ಪೊಲೀಸ್‌ ಆಗುವಾಸೆ ಕಮರಿತು; ನಿರ್ವಾಹಕ ವೃತ್ತಿ ನೆಮ್ಮದಿ ನೀಡಿತು


Team Udayavani, Apr 12, 2021, 5:00 AM IST

ಪೊಲೀಸ್‌ ಆಗುವಾಸೆ ಕಮರಿತು; ನಿರ್ವಾಹಕ ವೃತ್ತಿ ನೆಮ್ಮದಿ ನೀಡಿತು

ಸ್ಟೇಟ್‌ಬ್ಯಾಂಕ್: ಖಾಸಗಿ ಬಸ್‌ಗಳಲ್ಲಿ ಅಪರೂಪವೆಂಬಂತೆ ಮಹಿಳೆಯೋರ್ವರು ಕಂಡಕ್ಟರ್‌ ವೃತ್ತಿ ಮಾಡುತ್ತಾ ಗಮನ ಸೆಳೆದಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಯರಗಟ್ಟಿಯವರಾದ ಅನಿತಾ ಅವರು ಮಂಗಳೂರು-ಕಾರ್ಕಳ ನಡುವೆ ಸಂಚರಿ ಸುವ ಖಾಸಗಿ ಬಸ್‌ನಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ಸುಮಾರು 7ರಿಂದ ಸಂಜೆ ಸುಮಾರು 7 ಗಂಟೆಯವರೆಗೆ ಕೆಲಸ ಮಾಡುವ ಅನಿತಾ ಅವರು ಈ ವೃತ್ತಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

“ಪೊಲೀಸ್‌ ಆಗುವ ಆಸೆ ಇತ್ತು’
ಸಣ್ಣವಳಿರುವಾಗಲೇ ಕುಟುಂಬಿಕರು ಮದುವೆ ಮಾಡಿಸಿದ್ದರು. ಹಾಗಾಗಿ ವಿದ್ಯಾ ಭ್ಯಾಸ ಮೊಟಕುಗೊಳಿಸಬೇಕಾಯಿತು. ತಾಯಿಯಾದ ಮೇಲೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿದೆ. ದ್ವಿತೀಯ ಪಿಯುಸಿ ಪೂರ್ಣಗೊಳಿಸಿದೆ. ಪೊಲೀಸ್‌ ಆಗಬೇಕೆಂಬ ಆಸೆ ಇತ್ತು. ಆದರೆ ಸಿಜೇರಿಯನ್‌ ಆದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಮಗಳಿಗೆ ಮೂರು ವರ್ಷ ಆಗಿರುವಾಗ ಪತಿ ಅಪಘಾತದಲ್ಲಿ ಮೃತಪಟ್ಟರು. ನಾನು ಚಿಕ್ಕವಳಿರುವಾಗಲೇ ತಂದೆ ತೀರಿ ಕೊಂಡಿದ್ದರು. ಉದ್ಯೋಗ ಅರಸುತ್ತಾ ಕುಂದಾಪುರಕ್ಕೆ ಬಂದಿದ್ದೆ. ಅಲ್ಲಿನ ಖಾಸಗಿ ಬಸ್‌ ಒಂದರ ಮಾಲಕರು ಕುಂದಾಪುರ- ಕೊಲ್ಲೂರು, ಉಡುಪಿ-ಕೊಲ್ಲೂರು ಮತ್ತು ಉಡುಪಿ-ಮಂಗಳೂರು ಮಾರ್ಗದಲ್ಲಿ ನಿರ್ವಾಹಕಿಯ ಕೆಲಸ ನೀಡಿದರು. ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಊರಿಗೆ ವಾಪಸಾದೆ. ಲಾಕ್‌ಡೌನ್‌ ಮುಗಿದ ಅನಂತರ ಮಂಗಳೂರಿಗೆ ಬಂದು ಮತ್ತೆ ಬಸ್‌ ಕಂಡಕ್ಟರ್‌ ಆದೆ. ಸ್ವಲ್ಪ ಸಮಯ ಸೆಕ್ಯೂರಿಟಿ ಗಾರ್ಡ್‌ ಆಗಿಯೂ ಕೆಲಸ ಮಾಡಿದೆ. ಪ್ರಸ್ತುತ ಮಂಗಳೂರು-ಕಾರ್ಕಳ ನಡುವೆ ಸಂಚರಿಸುವ ಖಾಸಗಿ ಬಸ್‌ ಒಂದರಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಗಳು ಮೂರನೇ ತರಗತಿಯಲ್ಲಿದ್ದಾಳೆ. ಸಹೋದರ ಪಿಯುಸಿ ಮುಗಿಸಿದ್ದಾನೆ. ಇತ್ತೀಚೆಗೆ ನನ್ನ ಅಮ್ಮ ಕೂಡ ಮೃತಪಟ್ಟಿದ್ದಾಳೆ. ನಮ್ಮನ್ನು ದೊಡ್ಡಮ್ಮ, ದೊಡ್ಡಪ್ಪ ನೋಡಿಕೊಳ್ಳುತ್ತಿದ್ದಾರೆ. ನನಗೀಗ 27 ವರ್ಷ ವಯಸ್ಸು. ನನ್ನ ಮಗಳನ್ನಾದರೂ ಪೊಲೀಸ್‌ ಮಾಡಬೇಕೆಂಬ ಆಸೆ ಇದೆ ಎನ್ನುತ್ತಾರೆ ಅನಿತಾ.

