![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 5, 2023, 7:44 AM IST
ಇಂಫಾಲ್: ಸಂಘರ್ಷ ಪೀಡಿತ ಮಣಿಪುರವನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ರೂಪಿಸಿದ್ದ ಗವರ್ನರ್ ನೇತೃತ್ವದ ಸಮಿತಿಯನ್ನು ಸ್ಥಳೀಯ ಜನಾಂಗೀಯ ಗುಂಪುಗಳು ವಿರೋಧಿಸಿದ ಬೆನ್ನಲ್ಲೇ, ಮಣಿಪುರ ಸಮಸ್ಯೆ ಶಮನಗೊಳಿಸಲು ಖುದ್ದು ಕೇಂದ್ರ ಸರ್ಕಾರವೇ ಮುಂದಾಗಿದ್ದು, ಕುಕಿ ಹಾಗೂ ಮೈತೇಯಿ ಜನಾಂಗದ ಜತೆಗೆ ಹಿಂಬಾಗಿಲ ಮಾತುಕತೆ ನಡೆಸಿದೆ.
ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಸರ್ಕಾರ ನಡೆಸಿರುವ ಈ ಹಿಂಬಾಗಿಲ ಮಾತುಕತೆ ಅಲ್ಪ ಪ್ರಮಾಣದ ಯಶಸ್ಸಿಗೆ ಕಾರಣವಾಗಿದೆ. ಈ ಮಾತುಕತೆಯ ಬಳಿಕವೇ ರಾಷ್ಟ್ರೀಯ ಹೆದ್ದಾರಿ 2ನ್ನು ಅಡ್ಡಗಟ್ಟಿದ್ದ ಕುಕಿ ಜನರು ಅಲ್ಲಿಂದ ಹೊರ ನಡೆದಿದ್ದಾರೆ. ಈಗ ಮೈತೇಯಿ ಸಮುದಾಯದ ಜತೆಗೆ ಮುಖಾಮುಖೀ ಮಾತುಕತೆಯನ್ನು ನಿರೀಕ್ಷಿಸಲಾಗಿದೆ. ಶೀಘ್ರವೇ ಮಣಿಪುರದ ಆಂತರಿಕ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಸ್ತ್ರಾಸ್ತ್ರ ಲೂಟಿಯೇ ಸವಾಲು
ರಾಜ್ಯದಲ್ಲಿ ಗಲಭೆ ಶುರುವಾದಗಿನಿಂದ ಭದ್ರತಾ ಪಡೆಗಳ ಶಸ್ತ್ರಾಗಾರಗಳಿಂದ ಶಸ್ತ್ರಾಸ್ತ್ರಗಳನ್ನು ಗಲಭೆ ಗುಂಪುಗಳು ದೋಚಿವೆ. ಮೇ.3ರಿಂದ ಈ ವರೆಗೆ 5,000 ಶಸ್ತ್ರಾಸ್ತ್ರಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ತೌಬಾಲ್ ಜಿಲ್ಲೆಯಲ್ಲಿ ಮಂಗಳವಾರವೂ ಶಸ್ತ್ರಾಸ್ತ್ರ ಲೂಟಿಗೆ ಗುಂಪುಗಳು ಮುಂದಾಗಿದ್ದು, ಅದನ್ನು ತಪ್ಪಿಸುವ ಭದ್ರತಾ ಪಡೆಗಳ ಪ್ರಯತ್ನದಲ್ಲಿ ದುಷ್ಕರ್ಮಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.