ಆಂಧ್ರ CM ಪೋಸ್ಟರ್ ಹರಿದ ನಾಯಿ ಮೇಲೆಯೇ ಕೇಸ್ !
Team Udayavani, Apr 13, 2023, 7:25 PM IST
ವಿಜಯವಾಡ: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಹರಿದ ಕಾರಣಕ್ಕೆ ನಾಯಿಯೊಂದರ ಮೇಲೆಯೇ ಕೇಸ್ ಹಾಕಿದ ಅಪರೂಪದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಮನೆಯೊಂದರ ಗೋಡೆಯ ಮೇಲೆ ಅಂಟಿಸಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಒಂದನ್ನು ನಾಯಿ ತನ್ನ ಬಾಯಿಯಿಂದ ಕಚ್ಚಿ ಹರಿದಿತ್ತು. ಈ ಪೋಸ್ಟರ್ ಮೇಲೆ ʻಜಗನಣ್ಣ ಮಾ ಭವಿಷ್ಯತುʼ (ಜಗನ್ ಆಣ್ಣ ನಮ್ಮ ಭವಿಷ್ಯ) ಎಂದು ಬರೆಯಲಾಗಿತ್ತು.
ನಾಯಿಯೊಂದು ಈ ಪೋಸ್ಟರ್ ಅನ್ನು ಬಾಯಿಯಿಂದ ಕಚ್ಚಿ ಹರಿಯುತ್ತಿರುವುದನ್ನು ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿದ್ದರು. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೂ ಅಲ್ಲದೇ ಭಾರೀ ಟ್ರೋಲ್ ಕೂಡಾ ಆಗಿತ್ತು.
ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಯಿ ಮೇಲೆಯೇ ಕೇಸ್ ದಾಖಲಾಗಿದೆ. “ತೆಲುಗು ದೇಶಂ ಪಕ್ಷ”ದ ಕಾರ್ಯಕರ್ತೆಯಾಗಿರುವ ದಾಸರಿ ಉದಯಶ್ರೀ ಎಂಬ ಮಹಿಳೆಯೊಬ್ಬರು ವಿಜಯವಾಡ ಪೋಲಿಸ್ ಠಾಣೆಯಲ್ಲಿ ನಾಯಿ ಮೇಲೆಯೇ ದೂರು ನೀಡಿದ್ದಾರೆ ಎನ್ನಲಾಗಿದೆ.
ದೂರು ನೀಡಿದ ಬಳಿಕ ಮಾತನಾಡಿದ ದಾಸರಿ ಉದಯಶ್ರೀ,ʼಜಗನ್ ಅವರ ಪಕ್ಷವು 151 ಸ್ಥಾನಗಳನ್ನು ಗೆದ್ದಿದೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅತ್ಯಂತ ಗೌರವಯುತ ಸ್ಥಾನದಲ್ಲಿದ್ದಾರೆ. ಈ ಪ್ರಕರಣದ ಬೆನ್ನಿಗಿರುವವರನ್ನು ಮತ್ತು ನಾಯಿಯನ್ನು ತಕ್ಷಣ ಬಂಧಿಸಬೇಕುʼ ಎಂದು ಅವರು ಹೇಳಿದ್ದಾರೆ.
Bizarre! A complaint was lodged after a video of a dog removing the #JagananneMaaBhavishyathu sticker from a wall reportedly in Vijayawada went viral on social media. Police have launched an investigation to find out the dog and its owner. #AndhraPradesh #AndhraPolitics pic.twitter.com/zdhMcvyDYk
— Ashish (@KP_Aashish) April 13, 2023
ಇದಕ್ಕೆ ಪ್ರತಿಕೃಯಿಸಿರುವ ಕೆಲವರು, ಜಗನ್ ಅವರನ್ನು ವಗ್ಯ ಮಾಡುವುದಕ್ಕಾಗಿಯೇ ಪ್ರತಿಪಕ್ಷದವರು ದಾಸರಿ ಮೂಲಕ ಇದನ್ನು ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಮೊಮ್ಮಗನ ಮದುವೆಯಲ್ಲಿ 96 ವರ್ಷದ ಅಜ್ಜನ ಭರ್ಜರಿ ನೃತ್ಯ: ಫಿದಾ ಆದ ನೆಟ್ಟಿಗರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.