ಕೇಂದ್ರ v/s ಟ್ವಿಟರ್: ನೂತನ ಕಾಯ್ದೆ-ಕೇಂದ್ರದಿಂದ ಟ್ವಿಟರ್ ಗೆ ಕೊನೆಯ ಎಚ್ಚರಿಕೆ ನೋಟಿಸ್
ಟ್ವಿಟರ್ ಸಂಸ್ಥೆ ಈ ಕಾಯ್ದೆಯನ್ನು ಪಾಲಿಸಲು ನಿರಾಕರಿಸಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
Team Udayavani, Jun 5, 2021, 3:32 PM IST
ನವದೆಹಲಿ: ನೂತನ ಮಾಹಿತಿ ತಂತ್ರಜ್ಞಾನ(ಐಟಿ) ನಿಯಮಗಳ ಪಾಲನೆ ಕುರಿತಂತೆ ಕೇಂದ್ರ ಸರ್ಕಾರ ಶನಿವಾರ(ಜೂನ್ 05) ಅಂತಿಮ ನೋಟಿಸ್ ಅನ್ನು ಜಾರಿಗೊಳಿಸಿದೆ.
ಇದನ್ನೂ ಓದಿ:ಕೆಕೆಆರ್ ತಂಡಕ್ಕೆ ಮತ್ತೆ ದಿನೇಶ್ ಕಾರ್ತಿಕ್ ನಾಯಕತ್ವ? ಸುಳಿವು ಬಿಚ್ಚಿಟ್ಟ ವಿಕೆಟ್ ಕೀಪರ್
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ) ಹಂಚಿಕೊಂಡಿರುವ ಪತ್ರದ ಸಾರಾಂಶದ ಪ್ರಕಾರ, ನೂತನ ಐಟಿ ನಿಯಮ ಪಾಲಿಸಲು ಟ್ವಿಟರ್ ನಿರಾಕರಿಸಿರುವುದು ಮೈಕ್ರೋಬ್ಲಾಗಿಂಗ್ ಸೈಟ್ ನ ಬದ್ಧತೆಯ ಕೊರತೆಯಾಗಿದೆ. ಅಲ್ಲದೇ ನೂತನ ಕಾಯ್ದೆಯನ್ನು ಪಾಲಿಸುವ ಬಗ್ಗೆ ಟ್ವಿಟರ್ ಯಾವುದೇ ವಿವರವನ್ನು ಹಂಚಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2020ರಲ್ಲಿ ಟ್ವಿಟರ್ ನ ಡೆಪ್ಯುಟಿ ಜನರ್ ಸಲಹೆಗಾರರಾಗಿ ನೇಮಕಗೊಂಡಿರುವ ಜಿಮ್ ಬೇಕರ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ವರದಿ ಹೇಳಿದೆ. ನೂತನ ಕಾಯ್ದೆಯ ಪ್ರಕಾರ ಟ್ವಿಟರ್ ಸಂಸ್ಥೆ ನಾಮನಿರ್ದೇಶನ ಮಾಡಿರುವ ರೆಸಿಡೆಂಟ್ ಅಧಿಕಾರಿ ಮತ್ತು ನೋಡಲ್ ಕಾಂಟ್ಯಾಕ್ಟ್ ಪರ್ಸನ್ ಟ್ವಿಟರ್ ಸಂಸ್ಥೆಯ ಉದ್ಯೋಗಿಗಳಲ್ಲ. ಅಲ್ಲದೇ ಅವರು ನೀಡಿರುವ ಕಚೇರಿ ವಿಳಾಸ ಕೂಡಾ ಟ್ವಿಟರ್ ಸಂಸ್ಥೆಯದ್ದಲ್ಲ, ಇದು ಭಾರತದ ಐಟಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.
ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ನೂತನ ಐಟಿ ಕಾಯ್ದೆ 2021ರ ಮೇ 26ರಂದು ಜಾರಿಗೆ ಬಂದಿತ್ತು. ನೂತನ ಕಾಯ್ದೆ ಅನುಷ್ಠಾನಗೊಂಡು ಒಂದು ವಾರದ ನಂತರವೂ ಟ್ವಿಟರ್ ಸಂಸ್ಥೆ ಈ ಕಾಯ್ದೆಯನ್ನು ಪಾಲಿಸಲು ನಿರಾಕರಿಸಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಟ್ವಿಟರ್ ಸಂಸ್ಥೆ ನೂತನ ಕಾಯ್ದೆಯನ್ನು ಪಾಲಿಸಲು ನಿರಾಕರಿಸಿದರೆ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ 2020ರ ಸೆಕ್ಷನ್ 79ರ ಪ್ರಕಾರ ಹೊಣೆಗಾರಿಕೆಯಿಂದ ನೀಡಲಾಗುವ ವಿನಾಯ್ತಿಯನ್ನು ಟ್ವಿಟರ್ ಕಳೆದುಕೊಳ್ಳಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.