ಕರಾವಳಿಯಲ್ಲಿ ಪ್ರೋತ್ಸಾಹ
ಒಂದೇ ಬಸ್‌ನಲ್ಲಿ ನಾಲ್ಕು ವರ್ಷಗಳ ಕಾಲ ಸಹಿತ ಒಟ್ಟು 6 ವರ್ಷಗಳಿಂದ ಬಸ್‌ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ಮೂರು ತಿಂಗಳುಗಳಿಂದ ಮಂಗಳೂರು- ಕಾರ್ಕಳ ಸಂಚರಿಸುವ ಖಾಸಗಿ ಬಸ್‌ನಲ್ಲಿ ವೃತ್ತಿ ನಿರ್ವಹಿಸುತ್ತಿದ್ದೇನೆ. ಉಡುಪಿ, ಕುಂದಾಪುರ, ಮಂಗಳೂರು, ಕಾರ್ಕಳ ಭಾಗದಲ್ಲಿ ನನಗೆ ಹಲವಾರು ಮಂದಿ ಪ್ರೋತ್ಸಾಹದ ಮಾತುಗನ್ನಾಡಿ ಆತ್ಮವಿಶ್ವಾಸ ಮೂಡಿಸಿದ್ದಾರೆ ಎನ್ನುವ ಬಗ್ಗೆ ಅನಿತಾ ಅಭಿಮಾನದಿಂದ ಹೇಳುತ್ತಾರೆ.

ಕೆಲಸದಲ್ಲೇ ನೋವು ಮರೆಯುವೆ
ಬಸ್‌ ನಿರ್ವಾಹಕಿ ಕೆಲಸ ನನಗೆ ಸಮಾಧಾನ ತಂದಿದೆ. ಪ್ರಯಾಣಿಕರನ್ನು ನೋಡುತ್ತಾ ಅವರ ನಡುವೆ ಕೆಲಸ ಮಾಡುತ್ತಾ ನನ್ನ ಬದುಕಿನ ನೋವನ್ನು ಮರೆಯುತ್ತೇನೆ. ನನ್ನ ಕುಟುಂಬಕ್ಕೆ ನನ್ನಿಂದಾಗುವ ಆರ್ಥಿಕ ಬೆಂಬಲ ನೀಡುತ್ತೇನೆ. ಮಹಿಳೆಯರು ಯಾವುದೇ ಕೆಲಸವನ್ನು ಮಾಡಲು ಸಮರ್ಥರು. ಬಸ್‌ ನಿರ್ವಾಹಕರಾಗಿಯೂ ಕೆಲಸ ಮಾಡಬಹುದು. ಈ ಕೆಲಸ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

-ಅನಿತಾ, ಖಾಸಗಿ ಬಸ್‌ ನಿರ್ವಾಹಕಿ

ಟಾಪ್ ನ್ಯೂಸ್

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ

America-Congress

House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

Bajpe: ಮರವೂರು ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

Bajpe: ಮರವೂರು ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.