3 ಪಿಕಪ್ ವಾಹನಗಳಲ್ಲಿ ಜಾನುವಾರು ಸಾಗಾಟ- 8 ಜಾನುವಾರು ಸಹಿತ ನಾಲ್ವರು ವಶಕ್ಕೆ
Team Udayavani, Jul 14, 2023, 5:57 AM IST
ಬೆಳ್ತಂಗಡಿ: ಕನ್ಯಾಡಿ ಸಮೀಪ ಮೂರು ಪಿಕಪ್ ವಾಹನಗಳಲ್ಲಿ ಜಾನುವಾರು ಸಾಗಾಟದ ಪ್ರಕರಣವನ್ನು ಪತ್ತೆಹಚ್ಚಿದ ಧರ್ಮಸ್ಥಳ ಪೊಲೀಸರು 8 ಜಾನುವಾರು, ವಾಹನ ಸಹಿತ ನಾಲ್ವರನ್ನು ಜು. 12ರಂದು ವಶಪಡಿಸಿಕೊಂಡಿದ್ದಾರೆ.
ಹಾಸನದ ಅರಕಲಗೂಡು ಮರವಳಾಲು ನಿವಾಸಿ ಚೆನ್ನಕೇಶವ, ನಾವೂರು ಗ್ರಾಮದ ಒಳಗದ್ದೆ ನಿವಾಸಿ ಪುಷ್ಪರಾಜ, ನಾವೂರು ಮೋರ್ತಾಜೆ ನಿವಾಸಿ ಪ್ರಮೋದ್ ಸಾಲ್ಯಾನ್, ಹಾಸನ ಹೊಳೆನರಸೀಪುರ ಹಿರೇಬೆಳಗುಲಿ ನಿವಾಸಿ ಸಂದೀಪ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಧರ್ಮಸ್ಥಳ ಗ್ರಾಮದ ಕನ್ಯಾಡಿ ಬಳಿ ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ನೆತೃತ್ವದಲ್ಲಿ ಬುಧವಾರ ರಾತ್ರಿ ಸಿಕ್ಕ ಖಚಿತ ಮಾಹಿತಿಯಂತೆ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಪಿಕಪ್ ವಾಹನಗಳನ್ನು ವಶಕ್ಕೆ ಪಡೆದಾಗ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತು.
ವಾಹನದಲ್ಲಿದ್ದ ಚೆನ್ನಕೇಶವ ಎಂಬಾತನನ್ನು ವಿಚಾರಿಸಿದಾಗ ಮಾರಾಟ ಮಾಡುವ ಉದ್ದೇಶ ದಿಂದ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿ ರುವುದಾಗಿ ತಿಳಿಸಿದ್ದಾನೆ. ಸ್ವಾಧೀನ ಪಡಿಸಿರುವ ಜಾನುವಾರುಗಳ ಅಂದಾಜು ಮೌಲ್ಯ 65,000 ರೂ. ಹಾಗೂ ವಾಹನದ ಮೌಲ್ಯ 7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.