ಕಲ್ಕತ್ತ ಹೈಕೋರ್ಟ್-ಸುಪ್ರೀಂ ಜಟಾಪಟಿ
Team Udayavani, Apr 29, 2023, 7:47 AM IST
ಕೋಲ್ಕತಾ: ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಮೂರ್ತಿ ಒಬ್ಬರನ್ನು ವಿಚಾರಣೆಯಿಂದ ಸುಪ್ರೀಂ ಕೋರ್ಟ್ ತೆಗೆದುಹಾಕಿದೆ. ಅದರ ವಿರುದ್ಧ ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಗರಂ ಆಗಿದ್ದಾರೆ. ಅಲ್ಲದೇ ತಮ್ಮನ್ನು ತೆಗದುಹಾಕಲು ಕಾರಣವಾದ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ನ ಹಿರಿಯ ಅಧಿಕಾರಿಗಳಿಗೇ ಆದೇಶ ನೀಡಿದ್ದಾರೆ.
ಇದಕ್ಕೆ ಸುಪ್ರೀಂ ತಡೆ ನೀಡಿದೆ! ಪಶ್ಚಿಮ ಬಂಗಾಲದ ಆಡಳಿತಾ ರೂಢ ಪಕ್ಷದ ಕೆಲವು ರಾಜಕಾರಣಿಗಳನ್ನೂ ಒಳಗೊಂಡಿರುವ ಉನ್ನತ ಶಿಕ್ಷಕರ ನೇಮಕಾತಿ ಹಗರಣದ ಪ್ರಕರಣವನ್ನು ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ವಿಚಾರಣೆ ನಡೆಸುತ್ತಿದ್ದರು. ಆದರೆ ಸುಪ್ರೀಂ ಕೋರ್ಟ್ ಅವರನ್ನು ವಿಚಾರಣೆಯಿಂದ ತೆಗೆದುಹಾಕಿದೆ. ವಿಚಾರಣೆ ಬಾಕಿ ಇರುವಾಗಲೇ ಆ ವಿಷಯದ ಕುರಿತು ಅಭಿಜಿತ್ ಟಿವಿ ಸಂದರ್ಶನದಲ್ಲಿ ಮಾತನಾಡಿರುವುದರಿಂದ ಇನ್ನುಮುಂದೆ ಅವರು ವಿಚಾರಣೆ ನಡೆಸುವಂತಿಲ್ಲ ಎಂದು ಸುಪ್ರೀಂ ತಿಳಿಸಿದೆ. ಸುಪ್ರೀಂ ಆದೇಶಕ್ಕೆ ಬದಲಾಗಿ, ಅಭಿಜಿತ್ ಶುಕ್ರವಾರ ಸಂಜೆ ಸುಪ್ರೀಂ ಕೋರ್ಟ್‌ನ ಹಿರಿಯ ಅಧಿಕಾರಿಗಳಿಗೆ ತಮ್ಮ ಭಾಷಣದ ಅನುವಾದದ ಪ್ರತಿ ಹಾಗೂ ತಮ್ಮನ್ನು ಪ್ರಕರಣದಿಂದ ಹೊರಗಿಡಲು ನೀಡಿರುವ ಅಸಲಿ ದಾಖಲೆಗಳನ್ನು ತಮ್ಮ ಮುಂದಿಡುವಂತೆ ಆದೇಶಿಸಿದ್ದಾರೆ. ಸುಪ್ರೀಂ ಕೋರ್ಟ್ ಶುಕ್ರವಾರ ಸಂಜೆ ವಿಶೇಷ ವಿಚಾರಣೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯವರ ಆದೇಶಕ್ಕೆ ತಡೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.