ಮೂಲ್ಕಿ : ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ; ಕಾರಿನಲ್ಲಿದ್ದವರು ಅಪಾಯದಿಂದ ಪಾರು
Team Udayavani, Feb 8, 2021, 7:45 PM IST
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿಯ ಮೂಲ್ಕಿಯ ಕಾರ್ನಾಡು ಗುಂಡಾಲು ಬಳಿಯ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬರುತ್ತಿರುವಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಣ್ಣೆದುರೆ ಕಾರು ಸುಟ್ಟು ಭಸ್ಮವಾದ ಘಟನೆ ಸೋಮವಾರ ಸಂಜೆ 6.30ರ ಹೊತ್ತಿಗೆ ನಡೆದಿದೆ.
ಮಂಗಳೂರಿನತ್ತಾ ಹೋಗಿ ತಮ್ಮ ಊರಾದ ಮೂಲ್ಕಿ ಯ ಕಾರ್ನಾಡಿನತ್ತಾ ಬರುತ್ತಿದ್ದ ವ್ಯಕ್ತಿಯ ಕಾರಿನ ಬೊನೆಟ್‌ನೊಳಗೆ ದಾರಾಕಾರವಾಗಿ ಹೊಗೆ ಕಾಣಿಸಿಕೊಂಡಗ ಅವರು ತನ್ನ ಮನೆಯವರಿಗೆ ವಿಚಾರ ತಿಳಿಸಿ ಕಾರಿನಿಂದ ಇಳಿದಾಗ ಬಾರಿ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆ ಹರಡಿ ಕಾರು ಕಣ್ಣೆದುರೆ ಸಂಪೂರ್ಣ ಸು ಟ್ಟು ಭಸ್ಮವಾಗಿ ಹೋಯಿತು.
ಕಾರು ಸುಟ್ಟ ನಂತರವೂ ಬೆಂಕಿ ನಂದಿಸಲಾಗದೆ ಹೋದಾಗ ಹಳೆಯಂಗಡಿಯ ಪೂಜಾ ಎರೆಂಜರ್ನವರು ತಮ್ಮ ಉಪಯೋಗದ ನೀರನ್ನು ಬೆಂಕಿನಂದಿಸಲು ಬಳಸಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಮಂಗಳೂರಿನಿಂದ ಅಗ್ನಿ ಶಾಮಕ ದಳದವರು ಧಾವಿಸಿ ಬರುವಷ್ಠರಲ್ಲಿ ಎಲ್ಲವೂ ಮುಗಿದು ಹೋಗಿತ್ತು ಯಾವುದೇ ಸೊತ್ತು ಯಾ ವ್ಯಕ್ತಿಗೆ ಇದರಿಂದ ಹಾನಿ ಉಂಟಾಗಿಲ್ಲ . ಕೆಲ ಹೊತ್ತು ಹೆದ್ದಾರಿಯಲ್ಲಿ ರೆಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು ಸುವ್ಯವಸ್ಥೆಗಾಗಿ ಶ್ರಮಿಸಿದರು.
ಮೂಲ್ಕಿಗೆ ಆದಷ್ಟು ಬೇಗ ಅಗ್ನಿ ಶಾಮಕ ದಳ ಕೊಡಿ
ಮೂಲ್ಕಿಯಲ್ಲಿ ಇಂತಹುದೇ ಹಲವಾರು ಘ ಟನೆಗಳು ನಡೆದಾಗ ಮಂಗಳೂರಿನಿಂದ ದಳದವರು ಬರುವಾಗ ಎಲ್ಲವೂ ಮುಗಿದು ಹೋಗುವುದು ಹೊಸದೇನಲ್ಲ ಆದರೆ ಇಂತಹ ವ್ಯವಸ್ಥೆಗಳ ಬಗ್ಗೆ ಸರಕಾರದ ನಿರ್ಲಕ್ಷ ಯಾಕೆ ಎಂಬ ಪ್ರಶ್ನೆ ಜನರ ಮುಂದಿದೆ.
ಮೂಲ್ಕಿಯ ಕಾರ್ನಾಡು ಕೆಗಾರಿಕಾ ಪ್ರದೇಶ ಬಳಿಯ ಪೆಟ್ರೋಲ್ ಪಂಪ್ ಬಳಿ ಅಗ್ನಿ ಶಾಮಕ ದಳದ ಸ್ಥಾಪನೆಗಾಗಿ ಹಲವಾರು ಇಲಾಖೆಗಳಿಂದ ಪರಿಶೀಲನೆ ಮತ್ತು ಇತರ ಇಲಾಖಾ ಕ್ರಮಗಳು ನಡೆದಿದ್ದರೂ ಸರಕಾರದ ದಿವ್ಯ ನಿರ್ಲಕ್ಷದಿಂದ ಈ ಯೋಜನೆಯ ಬಗ್ಗೆ ಯಾವುದೇ ನಿರ್ಧಾರ ಹೊರ ಬಾರದಿರುವುದು ಜನ ಪ್ರತಿನಿಧಿಗಳು ಮತ್ತು ಸರಕಾರದ ಮೇಲಿನ ವಿಶ್ವಾಸವನ್ನು ಸಾರ್ವಜನಿಕರಲ್ಲಿ ಕಡಿಮೆ ಮಟ್ಟಕ್ಕೆ ಇಳಿಸುವಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಎಂಡಿಎಂಎ ಸಾಗಾಟ: ಮೂವರ ಬಂಧನ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.