ಎರಡು ನದಿಗಳ ಜಲಮಾರ್ಗದಲ್ಲಿ ಸರಕು ಸಾಗಾಟಕ್ಕೆ ಬ್ರೇಕ್!
Team Udayavani, Mar 10, 2021, 6:00 AM IST
ಮಹಾನಗರ: ನೇತ್ರಾವತಿ ಹಾಗೂ ಗುರುಪುರ ನದಿ ಸಹಿತ ರಾಜ್ಯದ 5 ಜಲ ಮಾರ್ಗಗಳಲ್ಲಿ ಸರಕು ಸಾಗಾಣಿಕೆ ಮಾಡುವ ಮಹತ್ವದ ಯೋಜನೆಗೆ “ಆರ್ಥಿಕವಾಗಿ ಲಾಭದಾಯಕವಾಗಿಲ್ಲ’ ಎಂಬ ವರದಿ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ!
ಒಳನಾಡು ಜಲಸಾರಿಗೆ ಇಲಾಖೆಯ ಸದ್ಯದ ಮಾಹಿತಿ ಪ್ರಕಾರ, ಜಲ ಮಾರ್ಗದಲ್ಲಿ ಸರಕು ಸಾಗಾಟ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟು ಅದರ ಬದಲು ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರವು ರಾಜ್ಯದಲ್ಲಿ 11 ರಾಷ್ಟ್ರೀಯ ಒಳನಾಡು ಜಲಮಾರ್ಗಗಳನ್ನು ಈಗಾಗಲೇ ಘೋಷಿಸಿದೆ.ಈ 11 ಜಲಮಾರ್ಗಗಳ ಪೈಕಿ 5 ರಾಷ್ಟ್ರೀಯ ಒಳನಾಡು ಜಲಮಾರ್ಗಗಳಾದ ಗುರುಪುರ, ನೇತ್ರಾವತಿ ಸಹಿತ ಕಬಿನಿ, ಕಾಳಿ, ಶರಾವತಿ ನದಿಗಳನ್ನು ಸರಕು ಸಾಗಾಣಿಕೆಗಾಗಿ ಅಭಿವೃದ್ಧಿಪಡಿಸಲು 2016-17ನೇ ಸಾಲಿನಲ್ಲಿ “ಇನ್ ಲ್ಯಾಂಡ್ ವಾಟರ್‌ವೆಯ್ಸ ಅಥಾರಿಟಿ ಆಫ್ ಇಂಡಿಯಾ (ಐಡಬ್ಲ್ಯುಎಐ)’ ವಿಸ್ತೃತ ಯೋಜನ ವರದಿ ಸಲ್ಲಿಸಿದೆ. ಆದರೆ ಸರಕು ಸಾಗಾಣೆಗೆ ಗುರುಪುರ, ನೇತ್ರಾವತಿ ಸಹಿತ 5 ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಆರ್ಥಿಕ ವಾಗಿ ಲಾಭದಾಯಕವಾಗಿಲ್ಲ ಎಂಬ ವರದಿಯನ್ನು ಸಂಸ್ಥೆ ನೀಡಿದೆ.
ಹೀಗಾಗಿ, ಸರಕು ಸಾಗಾಟ ಯೋಜನೆ ಕೈಬಿಟ್ಟು ಈ ಜಲಮಾರ್ಗಗಳಲ್ಲಿ ಪ್ರವಾ ಸೋ ದ್ಯಮ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸರಕಾರ ತೀರ್ಮಾನಿಸಿದೆ. ಇದಕ್ಕೆ ಒಟ್ಟು 59.90 ಕೋ.ರೂ. ವೆಚ್ಚದಲ್ಲಿ ಯೋಜನೆ ರೂಪಿಸಲು ಉದ್ದೇಶಿಸಿದೆ. ಇದನ್ನು ಯಾವ ರೀತಿಯಲ್ಲಿ ಬಳಕೆ ಮಾಡಬಹುದು ಎಂಬ ಕುರಿತ ಅಂತಿಮ ವರದಿ ಇನ್ನಷ್ಟೇ ಆಗಬೇಕಿದೆ.
ಏನಿದು ಜಲಮಾರ್ಗಗಳು?
