ಕೋವಿಡ್ ಲಸಿಕೆ ಸಿಕ್ಕ ನಂತ್ರ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?
ಕೆನಡಾ ವ್ಯಕ್ತಿಯ ಸಂಭ್ರಮ
Team Udayavani, Mar 10, 2021, 7:32 PM IST
ಕೆನಡಾ : ಕೋವಿಡ್ ವೈರಸ್ ಜನರನ್ನು ಇನ್ನಿಲ್ಲದಂತೆ ಕಾಡಿದೆ. ಯಾವ ರೀತಿ ಬೇಸರ ತರಿಸಿತ್ತು ಅಂದ್ರೆ, ಜನರು ಒಂದು ಕಾಲದಲ್ಲಿ ನಾವು ಮನೆ ಬಿಟ್ಟು ಹೊರಗಡೆ ಯವಾಗಪ್ಪಾ ಹೋಗ್ತೇವೆ ಎಂಬಷ್ಟರ ಮಟ್ಟಿಗೆ ಕಾಡಿಸಿತ್ತು. ಜನರು ಪಾರ್ಕ್ ಗೆ ಹೋಗುವಂತಿರಲಿಲ್ಲ, ಮದುವೆ ಸಮಾರಂಭಗಳಲ್ಲಿ ಭಾಗಿಯಾಗುವಂತಿರಲಿಲ್ಲ, ಸ್ನೇಹಿತರ ಕೂಡಿ ಮಾತನಾಡುವಂತಿರಲಿಲ್ಲಿ. ಯಾವಗಲೂ ಮನೆಯಲ್ಲೇ ಇರುವಂತೆ ಮಾಡಿತ್ತು ಈ ಕೋವಿಡ್ ವೈರಸ್. ಸದ್ಯ ಸಮಾಧಾನಕರ ವಿಚಾರ ಅಂದ್ರೆ ವೈರಸ್ ಗೆ ಲಸಿಕೆ ಸಿಕ್ಕಿದ್ದು, ಮನೆಯಿಂದ ಹೊರಗಡೆ ಬಂದು ಮೊದಲಿನಂತೆ ಎಂಜಾಯ್ ಮಾಡುವ ಕಾಲ ಒದಗಿದೆ.
ಇದೇ ಖುಷಿಯನ್ನ ಕೆನಡಾ ವ್ಯಕ್ತಿಯೊಬ್ಬ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಅವರು ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Yesterday evening I received my Covid-19 vaccine. Then I went to a frozen lake to dance Bhangra on it for joy, hope and positivity, which I’m forwarding across Canada and beyond for everyone’s health and wellbeing. pic.twitter.com/8BS0N7zVZK
— Gurdeep Pandher of Yukon (@GurdeepPandher) March 2, 2021
ಕೆನಡಾದ ಗುರುದೀಪ್ ಪಂಡರ್ ಎಂಬುವ ವ್ಯಕ್ತಿ ಕೋವಿಡ್ ಲಸಿಕೆ ಸಿಕ್ಕ ಖುಷಿಯನ್ನು ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ತಾವು ಮಂಜಿನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ನಿನ್ನೆ ನನಗೆ ಕೋವಿಡ್ ವ್ಯಾಕ್ಸಿನ್ ಸಿಕ್ಕಿದೆ. ಅದ್ರಿಂದ ನಾನು ಮಂಜಿನಲ್ಲಿ ಭಾಂಗ್ರಾ ನೃತ್ಯ ಮಾಡುತ್ತಿದ್ದೇನೆ. ಇನ್ಮೇಲೆ ನಾನು ಕೆನಡಾದಲ್ಲಿ ಎಲ್ಲಿ ಬೇಕಾದರೂ ಹೋಗಬಹುದು ಎಂದು ಖುಷಿ ಹಂಚಿಕೊಂಡಿದ್ದಾರೆ.
ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ ವೈರಲ್ ಆಗಿದ್ದು, ಹಲವು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಅಮೆರಿಕಾದ ಒಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದು, ನಾನು ನಿಮ್ಮ ವಿಡಿಯೋವನ್ನು ನೋಡಿದೆ. ಇಡೀ ದಿನ ನಾನು ಅದರ ಗುಂಗಿನಲ್ಲೇ ಇದ್ದೇನೆ. ನೀವು ನನಗೆ ಇಷ್ಟವಾದ ವ್ಯಕ್ತಿ ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.