ಟು ಜಾಗೃತವಾಗಿದ್ದರೂ ಕಡಿಮೆಯೇ. ಇನ್ನು ಕೇವಲ ನಾಲ್ಕು ತಿಂಗಳು ಮೈಮ ರೆಯಬೇಡಿ. ಅನಂತರದ ಐದು ವರ್ಷ ನೀವು ಮತ್ತು ರಾಜ್ಯದ ಜನತೆ ನೆಮ್ಮದಿಯಾ ಗಿರಬಹುದು. ಅದಕ್ಕಾಗಿ ಬೇರೆ ಪಕ್ಷಗಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು. ಅದಕ್ಕೆ ಪ್ರತಿತಂತ್ರ ಹೆಣೆಯಬೇಕು. 140 ಸ್ಥಾನಗಳ ಗೆಲುವಿಗೆ ಸಂಕಲ್ಪ ತೊಡಬೇಕು.
– ಇದು ನಗರದ ಅರಮನೆ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬಿಜೆಪಿಯ ಸುಮಾರು 24 ವಿವಿಧ ಪ್ರಕೋಷ್ಠಗಳ ರಾಜ್ಯಮಟ್ಟದ ಮೊದಲ ಸಮಾವೇಶ “ಶಕ್ತಿ ಸಂಗಮ’ದಲ್ಲಿ ಕಾರ್ಯ ಕರ್ತರಿಗೆ ನಾಯಕರ ಕಿವಿಮಾತು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆದರೂ ಹಣಬಲ, ತೋಳ್ಬಲ, ಜಾತಿಯ ವಿಷ ಬೀಜ ಬಿತ್ತಿ ಅಧಿಕಾರ ಹಿಡಿಯುವ ಭ್ರಮೆಯಲ್ಲಿ ಆ ಪಕ್ಷ ಇದೆ. ಈ ಮಧ್ಯೆ ತಾವೇ ಸಿಎಂ ಎಂಬ ಕನಸು ಬೇರೆ ಕಾಣುತ್ತಿದ್ದಾರೆ. ಇದೊಂದು ಬಾರಿ ಸೋಲಿಸಿದರೆ ಇಡೀ ದೇಶದಲ್ಲಿ ಅದು ಧೂಳೀಪಟ ಆಗಲಿದೆ. ಇದಕ್ಕಾಗಿ ಕಾರ್ಯ ಕರ್ತರು ಶ್ರಮಿಸಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.
ಎಲ್ಲೆಡೆ ಬಿಜೆಪಿ ಗಾಳಿ ಬೀಸುತ್ತಿದೆ. ಹಾಗೆಂದು ಮೈಮರೆಯುವುದು ಬೇಡ. ಬೇರೆ ಪಕ್ಷಗಳ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು. ಪ್ರತೀ ಊರಿನಲ್ಲಿ ಮಹಿಳೆಯರು, ಯುವಕರ ಗುಂಪುಗಳನ್ನು ರಚಿಸಿ ಕ್ರಿಯಾಶೀಲ ಗೊಳಿಸಬೇಕು ಎಂದರು.
ಕಣ್ಣೀರಿನ
ಮೂಲಕ ಚುನಾವಣೆ
ಇನ್ನು 100 ದಿನಗಳಲ್ಲಿ ಚುನಾ ವಣೆ ದಿನಾಂಕ ಪ್ರಕಟಗೊಳ್ಳಲಿದೆ. ಒಂದೇ ಬಾರಿ ಪಂಚರತ್ನ ಬಂದಿದೆ. ಪ್ರತೀ ಬಾರಿ ಇದು ಕೊನೆಯ ಚುನಾ ವಣೆ ಎಂಬ ಘೋಷಣೆ ಆಗಿದೆ. ವೇದಿಕೆಯಲ್ಲಿ ಕಣ್ಣೀರಿನ ಮೂಲಕ ಚುನಾವಣೆಗೆ ಹೋಗುತ್ತಿದ್ದಾರೆ; ಬೀದಿಗೆ ಬಂದಿದ್ದಾರೆ. ಅಪ್ಪನಿಂದ ಮಗನಿಗೆ, ತಾಯಿಯಿಂದ ಮಗನಿಗೆ ತ್ಯಾಗ ಮಾಡುತ್ತಾರೆ. ಚುನಾವಣೆ ಕಾಲ ಆರಂಭವಾಗಿದೆ ಎಂದು ಬಿಎಸ್‌ವೈ ಅನ್ಯ ಪಕ್ಷಗಳ ನಾಯಕರ ಹೆಸರೆತ್ತದೆಯೇ ಕಾರ್ಯಕರ್ತರನ್ನು ಎಚ್ಚರಿಸಿದರು. ಟಿಪ್ಪು ಹೆಸರು ನೆನಪಾ ಗುವ ಇನ್ನೊಂದು ಪಕ್ಷ ಇದೆ. ಇನ್ನು ಕೆಲವರಿಗೆ ಭಯೋತ್ಪಾದಕ ಚಟು ವಟಿಕೆಯ ವಿಚಾರದಲ್ಲೂ ಬುದ್ಧಿ ಸರಿ ಇಲ್ಲದ ಪ್ರಶ್ನೆ ಏಳುತ್ತದೆ. ಯಾಕೆಂದರೆ ಇದು ಚುನಾವಣೆ ಆರಂಭದ ಕಾಲ ಎಂದು ವಿಶ್ಲೇಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.