ಒಳನಾಡು ಜಲಸಾರಿಗೆ ಮೂಲಕ ನದಿಗಳಲ್ಲಿ ನೌಕಾ ಸೇವೆ ಮೂಲಕ ಸಂಚಾರ, ಸಾಗಾಟ ಉತ್ತೇಜಿಸಲು ರಾಷ್ಟ್ರೀಯ ಜಲಮಾರ್ಗ ಕಲ್ಪನೆ ಹುಟ್ಟಿಕೊಂಡಿದೆ. ಭಾರತದಲ್ಲಿ ಮೊದಲು ಇದ್ದದ್ದು ಕೇವಲ 5 ರಾಷ್ಟ್ರೀಯ ಜಲಮಾರ್ಗಗಳು. 2016ರಲ್ಲಿ ರಾಷ್ಟ್ರೀಯ ಜಲಮಾರ್ಗ ವಿಧೇಯಕದಲ್ಲಿ 106 ನದಿಗಳನ್ನು ಕೇಂದ್ರ ಸರಕಾರ ಸೇರಿಸಿತು. ಹೀಗಾಗಿ ದೇಶದ ಒಟ್ಟು ರಾಷ್ಟ್ರೀಯ ಜಲಮಾರ್ಗಗಳ ಸಂಖ್ಯೆ 111ಕ್ಕೆ ಏರಿಕೆ ಆಗಿತ್ತು. ಅದರಲ್ಲಿ ಕರ್ನಾಟಕದ 11 ರಾಷ್ಟ್ರೀಯ ಜಲಮಾರ್ಗಗಳಿವೆ.
ನದಿಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಾವೆಗಳ ಮೂಲಕ ಪ್ರಯಾಣಿಕರ ಸಾಗಾಟ ಹಾಗೂ ನೌಕಾ ಚಟುವಟಿಕೆಗಳ ಮೂಲಕ ಸರಕು ಸಾಗಾಟಕ್ಕೆ ಅವಕಾಶ ನಿರೀಕ್ಷಿಸಲಾಗಿತ್ತು. ರಸ್ತೆ ಸಂಚಾರಕ್ಕೆ ಹೋಲಿಕೆ ಮಾಡಿದರೆ ಜಲಮಾರ್ಗದ ಸಂಚಾರ ತುಂಬಾ ಅಗ್ಗವಾಗಲಿದೆ. ಈವರೆಗೆ ರಾಜ್ಯದಲ್ಲಿ ನದಿಯ ಒಂದು ದಡದಿಂದ ಮತ್ತೂಂದು ದಂಡೆಗೆ ಹೋಗಲು ಕೆಲವು ಕಡೆಗಳಲ್ಲಿ “ಕಡವು ಸೇವೆ’ ಮಾತ್ರ ಇತ್ತು. ಆದರೆ ಜಲಮಾರ್ಗದ ವ್ಯವಸ್ಥೆ ಇರಲಿಲ್ಲ.
ಮಂಗಳೂರು-ಪಣಜಿ; ಹೊಸ ಜಲಮಾರ್ಗ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿರುವ ಬಜೆಟ್‌ನಲ್ಲಿ ಮಂಗಳೂರು-ಪಣಜಿ ನಡುವೆ ಜಲಮಾರ್ಗಗಳ ಅಭಿವೃದ್ಧಿ ಬಗ್ಗೆ ಉಲ್ಲೇಖೀಸಿದ್ದಾರೆ. ಈ ಮೂಲಕ ಎರಡೂ ನಗರಗಳ ನಡುವೆ ವ್ಯಾಪಾರ ವಹಿವಾಟು ಬೆಳೆಸುವ ಉದ್ದೇಶದ ಬಗ್ಗೆ ಪ್ರಸ್ತಾವಿಸಿದ್ದಾರೆ. ಇದು ಯಾವ ರೀತಿಯಿಂದ ಜಾರಿಯಾಗಲಿದೆ ಎಂಬ ಬಗ್ಗೆ ಸದ್ಯ ಇಲಾಖೆಯಲ್ಲಿ ಮಾಹಿತಿಯಿಲ್ಲ. ಒಂದು ವೇಳೆ ಯೋಜನೆಯು ಸಾಕಾರವಾದರೆ ಕರಾವಳಿಯ ಆರ್ಥಿಕ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗುತ್ತಿದೆ.
60 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ
ಕೇಂದ್ರ ಸರಕಾರದ ರಾಷ್ಟ್ರೀಯ ಜಲಮಾರ್ಗಗಳ ಪ್ರಾಧಿಕಾರದ ಧನಸಹಾಯದೊಂದಿಗೆ ಒಟ್ಟು 60 ಕೋ.ರೂ. ವೆಚ್ಚದಲ್ಲಿ ಐದು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿ ಸರಕು ಸಾಗಾಟ ಪರಿಕಲ್ಪನೆಯ ಬದಲಿಗೆ ಪ್ರವಾಸೋದ್ಯಮ ಅಭಿವೃದ್ಧಿ ನೆಲೆಯಲ್ಲಿ ಸದ್ಯಕ್ಕೆ ಯೋಜನೆ ರೂಪಿಸಲಾಗುವುದು.
-ಕ್ಯಾ| ಸ್ವಾಮಿ, ನಿರ್ದೇಶಕರು, ಬಂದರು ಇಲಾಖೆ
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.