ಚಾಮರಾಜನಗರ ಕೋವಿಡ್ ಸೋಂಕಿಗೆ ಮೂವರು ಸಾವು! 30 ಹೊಸ ಪ್ರಕರಣ ಪತ್ತೆ
Team Udayavani, Aug 24, 2020, 6:40 PM IST
ಚಾಮರಾಜನಗರ: ಸೋಮವಾರ ಜಿಲ್ಲಾಡಳಿತ ನೀಡಿರುವ ವರದಿಯಂತೆ ಜಿಲ್ಲೆಯಲ್ಲಿ ಮೂವರು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. 30 ಹೊಸ ಪ್ರಕರಣಗಳು ಪತ್ತೆಯಾಗಿವೆ. 15 ಮಂದಿ ಗುಣಮುಖರಾಗಿದ್ದಾರೆ. 468 ಸಕ್ರಿಯ ಪ್ರಕರಣಗಳಿವೆ.
ಚಾಮರಾಜನಗರದ 65 ವರ್ಷದ ಮಹಿಳೆ ಹಾಗೂ 60 ವರ್ಷದ ಮಹಿಳೆ ಆ. 23ರಂದು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಳ್ಳೇಗಾಲ ಪಟ್ಟಣದ 70 ವರ್ಷದ ಮಹಿಳೆ ಹೃದಯಾಘಾತದಿಂದ ಆ. 22 ರಂದು ಮೃತಪಟ್ಟಿದ್ದು, ನಿಧನದ ನಂತರ ಪರೀಕ್ಷಿಸಿದಾಗ ಕೋವಿಡ್ ದೃಢಪಟ್ಟಿದೆ.
ಸೋಮವಾರ 379 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 300 ಆರ್‌ಟಿಪಿಸಿಆರ್ ಹಾಗೂ 75 ರ್ಯಾಪಿಡ್ ಆ್ಯಂಟಿಜೆನ್, 5 ಟ್ರೂನ್ಯಾಟ್ ಪರೀಕ್ಷೆಗಳು. 349 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.
ಜಿಲ್ಲೆಯಲ್ಲಿ ಒಟ್ಟು 2069 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 1562 ಮಂದಿ ಗುಣಮುಖರಾಗಿದ್ದಾರೆ. 24 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 214 ಮಂದಿ ಹೋಂ ಐಸೋಲೇಷನಲ್ಲಿದ್ದಾರೆ.
ಇಂದಿನ ಪ್ರಕರಣಗಳು-30
ಇಂದು ಗುಣಮುಖ-15
ಒಟ್ಟು ಗುಣಮುಖ-1562
ಇಂದಿನ ಸಾವು-03
ಒಟ್ಟು ಸಾವು-39
ಸಕ್ರಿಯ ಪ್ರಕರಣಗಳು-468
ಒಟ್ಟು ಸೋಂಕಿತರು-2069
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.