ವಿಳಾಸ ಕೇಳುವ ನೆಪದಲ್ಲಿ ಪಂಚಾಯತ್ ಮಾಜಿ ಸದಸ್ಯೆಯ ಕರಿಮಣಿ ಕಿತ್ತು ಪರಾರಿಯಾದ ಸರಗಳ್ಳರು
Team Udayavani, Dec 9, 2020, 6:22 PM IST
ಹಳೆಯಂಗಡಿ : ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯತ್ನ ಮಾಜಿ ಸದಸ್ಯೆ ಕುಸುಮಾ ಅವರ ಕುತ್ತಿಗೆಯಿಂದ ಅಪರಿಚಿತರಿಬ್ಬರು ಬೈಕ್ನಲ್ಲಿ ಬಂದು ಚಿನ್ನದ ಕರಿಯಮಣಿ ಸರವನ್ನು ಸೆಳೆದು ಪರಾರಿಯಾದ ಘಟನೆ ಬುಧವಾರ ನಡೆದಿದೆ.
ಕುಸುಮಾ ಅವರು ಕಲ್ಲಾಪುವಿನ ತನ್ನ ಮನೆಯಿಂದ ಪಡುಪಣಂಬೂರು ಗ್ರಾಮ ಪಂಚಾಯತ್ಗೆ ಒಳ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಬೈಕ್ನಲ್ಲಿ ಇಬ್ಬರು ಬಂದು ವಿಳಾಸವನ್ನು ಕೇಳಿದ್ದಾರೆ. ವಿಳಾಸ ಹೇಳುವಾಗಲೇ ಹಿಂದೆ ಕುಳಿತಿದ್ದ ಸಹ ಸವಾರ ಕುಸುಮಾ ಅವರ ಕುತ್ತಿಗೆಯಲ್ಲಿದ್ದ 4.5 ಪವನ್ನ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.
ಘಟನೆ ಕುರಿತು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕೃಷಿ ಕಾಯ್ದೆ- ಕೇಂದ್ರದ ಆಫರ್ ತಿರಸ್ಕರಿಸಿದ ರೈತರು: ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.